RBI: ಒಂದೇ ಬ್ಯಾಂಕ್ ಅಕೌಂಟ್ ನಲ್ಲಿ ಎಲ್ಲಾ ಹಣ ಇಟ್ಟಿದ್ದೀರಾ? RBI ಹೊಸ ನಿಯಮ!

Advertisement
ಪ್ರತಿಯೊಬ್ಬರು ಕೂಡ ತಮ್ಮ ಆದಾಯ ಸುರಕ್ಷಿತವಾಗಿ ಇರಬೇಕು ಎನ್ನುವ ಕಾರಣಕ್ಕಾಗಿ ಬ್ಯಾಂಕಿನಲ್ಲಿ ಅಕೌಂಟ್ ಮಾಡಿ ಹಣವನ್ನು ಜಮಾ ಮಾಡುತ್ತಾರೆ. ಆದರೆ ಸಂಪೂರ್ಣವಾಗಿ ನಿಮ್ಮ ಹಣವನ್ನು ಸುರಕ್ಷಿತವಾಗಿರಬೇಕು ಎನ್ನುವ ಕಾರಣಕ್ಕಾಗಿ ಬ್ಯಾಂಕಿನಲ್ಲಿ ಜಮಾ ಮಾಡೋದು ಸುರಕ್ಷಿತವೇ ಎಂಬುದಾಗಿ ಸಾಕಷ್ಟು ಜನರ ಮನಸ್ಸಿನಲ್ಲಿ ಪ್ರಶ್ನೆ ಉದ್ಭವ ಆಗಬಹುದು.
ಇದಕ್ಕಾಗಿ ನೇರವಾಗಿ ಉತ್ತರ ನೀಡಬೇಕು ಎಂದರೆ ಖಂಡಿತವಾಗಿ ನಿಮ್ಮ ಹಣ ಸಂಪೂರ್ಣವಾಗಿ ಬ್ಯಾಂಕ್ ಅಕೌಂಟ್ (Bank Account) ನಲ್ಲಿ ಸುರಕ್ಷಿತವಾಗಿ ಇದೆ ಎಂದು ಅಂದುಕೊಳ್ಳುವುದು ತಪ್ಪಾಗುತ್ತದೆ ಅದಕ್ಕೂ ಕೂಡ ಕೆಲವೊಂದು ಲಿಮಿಟ್ ಇದೆ. ಹಾಗಿದ್ರೆ ಬನ್ನಿ ಎಷ್ಟು ಹಣ ಬ್ಯಾಂಕಿನಲ್ಲಿ ಸುರಕ್ಷಿತ ಆಗಿರುತ್ತದೆ ಹಾಗೂ ಇನ್ನಿತರ ವಿಚಾರಗಳನ್ನು ಅದಕ್ಕೆ ಸಂಬಂಧಪಟ್ಟಂತೆ ತಿಳಿದುಕೊಳ್ಳೋಣ.
ಮೊದಲಿಗೆ ಬ್ಯಾಂಕಿನಲ್ಲಿ ಇಡುವಂತಹ ಹಣಕ್ಕೆ ಸುರಕ್ಷತೆ ರೂಪದಲ್ಲಿ 1 ಲಕ್ಷದ ಮಿತಿಯನ್ನು ಇಟ್ಟಿದ್ದರು 2020ರಲ್ಲಿ ಆ ಲಿಮಿಟ್ ಅನ್ನು 5 ಲಕ್ಷಕ್ಕೆ ಏರಿಸುತ್ತಾರೆ. ನೀವು ನಿಮ್ಮ ಅಕೌಂಟ್ ನಲ್ಲಿ ಜಮಾ ಮಾಡುವಂತಹ 5 ಲಕ್ಷ ರೂಪಾಯಿಗಳವರೆಗಿನ ಹಣಕ್ಕೆ ಡಿಪೋಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ (DICGC) ಭರವಸೆಯನ್ನು ನೀಡುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಮಾಣಿಕೃತ ಸಂಸ್ಥೆ ಯಾಗಿರುವ DICGC ಅದರ ಕಂಟ್ರೋಲ್ ನಲ್ಲಿ ಬರುವಂತಹ ಬ್ಯಾಂಕುಗಳಲ್ಲಿ 5 ಲಕ್ಷ ರೂಪಾಯಿಗಳವರೆಗಿನ ಠೇವಣಿವರೆಗೂ ಇನ್ಸೂರೆನ್ಸ್ ರೂಪದಲ್ಲಿ ಹಣವನ್ನು ಗ್ರಾಹಕರಿಗೆ ಒಂದು ವೇಳೆ ಬ್ಯಾಂಕ್ ನಷ್ಟವಾದರೆ ಅಥವಾ ನಿಷ್ಕ್ರಿಯಗೊಂಡರೆ ಪರಿಹಾರ ರೂಪದಲ್ಲಿ ನೀಡುತ್ತದೆ.
ಹೀಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ನಲ್ಲಿ 5 ಲಕ್ಷ ವರೆಗಿನ ಹಣವನ್ನು ಇಡೋದು ಮಾತ್ರ ಸೂಕ್ತ ಹಾಗೂ ಸುರಕ್ಷಿತ ಎಂದು ಹೇಳಬಹುದಾಗಿದೆ. ಹೀಗಾಗಿ ನೀವು ಹಣವನ್ನು ಜಮಾ ಮಾಡಿರುವಂತಹ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ DICGC ಅಧೀನದಲ್ಲಿ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ಆ ಬ್ಯಾಂಕಿನ ಅಧಿಕಾರಿಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇನ್ನು ನೀವು ಒಂದೇ ಬ್ಯಾಂಕಿನಲ್ಲಿ ಸಾಕಷ್ಟು ಖಾತೆಗಳನ್ನು ಹೊಂದಿದ್ದರು ಕೂಡ ನಿಮ್ಮ ಫಿಕ್ಸೆಡ್ ಡೆಪಾಸಿಟ್ (Fixed Deposit) ಉಳಿತಾಯ ಖಾತೆ ಕರೆಂಟ್ ಅಕೌಂಟ್ ಎಲ್ಲವನ್ನು ಸೇರಿ 5 ಲಕ್ಷ ರೂಪಾಯಿ ಗಳ ಇನ್ಸೂರೆನ್ಸ್ ಸಿಗುವುದು.
ಇದರ ಅಧೀನದಲ್ಲಿ ಯಾವೆಲ್ಲ ರೀತಿಯ ಡೆಪಾಸಿಟ್ಗಳು ಕವರ್ ಆಗುತ್ತವೆ ಅನ್ನುವುದನ್ನು ಕೂಡ ನೋಡೋಣ ಬನ್ನಿ. ಸೇವಿಂಗ್ ಕರೆಂಟ್ ಫಿಕ್ಸೆಡ್ ಹಾಗೂ ರಿಕರಿಂಗ್ ನಂತಹ ಡೆಪಾಸಿಟ್ಗಳು ಕೂಡ ಕವರ್ ಆಗುತ್ತವೆ. ವಿದೇಶಿ ಸರ್ಕಾರ ಜಮಾ ಮಾಡಿರುವಂತಹ ಹಣ, ಬ್ಯಾಂಕುಗಳ ನಡುವೆ ಪರಸ್ಪರ ಡಿಪೋಸಿಟ್ ಮಾಡಿರುವಂತಹ ಹಣ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಡಿಪಾಸಿಟ್ ಹಣ, ವಿದೇಶದಿಂದ ಬಂದಿರುವಂತಹ ಯಾವುದೇ ಡಿಪೋಸಿಟ್ ಹಣವನ್ನು ಕೂಡ ಈ ನಿಯಮದ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.
ಇನ್ನು ಒಂದು ವೇಳೆ ನೀವು ಜಾಯಿಂಟ್ ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ್ರೆ ಆ ಸಂದರ್ಭದಲ್ಲಿ ತಲಾ 5 ಲಕ್ಷ ರೂಪಾಯಿ ಅಂದರೆ ಒಟ್ಟಾರೆ 10 ಲಕ್ಷ ರೂಪಾಯಿ ವರೆಗೂ ಕೂಡ ಹಣವನ್ನು ರಿಕವರಿ ಮಾಡಿಕೊಳ್ಳಬಹುದು. ಒಂದು ವೇಳೆ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಅಕೌಂಟ್ ಇದ್ದರೆ ಕೂಡ ಅದನ್ನು ಕೂಡ ಇದೇ ಅಧೀನಕ್ಕೆ ಸೇರಿಸಲಾಗುತ್ತದೆ ಹಾಗೂ 5 ಲಕ್ಷ ರೂಪಾಯಿಗಳವರೆಗಿನ ಇನ್ಶುರೆನ್ಸ್ ಅನ್ನು ನೀಡಲಾಗುತ್ತಿದೆ ಆದರೆ ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದು 5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಒಟ್ಟಾರೆಯಾಗಿ ಡೆಪಾಸಿಟ್ ಮಾಡಿದ್ರೆ ಆ ಸಂದರ್ಭದಲ್ಲಿ ಕೇವಲ 5 ಲಕ್ಷ ವರೆಗಿನ ರಿಕವರಿ ಮಾತ್ರ ಸಾಧ್ಯವಿರುತ್ತದೆ.
2021 ರಲ್ಲಿ ಜಾರಿಗೆ ತಂದಿರುವಂತಹ DICGC ಕಟ್ಟು ನಿಟ್ಟಿನ ನಿಯಮದ ಪ್ರಕಾರ ಈ ರೀತಿ ದಿವಾಳಿಯಾದಂತಹ ಅಥವಾ ಸಂಪೂರ್ಣವಾಗಿ ಬಂದ್ ಆಗಿರುವ ಬ್ಯಾಂಕುಗಳಿಂದ ಅದರ ಗ್ರಾಹಕರಿಗೆ DICGC ನಿಯಮಗಳ ಪ್ರಕಾರ 5 ಲಕ್ಷ ರೂಪಾಯಿಗಳವರೆಗಿನ ರಿಕವರಿ ಪರಿಹಾರವನ್ನು 90 ದಿನಗಳ ಒಳಗಾಗಿ ಗ್ರಾಹಕರಿಗೆ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂಬುದಾಗಿ ತಾಕಿತು ಮಾಡಲಾಗಿದೆ. ಮೊದಲೆಲ್ಲ ಈ ಪ್ರಕ್ರಿಯೆ ಎರಡರಿಂದ ಮೂರು ವರ್ಷಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತಿತ್ತು ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಹೀಗಾಗಿ ಬ್ಯಾಂಕಿನ ಖಾತೆಯಲ್ಲಿ 5 ಲಕ್ಷಕ್ಕಿಂತ ಮೀರಿದ ಹಣವನ್ನು ಇಡೋದು ಕೆಲವೊಮ್ಮೆ ಬ್ಯಾಂಕ್ ಮುಳುಗಿ ಹೋದಾಗ ನಿಮಗೆ ಕಷ್ಟ ಆಗಬಹುದು ಎಂಬುದು ಈ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ.