Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » EPS Pension: ಪಿಂಚಣಿದಾರರಿಗೆ ಗುಡ್ ನ್ಯೂಸ್, ಜ.1 ರಿಂದ ಯಾವುದೇ ಬ್ಯಾಂಕಿನ ಯಾವುದೇ ಶಾಖೆಯಿಂದ ಪಿಂಚಣಿ ಪಡೆಯಬಹುದು
Finance

EPS Pension: ಪಿಂಚಣಿದಾರರಿಗೆ ಗುಡ್ ನ್ಯೂಸ್, ಜ.1 ರಿಂದ ಯಾವುದೇ ಬ್ಯಾಂಕಿನ ಯಾವುದೇ ಶಾಖೆಯಿಂದ ಪಿಂಚಣಿ ಪಡೆಯಬಹುದು

Chetan Yedve
Last updated: April 15, 2025 5:29 pm
By Chetan Yedve

ದೇಶದಲ್ಲಿ ಹಲವು ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿವೃತ್ತಿ ಹೊಂದಿರುವ ನೌಕರರಿಗೆ ನಿವೃತ್ತಿಯ ನಂತರ ಆರ್ಥಿಕ ಸುರಕ್ಷತೆ ನೀಡುವ ನೌಕರರ ಪಿಂಚಣಿ ಯೋಜನೆ (EPS Pension) ಮೂಲಕ ಹಲವಾರು ನಿವೃತ್ತ ನೌಕರರು ತಮ್ಮ ನಿವೃತ್ತಿಯ ಜೀವನವನ್ನು ಆನಂದಿಸುತ್ತಿದ್ದಾರೆ. ಮಾಸಿಕವಾಗಿ ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಬಹಳಷ್ಟು ಸಹಕಾರಿಯಾಗಿದ್ದು, ಇದೀಗ ಕೇಂದ್ರ ಸರ್ಕಾರದ ಮತ್ತೊಂದು ಪ್ರಸ್ತಾಪ ಪಿಂಚಣಿದಾರರ (Pensioners) ಪಾಲಿಗೆ ಶುಭಸುದ್ದಿ ನೀಡಿದೆ.

ಹೌದು. ಇದೀಗ ನೌಕರರ ಪಿಂಚಣಿ ಯೋಜನೆ (EPF) ಗಾಗಿ ಕೇಂದ್ರೀಕೃತ ಪಿಂಚಣಿಪಾವತಿ ವ್ಯವಸ್ಥೆ (CPPS) ಗೆ ಕೇಂದ್ರ ಸರ್ಕಾರ (Central Government) ಅನುಮೋದನೆ ನೀಡಿದ್ದು, ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಯಾವುದೇ ಬ್ಯಾಂಕ್ ಶಾಖೆಯಿಂದ ಕೂಡ ಪಡೆದುಕೊಳ್ಳುವ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ, ಭಾರತದ ಯಾವುದೇ ಬ್ಯಾಂಕ್‌ಗಳ ಯಾವುದೇ ಶಾಖೆಗಳಿಂದ ಪಿಂಚಣಿ ಹಣವನ್ನು ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದ್ದು, ಇಂತಹ ಒಂದು ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಕೇಂದ್ರ ಕಾರ್ಮಿಕ ಸಚಿವರಾದ ಮನ್ಸುಖ್ ಮಾಂಡವಿಯಾ (Mansukh L. Mandaviya), ಇಪಿಎಫ್ಓ ವ್ಯವಸ್ಥೆಯ ಆಧುನೀಕರಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದಿದ್ದಾರೆ. ಹಾಗಿದ್ದರೆ ಸರ್ಕಾರ ಅನುಮೋದಿಸಿರುವ ಈ ಹೊಸ ವ್ಯವಸ್ಥೆಯಲ್ಲಿ ಪಿಂಚಣಿದಾರರಿಗೆ ಏನೇನು ಅನುಕೂಲಗಳಿವೆ ಎಂದು ನೋಡೋಣ ಬನ್ನಿ.

