Karnataka Times
Trending Stories, Viral News, Gossips & Everything in Kannada

Bank Cyber Crime: HDFC ಹಾಗೂ SBI ಬ್ಯಾಂಕಿನಲ್ಲಿ ಹಣ ಇಟ್ಟವರಿಗೆ ಕೇಂದ್ರದ ಮಹತ್ವದ ಸೂಚನೆ

ಡಿಜಿಟಲ್‌ ಕ್ರಾಂತಿಯಿಂದ ಜನರಿಗೆಲ್ಲಾ ಅನುಕೂಲವಾಗಿದೆ. ಆದರೆ ಕೆಲವರು ಮಾತ್ರ ಈ ಟೆಕ್ನಾಲಜಿಯನ್ನು ದುರುಪಯೋಗ ಪಡಿಸಿಕೊಂಡು ಸೈಬರ್‌ ಕ್ರೈಮ್‌(Cyber Crime) ಮಾಡುತ್ತಿದ್ದಾರೆ. ಹೌದು ನಾವು ಜೀವಿಸುತ್ತಿರುವ ಈ ಯುಗವನ್ನು ಡಿಜಿಟಲ್‌(Digital) ಯುಗ ಎಂದು ಕರೆದರೆ ತಪ್ಪಾಗಲಾರದು, ಹಣ ವರ್ಗಾವಣೆಗೆ ಅಥವಾ ಆರ್ಥಿಕ ಚಟುವಟಿಕೆಗಳಿಗಾಗಿ ನಾವು ನಗದಿಗಿಂದ ಹೆಚ್ಚಾಗಿ ಡಿಜಿಟಲ್‌ ಪಾವತಿ ಮಾಡುತ್ತೇವೆ. ಎಲ್ಲರೂ ಕೂಡಾ ನಗದು ರಹಿತ ಜೀವನದತ್ತ ಮುಖ ಮಾಡುತ್ತಿದ್ದಾರೆ.ನಗದು ರಹಿತ ವ್ಯವಹದಿಂದಾಗಿ ಜನರಿಗೆ ಅನುಕೂಲಗಿರುವುದು ಎಷ್ಟು ನಿಜವೋ , ಈ ಡಿಜಿಟಲ್‌ ಪೇಮೆಂಟ್‌ ಬಂದ ನಂತರ ಹಣವನ್ನು ದರೋಡೆ ಹೆಚ್ಚಾಗಿರುವುದು ಅಷ್ಟೆ ನಿಜ. ಇದರಿಂದ ಡಿಜಿಟಲ್ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಾಗ್ತಿದೆ..

Advertisement

ಪ್ರಪಂಚದಾದ್ಯಂತ ಸೈಬರ್ ವಂಚನೆ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿದೆ. ಬ್ಯಾಂಕಿಂಗ್(Banking) ಅಥವಾ ಡಿಜಿಟಲ್ ಪಾವತಿಗಳ ವಂಚನೆಯ ಪ್ರಕರಣಗಳನ್ನು ನಾವು ದಿನಂಪ್ರತಿ ನೋಡುತ್ತಿದ್ದರು ಕೂಡಾ ವಂಚನೆಗೆ ಒಳಗಾಗುತ್ತಿದ್ದೇವೆ.ಸೈಬರ್‌ ಕಳ್ಳರು ಜನರಿಂದ ಹಣ ಲೂಟಿಗೆ ಕಳ್ಳರ ನಾನಾ ಟ್ರಿಕ್ ಗಳನ್ನ ಬಳಸುತ್ತಿದ್ದಾರೆ.ಫಾರ್ವರ್ಡ್ ಮೆಸೇಜ್ ಗಳು(Forward Messages) ವಿಶೇಷವಾಗಿ ಬ್ಯಾಂಕ್ ಮೆಸೇಜ್ ಗಳ ರೀತಿ ಮೆಸೇಜ್‌ ಕಳುಹಿಸಿ ಖಾತಗೆ ಕನ್ನ ಹಾಕುತ್ತಿದ್ದಾರೆ.

