Karnataka Times
Trending Stories, Viral News, Gossips & Everything in Kannada

LIC Kanyadaan Policy: ಈ ಯೋಜನೆಯಲ್ಲಿ ಮಗಳ ಹೆಸರಿನಲ್ಲಿ 150 ರೂಪಾಯಿ ಠೇವಣಿ ಇಡಿ ಸಾಕು, ಮದುವೆ ಸಂದರ್ಭದಲ್ಲಿ ಸಿಗುತ್ತೆ 22 ಲಕ್ಷ ರೂಪಾಯಿ!

advertisement

ತಂದೆ ತಾಯಿಗಳಿಗೆ ಸದಾ ಮಕ್ಕಳ ಭವಿಷ್ಯದ್ದೇ ಚಿಂತೆ. ಅದರಲ್ಲೂ ಮಗಳು ಹುಟ್ಟಿದರೆ ಆಕೆಯ ಶಿಕ್ಷಣ ಹಾಗೂ ಮದುವೆಯ ಬಗ್ಗೆ ತಂದೆ ತಾಯಿ ತಲೆ ಕೆಡಿಸಿಕೊಳ್ಳುವುದು ಸಹಜ. ಇಂದು ಹೆಣ್ಣು ಮಕ್ಕಳನ್ನು ಕೂಡ ಉನ್ನತ ಅಭ್ಯಾಸ ಮಾಡಿಸಲು ಪಾಲಕರು ಶ್ರಮಿಸುತ್ತಾರೆ. ಹಾಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಗೂ ಅವರ ಭವಿಷ್ಯಕ್ಕೆ ಅಗತ್ಯ ಇರುವ ಹಣವನ್ನು ಕೂಡಿಡಲು ಕಷ್ಟ ಪಡುತ್ತಾರೆ. ಹಾಗೆ ನೀವು ಕೂಡ ನಿಮ್ಮ ಮಗಳ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದ್ದರೆ, ನಾವು ಒಂದು ಅತ್ಯುತ್ತಮವಾಗಿರುವ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಇದರಲ್ಲಿ ನೀವು ಮಗಳ ಮದುವೆಯ ಸಮಯಕ್ಕೆ 22 ಲಕ್ಷದ ದೊಡ್ಡ ಮೊತ್ತವನ್ನು ಪಡೆಯುತ್ತೀರಿ.

LIC Kanyadan Scheme:

 

 

ಭಾರತೀಯ ಜೀವ ವಿಮಾ (Life Insurance) ನಿಗಮ ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ವರ್ಗದ ಜನರಿಗೂ ಕೂಡ ಅನುಕೂಲವಾಗುವಂತಹ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅಂತಹ ಯೋಜನೆಗಳಲ್ಲಿ ಎಲ್ಐಸಿಯ ಕನ್ಯಾದಾನ ಯೋಜನೆ (LIC Kanyadan Policy) ಕೂಡ ಒಂದು. ಅತಿ ಕಡಿಮೆ ಆದಾಯ ಹೊಂದಿರುವ ಪೋಷಕರು ಕೂಡ ಎಲ್ಐಸಿ ಯೋಜನೆ (LIC Scheme) ಯಲ್ಲಿ ಹೂಡಿಕೆ ಆರಂಭಿಸಬಹುದು.

advertisement

ಯೋಜನೆಯ ಬಗ್ಗೆ ಮಾಹಿತಿ:

ಎಲ್ಐಸಿಎಲ್ ಕನ್ಯಾದಾನ ಪಾಲಿಸಿ (LIC Kanyadan Policy) ನಿಮ್ಮ ಹೆಣ್ಣು ಮಗುವಿನ ಮದುವೆ ಸಮಯದಲ್ಲಿ ದೊಡ್ಡ ಮೊತ್ತದ ಲಾಭವನ್ನು ಪಡೆದುಕೊಳ್ಳಲು ಇರುವ ಹೂಡಿಕೆ ಯೋಜನೆ ಆಗಿದೆ. ನೀವು ಪ್ರತಿದಿನ 150 ರೂಪಾಯಿಗಳನ್ನು ಮಗಳ ಹೆಸರಿನಲ್ಲಿ ಹೂಡಿಕೆ ಮಾಡಿದರೆ ಈ ಪಾಲಿಸಿ ಮೆಚ್ಯೂರ್ಡ್ ಆಗುವ ಸಮಯದಲ್ಲಿ 22 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಯೋಜನೆಯ ದೊಡ್ಡ ಪ್ರಯೋಜನ ಅಂದ್ರೆ ಒಂದು ವೇಳೆ ಹೂಡಿಕೆ ಮಾಡಿದ ತಂದೆ ಮರಣ ಹೊಂದಿದರೆ ಮತ್ತೆ ಆ ಯೋಜನೆಯನ್ನು ಮುಂದುವರಿಸುವ ಅಗತ್ಯವಿಲ್ಲ. ತಂದೆ ಮರಣ ಹೊಂದಿರುವ ಬಗ್ಗೆ ದಾಖಲೆಗಳನ್ನು ನೀಡಿದರೆ 10 ಲಕ್ಷ ರೂಪಾಯಿಗಳವರೆಗೆ ಪಡೆದುಕೊಳ್ಳಬಹುದು. ಅದರಲ್ಲೂ ತಂದೆ ಅಪಘಾತದಲ್ಲಿ ಮರಣ ಹೊಂದಿದ್ರೆ 20 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಈ ಪಾಲಿಸಿಯನ್ನ ನೀವು ನಿಮ್ಮ ಮಗಳ ಹೆಸರಿನಲ್ಲಿ ಆರಂಭಿಸಬಹುದು ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಕೊಡುವಂತಹ ಯೋಜನೆ ಇದಾಗಿದೆ. ನೀವು ನಿಮ್ಮ ಮಗಳ ಮದುವೆ ಆಗುವವರೆಗೂ ಆಕೆಯ ಶಿಕ್ಷಣ ಹಾಗೂ ಇತರ ಖರ್ಚುಗಳಿಗಾಗಿ ಪ್ರತಿ ವರ್ಷ ಒಂದು ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು ಜೊತೆಗೆ ಪಾಲಿಸಿಯನ್ನು ಮುಂದುವರಿಸಬಹುದು. ಈ ಪಾಲಿಸಿಯ ಮೆಚುರಿಟಿ ಅವಧಿ ಕನಿಷ್ಠ 13 ವರ್ಷಗಳು ಹಾಗೂ ಗರಿಷ್ಠ 30 ವರ್ಷಗಳು. ನಿಮಗೆ ಅನುಕೂಲವಾಗಿರುವ ರೀತಿಯಲ್ಲಿ ಪ್ರೀಮಿಯಂ ಆಯ್ದು ಕೊಳ್ಳಬಹುದು.

ಮಗಳ ಹೆಸರಿನಲ್ಲಿ ಕನ್ಯಾದಾನ ಪಾಲಿಸಿ ಆರಂಭಿಸಲು ಪಾಲಕರು ತಮ್ಮ ಆಧಾರ್ ಕಾರ್ಡ್ (Aadhaar Card), ಆದಾಯ ಪ್ರಮಾಣ ಪತ್ರ (Income Certificate), ಗುರುತಿನ ಚೀಟಿ (Identity Card), ಜನನ ಪ್ರಮಾಣ ಪತ್ರ (Birth Certificate) ವನ್ನು ಸಲ್ಲಿಸಬೇಕು. ಕನ್ಯಾದಾನ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಎಲ್ಐಸಿ ಕಚೇರಿಗೆ ಭೇಟಿ ನೀಡಿ ಅಥವಾ ಎಲ್ಐಸಿ ಏಜೆಂಟ್ ಗಳನ್ನು ಸಂಪರ್ಕಿಸಿ.

advertisement

Leave A Reply

Your email address will not be published.