Karnataka Times
Trending Stories, Viral News, Gossips & Everything in Kannada

Fixed Deposit: ಎಫ್ ಡಿ ಠೇವಣಿದಾರರಿಗೆ ಸಿಹಿ ಸುದ್ದಿ, ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟಾಗಲಿದೆ ಹಣ! ಹೇಗೆ ಗೊತ್ತಾ?

Advertisement

ನಿಶ್ಚಿತ ಠೇವಣಿ ಉಳಿತಾಯಕ್ಕಾಗಿ ಬ್ಯಾಂಕ್ ನಲ್ಲಿ FD ಇಡುವುದು ಉತ್ತಮ ಆಯ್ಕೆಯಾಗಿದೆ. ನೀವು ಕೂಡ ನಿಮ್ಮ ನಿಶ್ಚಿತ ಠೇವಣಿ ಮೂಲಕ ಉಳಿತಾಯ ಮಾಡಲು ಯೋಚಿಸಿದ್ದ ಇದು ಸರಿಯಾದ ಸಮಯ. ಯಾಕೆಂದರೆ ಕೆಲವೇ ತಿಂಗಳುಗಳಲ್ಲಿ ನಿಮ್ಮ ಹಣ ದ್ವಿಗುಣಗೊಳಿಸಿಕೊಳ್ಳಬಹುದು. ಹೇಗೆ ಅಂತೀರಾ?! ಇದೀಗ ಸರ್ಕಾರಿ ಬ್ಯಾಂಕ್ ಮಾತ್ರವಲ್ಲದೆ ಅನೇಕ ಸಣ್ಣ ಹಣಕಾಸಿನ ಸಂಸ್ಥೆಗಳು ಕೂಡ ಎಫ್ ಡಿ ಮೇಲೆ ಅತಿ ಹೆಚ್ಚಿನ ರಿಟರ್ನ್ಸ್ ನೀಡುತ್ತಿವೆ.

RBI Repo Rate ದಲ್ಲಿ ಹೆಚ್ಚಳ:

ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಆರ್ ಬಿ ಐ ತನ್ನ Repo Rate ವನ್ನು ಫೆಬ್ರುವರಿ ಮೊದಲ ವಾರದಲ್ಲಿ ಹೆಚ್ಚಿಸಿದ್ದು, ಇದರಿಂದ ಅನೇಕ ಬ್ಯಾಂಕ್ಗಳು ಸಾಲದ ಮೇಲಿನ ಬಡ್ಡಿ ಹೆಚ್ಚಿಸಿದವು. ಜೊತೆಗೆ ಹಲವು ಬ್ಯಾಂಕ್ ಗಳು ಎಫ್ ಡಿ ಮೇಲಿನ ದರವನ್ನು ಕೂಡ ಹೆಚ್ಚಿಸಿವೆ. ಹಾಗಾಗಿ ನೀವು ಬ್ಯಾಂಕ್ಗಳಲ್ಲಿ ಎಫ್ ಡಿ ಇಡಲು ಯೋಚನೆ ಮಾಡಿದರೆ ಉತ್ತಮ ಆದಾಯ ಪಡೆಯುತ್ತೀರಿ. ಕೆಲವು ಬ್ಯಾಂಕ್ಗಳು ಶೇಕಡಾ 9ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿವೆ. ಹಾಗಾದ್ರೆ ಯಾವ ಬ್ಯಾಂಕ್ Fixed Deposit ಯ ಮೇಲೆ ಅತ್ಯುತ್ತಮ ಬಡ್ಡಿ ಹಾಗೂ ಇತರ ಪ್ರಯೋಜನಗಳನ್ನು ನೀಡುತ್ತಿವೆ ನೋಡೋಣ ಬನ್ನಿ.

Unity Small Finance Bank:

ಇತರ ಬ್ಯಾಂಕ್ಗಳಿಗೆ ಹೋಲಿಸಿದರೆ Fixed Deposit ಮೇಲೆ ಹೆಚ್ಚಿನ ಬಡ್ಡಿ ದರವನ್ನು ಈ ಬ್ಯಾಂಕ್ ಘೋಷಿಸಿದೆ. 101 ದಿನಗಳ ಎಫ್ ಡಿ ಮೇಲೆ ಶೇಕಡಾ9 ರಷ್ಟು ಬಡ್ಡಿ ದರವನ್ನು ಸಾಮಾನ್ಯ ಠೇವಣಿದಾರರಿಗೆ ನೀಡಲಾಗುತ್ತದೆ ಅದೇ ರೀತಿ ಹಿರಿಯ ನಾಗರಿಕರಿಗೆ 9.50% ವರೆಗೂ ಬಡ್ಡಿ ಸಿಗುತ್ತದೆ.

Utkarsh Small Finance Bank:

ಈ ಬ್ಯಾಂಕ್ ಕೂಡ ಸ್ಥಿರ ಠೇವಣಿ ಮೇಲೆ ಬಡ್ಡಿ ದರವನ್ನು ಹೆಚ್ಚಿಸಿದ್ದು ಸಾಮಾನ್ಯ ಗ್ರಾಹಕರಿಗೆ 101 ದಿನಗಳ ಎಫ್‌ಡಿ ಠೇವಣಿ ಮೇಲೆ 8% ಹಾಗೂ ಹಿರಿಯ ನಾಗರಿಕರಿಗೆ 8.75% ಬಡ್ಡಿಯನ್ನು ನೀಡುತ್ತದೆ.

North East Small Finance Bank:

101 ದಿನಗಳ ಸ್ಥಿರ ಠೇವಣಿ ಮೇಲೆ ಈ ಬ್ಯಾಂಕ್ ಸಾಮಾನ್ಯ ಠೇವಣಿದಾರನಿಗೆ 8% ಹಾಗೂ ಹಿರಿಯ ಠೇವಣಿದಾರರಿಗೆ 8.75% ಬಡ್ಡಿಯನ್ನು ಘೋಷಿಸಿದೆ.

Ujjivan Small Finance Bank:

ಈ ಸಣ್ಣ ಹಣಕಾಸು ಸಂಸ್ಥೆಯಲ್ಲಿಯೂ ಕೂಡ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ 101 ದಿನಗಳ ಸ್ಥಿರ ಠೇವಣಿಯ ಮೇಲೆ 8.75% ಬಡ್ಡಿ ಸಿಗುತ್ತದೆ. ಇದೇ ಅವಧಿಗೆ ಸಾಮಾನ್ಯ ಠೇವಣಿದಾರರಿಗೆ 8% ಬಡ್ಡಿ ನೀಡುತ್ತಿದೆ ಉಜ್ಜೀವನ್ ಫೈನಾನ್ಸ್ ಬ್ಯಾಂಕ್.

Leave A Reply

Your email address will not be published.