Advertisement

ಬ್ಯಾಂಕ್‌ ನ ಸಿಬ್ಬಂದಿಗಳೇ ಪೋನ್‌ ಮಾಡಿದ ರೀತಿ ಮಾಡಿ ಜನರನ್ನ ಸಂಪರ್ಕಿಸಿ ಒಟಿಟಿ ಪಡೆದು ಖಾತೆಯಲ್ಲಿನ ಹಣವನ್ನ ಲಪಟಾಯಿಸುತ್ತಿದ್ದಾರೆ.
ಅದ್ರಲ್ಲೂ ಫಿಶಿಂಗ್ SMS ಮೂಲಕ . ಸೈಬರ್ ವಂಚಕರು ಜನರ ದುಡ್ಡನ್ನು ಲಪಟಾಯಿಸುತ್ತಿದ್ದಾರೆ.ಒಂದು ವರದಿ ಪ್ರಕಾರ.. 2021ರಲ್ಲಿ ಭಾರತದಲ್ಲಿ 4.8 ಸಾವಿರಕ್ಕೂ ಹೆಚ್ಚು ಆನ್ ಲೈನ್ ಬ್ಯಾಂಕಿಂಗ್(Online Banking) ವಂಚನೆಗಳಾವೆ. ಎಟಿಎಂ/ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ಮೂಲಕ ಸುಮಾರು ರೂ.128 ಕೋಟಿ ಮೌಲ್ಯದ ವಂಚನೆಯಾಗಿದೆ ಎಂದು SBI ತಿಳಿಸಿವೆ. ಇದಲ್ಲದೆ HDFC ಬ್ಯಾಂಕ್ ಈ ಕುರಿತು ತನ್ನ ಗ್ರಾಹಕರನ್ನು ಎಚ್ಚರಿಸಿದೆ.

Advertisement

ಗ್ರಾಹಕರು ಟ್ವಿಟರ್ ನಲ್ಲಿ(Twiter) ತಮಗೆ ಬಂದ ಸಂದೇಶವನ್ನು ಬ್ಯಾಂಕ್‌ ಜೊತೆ ಹಂಚಿಕೊಂಡಿದ್ದಾರೆ. HDFC NET ಬ್ಯಾಂಕಿಂಗ್ ಸ್ಥಗಿತಗೊಳ್ಳದಿರಲು ಪ್ಯಾನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ಎಂದು ಬರೆಯಲಾಗಿದ್ದು ಈ ರೀತಿ ಲಿಂಕ್‌ ಮೂಲಕ ಮಾಹಿತಿ ತಿಳಿದುಕೊಂಡು ವಂಚಿಸುವ ಪ್ರಕರಣ ಹೆಚ್ಚಾಗಿದೆ ಎಂದಿದ್ದಾರೆ. ಈ ಕುರಿತಂತೆ ಎಚ್ಚೆತ್ತ ಬ್ಯಾಂಕ್‌ ತನ್ನ ಗ್ರಾಹಕರಿಗೆ ಯಾವುದೇ ಲಿಂಕ ನ್ನು ಕ್ಲಿಕ್‌ ಮಾಡದಂತೆ ಸೂಚಿಸಿದೆ.

Advertisement

ಪಾನ್ ಕಾರ್ಡ್(Pan Card) ಅಥವಾ KYC ಅಪ್ಡೇಟ್ ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಕೇಳುವ ಅಪರಿಚಿತ ಸಂಖ್ಯೆಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಹೇಳಿದ್ದಾರೆ.HDFC ಬ್ಯಾಂಕ್ ಯಾವಾಗಲೂ ತಮ್ಮ ಅಧಿಕೃತ ಐಡಿಯಿಂದ ಸಂದೇಶಗಳನ್ನು ಕಳುಹಿಸುತ್ತದೆ ಎಂದು ಹೇಳಿದ್ದಾರೆ.ಬ್ಯಾಂಕ್ ಎಂದಿಗೂ ಪ್ಯಾನ್ ವಿವರಗಳು, OTP, UPI, VPA / MPIN, ಗ್ರಾಹಕ ID ಮತ್ತು ಪಾಸ್ವರ್ಡ್, ಕಾರ್ಡ್ ಸಂಖ್ಯೆ, ATM ಪಿನ್ ಮತ್ತು CVV ಗಳನ್ನು ಕೇಳುವುದಿಲ್ಲ. ದಯವಿಟ್ಟು ಅಂತಹ ಮಾಹಿತಿಯನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬೇಡಿ .

Leave A Reply

Your email address will not be published.