Karnataka Times
Trending Stories, Viral News, Gossips & Everything in Kannada

KSRTC: ದಂಡದ ವಿಚಾರವಾಗಿ ಬೆಳ್ಳಂಬೆಳಿಗ್ಗೆ KSRTC ಹೊಸ ಪ್ರಕಟಣೆ! ಉಚಿತವಾಗಿ ಬಸ್ ಹತ್ತುವವರಿಗೆ ಮುಖ್ಯ ಸೂಚನೆ

advertisement

KSRTC collects Rs 6.54 lakh fines: ಇದೀಗ ದಂಡದ  ಕುರಿತು ಹೊಸ ಮಾಹಿತಿಯನ್ನು‌ KSRTC ಹಂಚಿ ಕೊಂಡಿದೆ.‌ ಹೌದು  ಉಚಿತ ವಾಗಿ ಪ್ರಯಾಣಿ ಸುತ್ತಿರುವ ಮಹಿಳೆಯರು ಈ ವಿಚಾರ  ಗಮನಿಸಲೇ ಬೇಕು.‌ ಇಂದು ಶಕ್ತಿ ಯೋಜನೆಯನ್ನು ರಾಜ್ಯ ಸರಕಾರವು ಜಾರಿಗೆ ತಂದಿದೆ.ಇದರ ಮೂಲಕ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ವನ್ನು ಮಾಡು ತ್ತಿದ್ದಾರೆ. ತಮ್ಮ ಆಧಾರ್ ಕಾರ್ಡ್ ಗುರುತು ತೋರಿಸುವ ಮೂಲಕ ಶೂನ್ಯ ಟಿಕೆಟ್ ಪಡೆದು ವಿವಿಧ ಕಡೆ ಪ್ರಯಾಣ ಮಾಡುತ್ತಿದ್ದಾರೆ.ಆದರೆ‌ ಇದೀಗ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಈ ಸುದ್ದಿ ನೀಡಿದ್ದು  ಪ್ರಯಾಣ ಉಚಿತ ವಿದ್ದರೂ ಟಿಕೆಟ್ ಪಡೆಯಲೇಬೇಕು ಎನ್ನುವ ಮಾಹಿತಿ ನೀಡಿದೆ. ಹಾಗಾಗಿ ಮಹಿಳೆಯರು ಟಿಕೆಟ್ ಅನ್ನು ಪಡೆದಿರಲೇಬೇಕು.‌ ಒಂದು ವೇಳೆ ಚೆಕಿಂಗ್ ನವರು ಬಂದಾಗ ಟಿಕೆಟ್ ಕೇಳಿದರೆ ನೀವು ಟಿಕೆಟ್ ಇಲ್ಲ ಮಿಸ್ ಆಗಿದೆ ಎಂದಾಗ ಖಂಡಿತ ನೀವು ದಂಡ ಪಾವತಿ ಮಾಡ ಮಾಡಬೇಕಾಗುತ್ತದೆ. ಹಾಗಾಗಿ ಈ ಬಗ್ಗೆ  ಗಮನ ವಹಿಸುವುದು ಸೂಕ್ತ.

ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು  ಮೇ ತಿಂಗಳಿನಲ್ಲಿ  ಹೆಚ್ಚು ಮೊತ್ತದ ದಂಡ ಪಾವತಿ ಮಾಡಿದೆ. ಹೌದು ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು  ಮಾಡಿ,  ಟಿಕೆಟ್ ಇಲ್ಲದ  ಪ್ರಯಾಣಿ ಕರಿಂದ ಒಟ್ಟು 6,54,738 ರೂಗಳನ್ನು ದಂಡದ ರೂಪದಲ್ಲಿ ವಸೂಲಿ  ಮಾಡಿದ್ದು ಈ ಬಗ್ಗೆ ಸೂಚನೆ ಯನ್ನು ಕೂಡ ನೀಡಿದೆ. ಹಾಗಾಗಿ ತಪ್ಪಿತಸ್ಥರ ವಿರುದ್ದ  ಸೂಕ್ತ   ಕ್ರಮವನ್ನು  ಕೈಗೊಂಡಿದ್ದು  ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ ಪಡೆದು  ಪ್ರಯಾಣ ಮಾಡಬೇಕು ಎಂದು ನಿಗಮದ ಅಧಿಕಾರಿ ತಿಳಿಸಿದ್ದಾರೆ.

KSRTC collects Rs 6.54 lakh fines from ticketless passengers
Image Source: The Federal News

ಮಹಿಳಾ ಪ್ರಯಾಣಿಕರು ಹೆಚ್ಚಳ

advertisement

ಇಂದು ರಾಜ್ಯಾದ್ಯಂತ  ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣದ ಸದುಪಯೋಗ ಮಾಡಿ ಕೊಳ್ಳು ತ್ತಿದ್ದಾರೆ.ಈ ಯೋಜನೆ ಬಳಿಕ ದಿನೇ ದಿನೇ ಮಹಿಳಾ ಪ್ರಯಾಣಿಕರ ಸಂಖ್ಯೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹೆಚ್ಚಳವಾಗುತ್ತಲೆ ಬಂದಿದೆ.ಇಂದು ಕೆಲವು ಹಳ್ಳಿ, ಗ್ರಾಮಂತರ ಪ್ರದೇಶದಲ್ಲಿ ಬಸ್ ಕೊರತೆಯು ಇರಲಿದ್ದು ಶೀಘ್ರದಲ್ಲೇ ಹೊಸ ಬಸ್ ಗಳ ಖರೀದಿ ಮಾಡುದಾಗಿ ಸಾರಿಗೆ ಸಚಿವರು ಮೊನ್ನೆಯಷ್ಟೇ ಮಾಹಿತಿ ನೀಡಿದ್ದಾರೆ.

ಹೊಸ ಬಸ್ ಜಾರಿ

ಈಗಾಗಲೇ ಜೂನ್‌ 14ರಂದು ಕೆಎಸ್ಆರ್‌ಟಿಸಿ 30 ಆಸನಗಳ ಸೀಟರ್ ಕಮ್ ಸ್ಲೀಪರ್, 70 ಹವಾ ನಿಯಂತ್ರಣ ರಹಿತ ಸ್ಲೀಪರ್ ಕೋಚ್‌ ಬಸ್‌ಗಳ ಖರೀದಿಗೆ ಟೆಂಡರ್ ಕರೆದಿದೆ.ಹಾಗಾಗಿ ಶೀಘ್ರವಾಗಿ  ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಮುಗಿಯಲಿದ್ದು ಖರೀದಿಗೆ ಮೊದಲು 30 ಆಸನಗಳ ಸೀಟರ್ ಕಮ್ ಸ್ಲೀಪರ್ ಬಸ್‌ನಲ್ಲಿ 5 ಬಸ್‌ಗಳು, 70 ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್‌ ಬಸ್‌ಗಳಲ್ಲಿ 10 ಬಸ್‌ಗಳು ಜಾರಿಗೆ ತರಲಿದೆ.

KSRTC collects Rs 6.54 lakh fines from ticketless passengers
Image Source: ThePrint

advertisement

Leave A Reply

Your email address will not be published.