Karnataka Times
Trending Stories, Viral News, Gossips & Everything in Kannada

Cash Limit: ನಿಮ್ಮ ಸ್ವಂತ ಮನೆಯಲ್ಲಿ ಎಷ್ಟು ರೂಪಾಯಿವರೆಗೆ ಕ್ಯಾಶ್ ಇಡಬಹುದು! ಇಲ್ಲಿದೆ ಹೊಸ ರೂಲ್ಸ್

advertisement

Tax Rules Related to Cash Limit at Home: ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ದುಡಿಮೆಯ ದಿನಗಳಲ್ಲಿ ಎಷ್ಟು ಹಣ ಸಾಧ್ಯ ಅಷ್ಟು ಹಣವನ್ನು ದುಡಿಯುವುದಕ್ಕೆ ಪ್ರಯತ್ನ ಮಾಡುತ್ತಾರೆ. ಯಾಕೆಂದ್ರೆ ಈ ದುಬಾರಿ ದುನಿಯಾದಲ್ಲಿ ಹಾಗೂ ವೇಗವಾಗಿ ಓದುತ್ತಿರುವಂತಹ ಪ್ರಪಂಚದಲ್ಲಿ ಪ್ರತಿಯೊಬ್ಬರು ಕೇರ್ ಮಾಡೋದು ಕೇವಲ ಎಷ್ಟು ಹಣವನ್ನು ಗಳಿಸಿದ್ದೀರಿ ಅನ್ನೋದನ್ನ ಮಾತ್ರ. ಹಣಮನ ಸಂಪಾದನೆ ಮಾಡುವಂತಹ ವಿದ್ಯೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ. ಇನ್ನು ಹಣವನ್ನು ಸಂಪಾದನೆ ಮಾಡಿದ ಮೇಲೂ ಕೂಡ ಕೆಲವೊಂದು ನಿಯಮಗಳನ್ನ ಭಾರತೀಯ ಕಾನೂನಿನ ಅಡಿಯಲ್ಲಿ ನೀವು ಪ್ರಮುಖವಾಗಿ ಗಮನಿಸಿಕೊಳ್ಳ ಬೇಕಾಗುತ್ತದೆ ಅನ್ನೋದನ್ನು ಕೂಡ ಇಲ್ಲಿ ನೆನಪು ಬಿಡಬಾರದು.

ಬ್ಯಾಂಕಿನಲ್ಲಿ ಎಷ್ಟು ಕ್ಯಾಶ್ ಇರಬೇಕು ಅಥವಾ ಮನೆಯಲ್ಲಿ ಎಷ್ಟು ಕ್ಯಾಶ್ ಇರ್ಬೇಕು ಎನ್ನುವುದರ ಬಗ್ಗೆ ಕೆಲವೊಂದು ಲಿಮಿಟ್ ಗಳು ಇರುತ್ತದೆ ಅನ್ನೋದಾಗಿ ಜನರು ಭಾವಿಸಿರ್ತಾರೆ ಹಾಗೂ ಅದರ ಬಗ್ಗೆ ಅಷ್ಟೊಂದು ಜ್ಞಾನವನ್ನು ಅವರು ಹೊಂದಿರುವುದಿಲ್ಲ. ಸಾಕಷ್ಟು ಕಡೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಅವರ ಮನೆಯಲ್ಲಿ ಐಟಿ ರೇಡ್ ಆಯ್ತು ಹಾಗಾಗಿ ಅಲ್ಲಿಂದ ಅಷ್ಟು ಕೋಟಿ ಹಣ ಸೀಸ್ ಮಾಡಲಾಯಿತು ಎನ್ನುವಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ.

An Eye on Tax Rules Related to Cash Limit at Home
Image Source: Mint

advertisement

ಅದೇ ಕಾರಣಕ್ಕಾಗಿ ಹೆಚ್ಚಿನ ಆದಾಯವನ್ನು ಹೊಂದಿರುವಂತಹ ಶ್ರೀಮಂತರ ಮನೆಯಲ್ಲಿ ಅವರು ಹಣವನ್ನು ಇಟ್ಟುಕೊಳ್ಳುವುದಕ್ಕೆ ಇರುವಂತಹ ಮಿತಿಯ ಬಗ್ಗೆ ಯಾವ ಕಾನೂನುಗಳು ಇವೆ ಎನ್ನುವುದಾಗಿ ತಿಳಿಯೋದಕ್ಕೆ ಪ್ರತಿಯೊಬ್ಬರೂ ಕೂಡ ಪ್ರಯತ್ನ ಪಡ್ತಾರೆ ಅಂತವರಿಗೆ ಖಂಡಿತವಾಗಿ ಈ ಲೇಖನ ಸಾಕಷ್ಟ್ ಸಹಾಯವನ್ನು ಮಾಡುವಂತಹ ಕೆಲಸವನ್ನು ಮಾಡುತ್ತದೆ.

ಮನೆಯಲ್ಲಿ ಕ್ಯಾಶ್ ರೂಪದಲ್ಲಿ ಎಷ್ಟು ಹಣವನ್ನು ಇಡಬಹುದು?

ಇನ್ಕಮ್ ಟ್ಯಾಕ್ಸ್ ನಿಯಮಗಳ ಪ್ರಕಾರ ಮನೆಯಲ್ಲಿ ಆಗಲಿ ಅಥವಾ ನಿಮ್ಮ ಬ್ಯಾಂಕ್ ಖಾತೆಯಲ್ಲೇ ಆಗಲಿ ಇಂತಿಷ್ಟೇ ಹಣವನ್ನು ಇಡಬೇಕು ಅನ್ನುವಂತಹ ಯಾವುದೇ ನಿಯಮಗಳನ್ನಾಗಲಿ ಅಥವಾ ರಿಸ್ಟ್ರಿಕ್ಷನ್ ಆಗಲಿ ಇಟ್ಟಿಲ್ಲ. ಆದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಇನ್ಕಮ್ ಟ್ಯಾಕ್ಸ್ ರೈಡ್ ಆಯ್ತು ಅಂತ ಅಂದ್ರೆ ಆ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಹಣಕ್ಕೆ ಅಥವಾ ನಿಮ್ಮ ಖಾತೆಯಲ್ಲಿ ಇರುವಂತಹ ಹಣಕ್ಕೆ ಆದಾಯ ಬರೋದಕ್ಕೆ ಮೂಲ ಕಾರಣ ಏನು ಅನ್ನೋದರ ಸಂಪೂರ್ಣ ಡಾಕ್ಯುಮೆಂಟ್ಸ್ ಗಳ್ನ ನೀವು ಸರಿಯಾದ ರೂಪದಲ್ಲಿ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳಿಗೆ ನೀಡಿದರೆ ಸಾಕು ಆ ಹಣ ಬಚಾವ್ ಆಗುತ್ತೆ. ಒಂದು ವೇಳೆ ಆ ಹಣಕ್ಕೆ ಸರಿಯಾದ ರೀತಿಯಲ್ಲಿ ತೆರಿಗೆ ಕಟ್ಟಿಲ್ಲ ಅಂತ ಅಂದ್ರೆ ಆ ಸಂದರ್ಭದಲ್ಲಿ ಮಾತ್ರ ನೀವು ಸಮಸ್ಯೆಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.

An Eye on Tax Rules Related to Cash Limit at Home
Image Source: The Economic Times

advertisement

Leave A Reply

Your email address will not be published.