Karnataka Times
Trending Stories, Viral News, Gossips & Everything in Kannada

Gold Loan: ಕಷ್ಟಕಾಲಕ್ಕೆ ಬಂಗಾರ ಇಟ್ಟು ಸಾಲ ಮಾಡುವವರಿಗೆ ಹೊಸ ಸೂಚನೆ! ಬಂಗಾರ ಇದ್ದವರು ನೋಡಿಕೊಳ್ಳಿ

advertisement

ಇಂದು ಚಿನ್ನದ ಸಾಲ (Gold Loan) ಎಂಬುದು ಸಾಮಾನ್ಯ ವಾಗಿದೆ. ಹೌದು ಇಂದು ತುರ್ತು ಹಣದ ಅವಶ್ಯಕತೆ ಇದೆ ಅಂದಾಗ ನಮಗೆ ಮೊದಲು ನೆನಪಾಗುವ ವಸ್ತುವೇ ಚಿನ್ನ ಆಗಿದೆ. ಅದಕ್ಕಾಗಿ ಕಷ್ಟ ಕಾಲಕ್ಕೆ ಸಹಾಯ ವಾಗುತ್ತೇ ಎಂದೇ ಹೆಚ್ಚಿನ ಜನರು‌ ಚಿನ್ನ ಖರೀದಿ (Gold Purchase) ಮಾಡುತ್ತಾರೆ‌. ಇಂದು ಬ್ಯಾಂಕುಗಳು ಕೂಡ ಸುಲಾಭವಾಗಿ ಚಿನ್ನದ ಸಾಲ ನೀಡಲಿದ್ದು ಆದರೆ ನೀವು ಚಿನ್ನದ ಸಾಲ (Gold Loan) ಪಡೆಯುವ ಮೊದಲು ಕೆಲವೊಂದು ವಿಚಾರದ ಬಗ್ಗೆ ಗಮನಿಸ ಬೇಕಾಗುತ್ತದೆ.

ಚಿನ್ನದ ಸಾಲ ಸುಲಭ:

 

Image Source: Capital Links

 

ಚಿನ್ನದ ಸಾಲ (Gold Loan) ಪಡೆಯುದು ಸುಲಭ, ನೀವು ಎಷ್ಟು ಸಾಲವನ್ನು ತೆಗೆದು ಕೊಳ್ಳುತ್ತೀರಿ ಎಂಬುದು ನಿಮ್ಮ ಚಿನ್ನದ ಗುಣಮಟ್ಟ ಮತ್ತು ಸಾಲ ನೀಡುವ ಬ್ಯಾಂಕ್ ಮೇಲೆ ಅವಲಂಬಿತ ವಾಗಿ ಇರಲಿದೆ.ಚಿನ್ನದ ಸಾಲದ ಆಯ್ಕೆಯು ಇತರ ಯಾವುದೇ ಸಾಲಕ್ಕಿಂತ ಸುಲಭವಾಗಿದೆ. ಇಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಅಥವಾ ಇತರ ಆದಾಯ ದ ದಾಖಲೆ, ಉದ್ಯೋಗ ದ ದಾಖಲೆ ಮುಖ್ಯವಾಗುವುದಿಲ್ಲ.ಸಾಲದ ಸಂದರ್ಭದಲ್ಲಿ, ಸಾಲವನ್ನು ಮರುಪಾವತಿಸಲು ಸಾಲಗಾರನಿಗೆ ಹಲವಾರು ಆಯ್ಕೆ ಇರಲಿದ್ದು ನಿಮ್ಮ ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಸಾಲ ಲಭ್ಯವಿದೆ

