Karnataka Times
Trending Stories, Viral News, Gossips & Everything in Kannada

SBI: ತಿಂಗಳಿಗೆ 15000 ಸಂಬಳ ಇರೋರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗುಡ್ ನ್ಯೂಸ್!

advertisement

ಇಂದಿನ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಪ್ರತಿ ತಿಂಗಳು ಆದಾಯ ಇಲ್ಲ ಅಂತ ಅಂದ್ರೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೂಡ ಸಾಧ್ಯವಿಲ್ಲ ಹಾಗೂ ಸಮಾಜದಲ್ಲಿ ಸಿಗಬೇಕಾಗಿರುವಂತಹ ಗೌರವ ಕೂಡ ಸಿಗೋದಿಲ್ಲ ಅನ್ನೋದನ್ನ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹಣವಿದ್ದರೆ ಮಾತ್ರ ಜೀವನ ಹಣ ಇದ್ರೆ ಮಾತ್ರ ಜನರ ನಡುವೆ ಗುರುತು ಸಿಗೋದು. ಅದರಲ್ಲಿ ವಿಶೇಷವಾಗಿ ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳುವಂತೆ ಪ್ರತಿಯೊಬ್ಬ ಪುರುಷನು ಕೂಡ ನಿಯಮಿತ ಆದಾಯವನ್ನು ಹೊಂದಿರುವಂತಹ ಉದ್ಯೋಗವನ್ನು ಹೊಂದಿರಬೇಕಾಗಿರುವುದು ಈ ಕಾಲದಲ್ಲಿ ಅತ್ಯಂತ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.

ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಸ್ಟೇಟ್ ಬ್ಯಾಂಕ್ ಆಫ್ (SBI) ಇಂಡಿಯಾದಿಂದ ಜಾರಿಗೆ ಬಂದಿರುವಂತಹ ಒಂದು ಸುದ್ದಿಯ ಬಗ್ಗೆ. ಹೌದು 15,000 ನಿಮಗೆ ಪ್ರತಿ ತಿಂಗಳ ಸಂಬಳ ಇದೆ ಅಂತ ಅಂದ್ರೆ ನೀವು ಇದನ್ನು ಸುಲಭವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 15,000 ಅಥವಾ ಅದಕ್ಕಿಂತ ಹೆಚ್ಚಿನ ಸಂಬಳ ಹೊಂದಿರುವವರಿಗೆ ಗುಡ್ ನ್ಯೂಸ್:

 

Image Source: Business Today

 

advertisement

ಸಾಕಷ್ಟು ಜನರಿಗೆ ತಮ್ಮ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಹಣದ ಅಗತ್ಯತೆ ಇರುತ್ತದೆ ಹಾಗೂ ತಮ್ಮ ಸಂಬಳದಿಂದ ಅದನ್ನ ಪೂರೈಸಿಕೊಳ್ಳಲು ಸಾಧ್ಯವಿರುವುದಿಲ್ಲ ಅನ್ನೋದು ಕೂಡ ನಿಜವಾದ ವಿಚಾರವಾಗಿರುತ್ತದೆ. ಅಂಥವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ ಇಡೀ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ದೊಡ್ಡ ಬ್ಯಾಂಕ್ ಆಗಿರುವಂತಹ ಎಸ್‌ಬಿಐ ಪರ್ಸನಲ್ ಲೋನ್ (SBI Personal Loan) ನೀಡುವುದಕ್ಕೆ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಹೌದು ಪರ್ಸನಲ್ ಲೋನ್ (Personal Loan) ಅತ್ಯಂತ ಅಸುರಕ್ಷಿತ ಲೋನ್ ಎಂಬುದಾಗಿ ಪರಿಗಣಿಸಬಹುದಾಗಿದೆ. ಯಾಕೆಂದ್ರೆ ಪರ್ಸನಲ್ ಲೋನ್ (Personal Loan) ಮೇಲೆ ಯಾವುದೇ ರೀತಿಯ ಅಡಮಾನಗಳನ್ನು ಸಾಲವನ್ನು ಪಡೆದುಕೊಳ್ಳುವವರು ಇಡುವುದಿಲ್ಲ. ಹೀಗಾಗಿ ಈ ರೀತಿಯ ಲೋನ್ (Loan) ಸಿಗೋದು ಅಷ್ಟೊಂದು ಸುಲಭವಲ್ಲ ಅದಕ್ಕೆ ಉತ್ತಮ ಆದಾಯ ಹಾಗೂ ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಕೂಡ ಇರಬೇಕಾಗಿರೋದು ಅತ್ಯಂತ ಪ್ರಮುಖವಾಗಿರುತ್ತದೆ.

 

Image Source: Mint

 

ಆದರೆ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 15,000 ಪ್ರತಿ ತಿಂಗಳ ಸಂಬಳವನ್ನು ಹೊಂದಿರುವವರಿಗೂ ಕೂಡ ಪರ್ಸನಲ್ ಲೋನ್ (Personal Loan) ಇಡೋದಕ್ಕೆ ಸಿದ್ಧವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸಾಲವನ್ನು ಪಡೆದುಕೊಳ್ಳುವರ ವಯಸ್ಸು 21ರಿಂದ 58 ವರ್ಷಗಳ ನಡುವೆ ಇರಬೇಕಾಗಿರುತ್ತದೆ. ಪ್ರೋಸಸಿಂಗ್ ಫೀಸ್ ವಿಚಾರಕ್ಕೆ ಬರೋದಾದ್ರೆ 1.50% ಲೋನ್ ಹಣದ ಮೇಲೆ ಜಿಎಸ್‌ಟಿ (GST) ಜೊತೆಗೆ ನೀಡಬೇಕಾಗಿರುತ್ತದೆ.

ಲೋನ್ ಮರುಪಾವತಿ ಮಾಡುವಂತಹ ಸಮಯಾವಧಿ ಆರು ತಿಂಗಳಿಂದ 72 ತಿಂಗಳಾಗಿರುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪರ್ಸನಲ್ ಲೋನ್ (SBI Personal Loan) ವಿಭಾಗದಲ್ಲಿ ನೀವು 15 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳುವಂತಹ ಅವಕಾಶವನ್ನ ಹೊಂದಿರುತ್ತೀರಿ ಆದರೆ ಇದಕ್ಕೆ ಪ್ರಮುಖವಾಗಿ ನಿಮ್ಮ ಸಿಬಿಲ್ ಸ್ಕೋರ್ ಹಾಗೂ ನಿಮ್ಮ ಕಂತನ್ನು ಕಟ್ಟುವಂತಹ ಸಾಮರ್ಥ್ಯ ಪ್ರಮುಖವಾಗಿರುತ್ತದೆ. ಇದನ್ನೆಲ್ಲ ಲೆಕ್ಕಾಚಾರ ಮಾಡಿದ ನಂತರವಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗೆ ಪರ್ಸನಲ್ ಲೋನ್ ನೀಡುತ್ತದೆ.

advertisement

Leave A Reply

Your email address will not be published.