  •  ದೇಶದ ಯಾವುದೇ ಭಾಗದಲ್ಲಿ ಯಾವುದೇ ಬ್ಯಾಂಕ್‌ನ ಯಾವುದೇ ಶಾಖೆಯಿಂದ ಪಿಂಚಣಿ ಹಣ (EPS Pension) ಪಡೆಯುವ ಸೌಲಭ್ಯ.
  •  ಸುಧಾರಿತ ಐಟಿ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನದ ಮೂಲಕ ಎಲ್ಲಾ ಪಿಂಚಣಿದಾರರಿಗೂ ಅನುಕೂಲ.
  • ಪಿಂಚಣಿದಾರನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅಥವಾ ಬ್ಯಾಂಕ್ ಶಾಖೆಯನ್ನು ವರ್ಗಾಯಿಸಿಕೊಂಡರೆ ಸಹ, ಪಿಪಿಓ (PPO Details) ವರ್ಗಾಯಿಸದೇ ಅತ್ಯಂತ ಸುಲಭವಾಗಿ ಪಿಂಚಣಿ ಪಡೆಯುವ ಅವಕಾಶ.
  • ನಿವೃತ್ತಿಯ ನಂತರ ಬೇರೆ ಊರುಗಳಿಗೆ ತೆರಳುವ ಪಿಂಚಣಿದಾರರಿಗೆ ಅನುಕೂಲ.

EPS Pension: ಬರೋಬ್ಬರಿ 78 ಲಕ್ಷ ಪಿಂಚಣಿದಾರರಿಗೆ ಅನುಕೂಲ

ಸರ್ಕಾರ ತಂದ ಈ ಸಿಪಿಪಿಎಸ್ (CPPS) ವ್ಯವಸ್ಥೆಯಿಂದ 78 ಲಕ್ಷ ಪಿಂಚಣಿದಾರರಿಗೆ ಅಪಾರ ಅನುಕೂಲವಾಗಲಿದ್ದು, ಪಿಂಚಣಿಗಾಗಿ ಬ್ಯಾಂಕುಗಳಿಗೆ ಅಲೆಯುವ ಕೆಲಸ ತಪ್ಪಲಿದೆ. ಅಷ್ಟೇ ಅಲ್ಲದೇ, ಈ ವ್ಯವಸ್ಥೆಯಿಂದ ಪಿಂಚಣಿದಾರರು ವೆರಿಫಿಕೇಶನ್ (Verification) ಗೆ ಬ್ಯಾಂಕ್‌ಗೆ ತೆರಳಬೇಕಾದ ಅವಶ್ಯಕತೆಯೇ ಇಲ್ಲ. ಪಿಂಚಣಿಯ ಪ್ರತಿ ಕಂತು ಕೂಡ ಬಿಡುಗಡೆಗೊಂಡ ತಕ್ಷಣವೇ ನೇರವಾಗಿ ಖಾತೆಗೇ ಜಮೆಯಾಗುವುದರಿಂದ, ಪಿಂಚಣಿದಾರರು ಬ್ಯಾಂಕ್ ಮತ್ತು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಹಾಗೆಯೇ ಬ್ಯಾಂಕ್ ಪಾವತಿ ವ್ಯವಸ್ಥೆಗಳಲ್ಲಿ ಕೂಡ ಈವರೆಗೆ ಆಗುತ್ತಿದ್ದ ವಿಳಂಬವೂ ಕೂಡ ಕಡಿಮೆಯಾಗಲಿದ್ದು, ಪಾವತಿ ವೆಚ್ಚವೂ ಕೂಡ ಕಡಿಮೆಯಾಗಲಿದೆ.

ಈ CPPS ಸೌಲಭ್ಯ 2025 ರ ಜ.1 ರಿಂದ ಲಭ್ಯ!

ಪಿಂಚಣಿದಾರರಿಗೆ ತಾವಿರುವ ಸ್ಥಳದಿಂದಲೇ ಪಿಂಚಣಿ ಪಡೆಯುವ ಸೌಲಭ್ಯ ನೀಡುವ ಈ ಯೋಜನೆ ಅಥವಾ ಉಪಕ್ರಮವನ್ನು ಸರ್ಕಾರ ಅನುಮೋದಿಸಿದ್ದು, 2025 ರ ಜನವರಿ 1 ರಿಂದಲೇ ಈ ಅವಕಾಶ ಲಭ್ಯವಾಗಲಿದೆ. ಜ.1 ರಿಂದ ಕೇಂದ್ರ ಸರ್ಕಾರದ ಇಪಿಎಫ್ಓ (EPFO) ನ ಐಟಿ ಉನ್ನತೀಕರಣ ಯೋಜನೆಯಾದ ಕೇಂದ್ರೀಕೃತ ಐಟಿ ಎನೇಬಲ್ಡ್ ಸಿಸ್ಟಂ (CTES 2.01) ಭಾಗವಾಗಿ ಈ ಸೌಲಭ್ಯ ಆರಂಭಗೊಳ್ಳಲಿದ್ದು, ದೇಶಾದ್ಯಂತ ಎಲ್ಲಾ ಪಿಂಚಣಿದಾರರಿಗೂ ಹೊಸ ವರ್ಷದ ಆರಂಭದಲ್ಲೇ ಖುಷಿ ನೀಡಲಿದೆ. ಹಾಗೆಯೇ ಇನ್ನು ಮುಂದೆ ಸಿಪಿಪಿಎಸ್ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಗೂ ಇದು ಸಹಕಾರಿಯಾಗಲಿದ್ದು, ಪಿಂಚಣಿ ಪಾವತಿ ಮುಂಬರುವ ದಿನಗಳಲ್ಲಿ ಅಂಗೈಯಲ್ಲೇ ದೊರಕಿದರೂ ಅಚ್ಚರಿಯಿಲ್ಲ.

SBI: ಸ್ಟೇಟ್ ಬ್ಯಾಂಕ್ ನಲ್ಲಿ ಮನೆ, ಕಾರು, ವ್ಯಯುಕ್ತಿಕ ಸಾಲ ಮಾಡಿದವರಿಗೆ ಈ ವರ್ಷದ ಬಿಗ್ ಗುಡ್ ನ್ಯೂಸ್

Health Insurance: 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್, 5 ಲಕ್ಷ ವಿಮೆ.

GST Council: ಜಿಎಸ್‌ಟಿ ಕೌನ್ಸಿಲ್‌ನಿಂದ ದೇಶದ ಜನತೆಗೆ ಶುಭಸುದ್ದಿ, ರಾತ್ರೋರಾತ್ರಿ ಈ ಉತ್ಪನ್ನಗಳ ಬೆಲೆಯಲ್ಲಿ ಧಿಡೀರ್ ಇಳಿಕೆ

Home Loan Tips: ಬಡ್ಡಿಯೊಂದಿಗೆ ಅಸಲು ಕೂಡ ಪಡೆಯಿರಿ ವಾಪಾಸ್! ಇಲ್ಲಿದೆ ಬೆಸ್ಟ್ ಟಿಪ್ಸ್

Income Tax: ಆದಾಯ ತೆರಿಗೆ ನೋಟಿಸ್ ಇಲ್ಲದೆ ದಿನಕ್ಕೆ ಎಷ್ಟು ನಗದು ಹಣ ಪಡೆಯಬಹುದು?

TAGGED:CPPS systemEPFOEPS Pension
Previous Article ನೀರಜ್ ಚೋಪ್ರಾ ಗೆ ಮನು ಭಕ್ರ್ ಸ್ಪೆಷಲ್ ವಿಶ್, ಮಾಡುವೆ ವದಂತಿಗಳು ಮತ್ತೆ ವೈರಲ್.
Next Article Aadhaar Card Update: ಆಧಾರ್ ಕಾರ್ಡ್ Free ಅಪ್‌ಡೇಟ್‌ಗೆ ಇದೇ ಲಾಸ್ಟ್ ಚಾನ್ಸ್!
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use