advertisement

ಒಂದು ವೇಳೆ ನಿಮಗೆ ಚಿನ್ನದ ಸಾಲ (Gold Loan) ಬೇಕು ಎನ್ನುವ ಅನಿವಾರ್ಯ ಬಂದರೆ ನಿಮ್ಮ ಬಳಿ ಇರುವ ಚಿನ್ನದ ಮೌಲ್ಯ ಎಷ್ಟು? ಇದರ ಬೆಲೆ ಈಗ ಎಷ್ಟು ಇರಬಹುದು ಎನ್ನುವ ಲೆಕ್ಕ ಚಾರ ವಾದರೂ ನಿಮಗೆ ತಿಳಿದಿರ ಬೇಕು.ಇದರ ಬಗ್ಗೆ ನಿಮಗೆ ಸರಿಯಾಗಿ ಗೊತ್ತಿರಬೇಕು. ಹೌದು ಈ ಬಗ್ಗೆ ಆರ್ಬಿಐ ಕೂಡ ಮಾಹಿತಿ ನೀಡಿದೆ. ಯಾಕೆಂದರೆ ಇತ್ತೀಚೆಗೆ ಸಾಲ (Loan) ವಿತರಣೆ ಸಂದರ್ಭದಲ್ಲಿ ಚಿನ್ನಕ್ಕೆ ಕಡಿಮೆ ಮೌಲ್ಯ ನಿರ್ಣಯ ಮಾಡ್ತ ಇದೆ ಎನ್ನುವ ದೂರುಗಳು ಕೇಳಿ ಬಂದಿದ್ದು ಇದೆ.

 

Image Source: Business Standard

 

ಒಂದು ವೇಳೆ‌ ಸಾಲ ನೀಡುವ ಫೈನ್ಯಾನ್ಸ್ ಕಂಪನಿಯು ಚಿನ್ನಕ್ಕೆ ಕಡಿಮೆ ಮೌಲ್ಯ ಹೇಳಿದರೆ ನೀವು ಸಾಲ ಪಡೆಯುವ ಬಗ್ಗೆ ಜಾಗೃತೆ ವಹಿಸುವುದು ಸೂಕ್ತ ವಾಗಿದೆ.‌ ಹೌದು ಅದು ವಂಚನೆಯ ಉದ್ದೇಶ ಕೂಡ ಆಗಿರಬಹುದು.‌ ಹಾಗಾಗಿ ಈ ವಿಚಾರದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಇದರಿಂದಾಗಿ ಬಡ್ಡಿ ಮತ್ತು ದಂಡಗಳಲ್ಲೂ ವ್ಯತ್ಯಾಸ ಮಾಡಬಹುದು.

ಇನ್ನು ಸಾಲ ನೀಡುವ ಬಡ್ಡಿ ಗಳು ಕೂಡ ವ್ಯತ್ಯಾಸ ವಾಗಿ ಇರಲಿದೆ. ಇದರ ಬಗ್ಗೆಯು ನೀವು ಸೂಕ್ತವಾಗಿ ಗಮನ ವಹಿಸ ಬೇಕಿದೆ. ಬ್ಯಾಂಕ್ ಮತ್ತು ಎನ್ ಬಿ ಎಫ್ ಸಿ ಗಳು ನೀಡುವ ಚಿನ್ನದ ಸಾಲದ ಮೇಲಿನ ಬಡ್ಡಿ ದರದಲ್ಲಿ ಬದಲಾವಣೆ ಕೂಡ ಇರಲಿದೆ. ಸರ್ಕಾರಿ ಬ್ಯಾಂಕ್ ಗಳು ಚಿನ್ನದ ಸಾಲ (Gold Loan) ಕ್ಕೆ ಶೇಕಡ 8.65 ರಿಂದ 11 ರಷ್ಟು ಬಡ್ಡಿ ವಿಧಿಸಿದರೆ, ಆ್ಯಕ್ಸಿಸ್ ಮತ್ತು ಎಚ್ ಡಿ ಎಫ್ ಸಿ ಗಳಂತಹ ಖಾಸಗಿ ವಲಯದ ಬ್ಯಾಂಕುಗಳು ವಾರ್ಷಿಕವಾಗಿ ಶೇಕಡ 17 ರಷ್ಟು ಬಡ್ಡಿ ಇರಲಿದೆ.‌ಹಾಗಾಗಿ ಈ ಬಗ್ಗೆಯು ನೀವು ಗಮನಿಸ ಬೇಕಾಗುತ್ತದೆ.

advertisement

Leave A Reply

Your email address will not be published.