RBI: ಸಪ್ಟೆಂಬರ್ 1 ರಿಂದ ದೇಶದ ಎಲ್ಲಾ ಬಡವರಿಗೆ ಸಿಹಿಸುದ್ದಿ! ರಿಸರ್ವ್ ಬ್ಯಾಂಕ್ ಘೋಷಣೆ
ದೇಶದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾದ ಜನಕ್ಕೆ ಈಗ ಸರಿಯಾದ ಮತ್ತು ಸೂಕ್ತ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಕೆಲ ದಿನಗಳ ಹಿಂದೆ ಬರೀ ಟೊಮ್ಯಾಟೊ ಬೆಲೆ ಕೆ.ಜಿ.ಗೆ 150ರೂ. ಗೂ ಮೀರಿದ್ದು ಜನಸಾಮಾನ್ಯರಿಗೆ ಹಾಗೂ ಹೊಟೇಲ್ , ಫಾಸ್ಟ್ ಫುಡ್ (Hotel and Fast food) ಉದ್ಯಮಕ್ಕೂ ಇದರಿಂದಾಗಿ ಸಾಕಷ್ಟು ತೊಂದರೆಗಳಾಗಿತ್ತು. ಆದರೆ ಈಗ ಬೆಲೆ ನಿಧಾನ ಗತಿಯಲ್ಲಿ ಕುಸಿದಿದ್ದು ಜನರು ಸ್ವಲ್ಪ ನಿರಾಳರಾಗಿದ್ದಾರೆ.
ಈಗಾಗಲೇ ತರಕಾರಿ ಬೆಲೆ ಕುಸಿಯುತ್ತಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಕುಸಿಯಲಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ತರಕಾರಿ ಬೆಲೆ ಹೆಚ್ಚಾಗಿದೆ ಎಂದು ಗೋಳು ತೋಡಿಕೊಳ್ಳುವ ಜನಸಾಮಾನ್ಯರಿಗೆ RBI ಸರಿಯಾದ ಸ್ಪಷ್ಟನೆ ನೀಡಿದೆ.
RBI ಸ್ಪಷ್ಟನೆ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಗವರ್ನರ್ ಆದ ಶಕ್ತಿ ಕಾಂತ ದಾಸ್ (Shaktikanta Das) ಅವರು ಆ. 23ರಂದು ಒಂದು ಮಹತ್ವದ ವಿಚಾರದ ಬಗ್ಗೆ ತಿಳಿಸಿದ್ದಾರೆ. ಇನ್ನು ಮುಂದೆ ಸಿರಿಧಾನ್ಯ ಮತ್ತು ತರಕಾರಿ ಬೆಲೆಗಳು ನಿರೀಕ್ಷಿತ ಮಟ್ಟದಲ್ಲಿ ಕಡಿಮೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಜುಲೈ ನಲ್ಲಿ ಚಿಲ್ಲರೆ ಹಣದುಬ್ಬರ 7.44%ದಿಂದ 15%ಕ್ಕೆ ಏರಿಕೆಯಾಗಿದೆ. ಹಣದುಬ್ಬರದ ವಿಚಾರದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಹತ್ವದ ಬದಲಾವಣೆ ಆಗಲಿದ್ದು ತರಕಾರಿ ಬೆಲೆ ಕಡಿಮೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಹಣದುಬ್ಬರ ಪ್ರಕ್ರಿಯೆ ಏಕ ಪ್ರಕಾರ ಆಗಿರದೆ ಆಗಾಗ ಬದಲಾಗುತ್ತಿರುತ್ತದೆ. ಆಹಾರ ಬೆಲೆ ಏರಿಕೆ ಇಳಿಕೆ ಸಾಮಾನ್ಯವಾದರೂ ಅವುಗಳ ಮೇಲೆ ಅಂತರಾಷ್ಟ್ರೀಯ ವಿನಿಮಯ ಹಣದುಬ್ಬರ ಅನೇಕ ಅಂಶಗಳು ಪರಿಣಾಮ ಬೀರಲಿದೆ. ಹಾಗಾಗಿ ಮುಂದಿನ ದಿನದಲ್ಲಿ ಧನಾತ್ಮಕ ಬದಲಾವಣೆ ಆಗಲಿದ್ದು ಅಗತ್ಯ ಸಾಮಾಗ್ರಿಗಳಾದ ಸಿರಿಧಾನ್ಯ ಹಾಗೂ ತರಕಾರಿ ಬೆಲೆಯಲ್ಲಿ ಮಹಾ ಬದಲಾವಣೆ ಮತ್ತು ಕಡಿಮೆ ಬೆಲೆಗೆ ತರಕಾರಿ ಲಭ್ಯ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ತರಕಾರಿ ಬೆಲೆಯಿಂದ ತತ್ತರಿಸಿದ್ದ ಜನತೆಗೆ RBI ಗವರ್ನರ್ ಅವರ ಈ ಒಂದು ಹೇಳಿಕೆ ಬಹುಮಟ್ಟಿಗೆ ಖುಷಿ ನೀಡುತ್ತಿದ್ದು ಮುಂದಿನ ದಿನದಲ್ಲಿ ಉತ್ತಮ ಬೆಳವಣಿಗೆ ನಿರೀಕ್ಷಿಸುವ ಸಾಧ್ಯತೆ ಬಹುವಾಗಿ ಇದೆ ಎನ್ನಬಹುದು.