Karnataka Times
Trending Stories, Viral News, Gossips & Everything in Kannada

FD Interest Rate: ಈ ಖಾಸಗಿ ಬ್ಯಾಂಕ್ ನಲ್ಲಿ 501 ದಿನಗಳವರೆಗೆ ಹೂಡಿಕೆ ಮಾಡಿದರೆ ಎಫ್ ಡಿ ಮೇಲೆ ಸಿಗುತ್ತೆ 9% ಬಡ್ಡಿ

ಈ ವರ್ಷದ ಆರ್ಥಿಕ ಹಣಕಾಸು ವರ್ಷ ಮುಗಿಯುವ ಒಳಗೆ ಕೆಲವು ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲೆ ಬಡ್ಡಿ ದರವನ್ನು ಹೆಚ್ಚಿಸಿದ್ದು ಹಿರಿಯ ಗ್ರಾಹಕರಿಗೆ ಇದು ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಸ್ಥಿರ ಠೇವಣಿಗಳ ಸರಾಸರಿ ಬಡ್ಡಿದರ ಶೇಕಡ 5.5 ನಿಂದ ಶೇಕಡ 7ಕ್ಕೆ ಏರಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರ ಹೆಚ್ಚಿಸುವುದರ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಒಂದು ಕಡೆ ಗ್ರಾಹಕರಿಗೆ ನೀಡುವ ಸಾಲದ ಬಡ್ಡಿದರ ಜಾಸ್ತಿಯಾಗಿದ್ದರೆ, ಇನ್ನೊಂದು ಕಡೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಗಳ ಬಡ್ಡಿದರಗೂ ಕೂಡ ಬ್ಯಾಂಕ್ ಹೆಚ್ಚಿಸಿದೆ. ನಿಶ್ಚಿತ ಠೇವಣಿಯ ಬಡ್ಡಿದರ ಎಂಟರಿಂದ ಒಂಬತ್ತು ಪರ್ಸೆಂಟ್ ವರೆಗೂ ನೀಡಲಾಗುತ್ತಿದೆ.

Advertisement

501 ದಿನಗಳ ಎಫ್ ಡಿ:

Advertisement

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Unity Small Finance Bank) ಇತರ ಎಲ್ಲಾ ಬ್ಯಾಂಕ್ ಗಳಿಗಿಂತಲೂ ಹೆಚ್ಚು ಬಡ್ಡಿದರವನ್ನು ಎಫ್ ಡಿ ಮೇಲೆ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ 50 ಬೇಸಿಸ್ ಪಾಯಿಂಟ್ ಗಳ ಹೆಚ್ಚುವರಿ ಬಡ್ಡಿ ನೀಡುತ್ತಿದ್ದು 9.50% ನಿಗದಿಪಡಿಸಿದೆ. ಈ ಬಗ್ಗೆ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. 181 ರಿಂದ 201 ದಿನಗಳ ಎಫ್ ಡಿ ಮೇಲೆ ಹಾಗೂ 51 ದಿನಗಳ ಎಫ್ ಡಿ ಮೇಲೆ 8.75ಶೇ. ಬಡ್ಡಿ ದರವನ್ನು ಹೆಚ್ಚಿಸಿದೆ. 1001 ದಿನಗಳ ಎಫ್‌ಡಿ ಠೇವಣಿ ಇಟ್ಟರೆ 9% ಬಡ್ಡಿ ದರ ಸಿಗುತ್ತದೆ.

Advertisement

ಹಿರಿಯ ನಾಗರಿಕರಿಗೆ ಸಿಗಲಿದೆ 9.50% ಬಡ್ಡಿ:

Advertisement

Unity Small Finance Bank ಕೂಡ ಹಿರಿಯ ನಾಗರಿಕರ ಸ್ಥಿರ ಠೇವಣಿಯ ಮೇಲೆ ಹೆಚ್ಚಿನ ಗಮನ ನೀಡಿದ್ದು 50 ಬೇಸಿಸ್ ಪಾಯಿಂಟ್ ಆಧಾರದ ಮೇಲೆ ಬಡ್ಡಿಯನ್ನು ಹೆಚ್ಚಿಸಿದೆ. ಹಿರಿಯ ನಾಗರಿಕರು ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 181 ರಿಂದ 21 ದಿನಗಳ ವರೆಗೆ ಹಾಗೂ 51 ದಿನಗಳ ಎಫ್ ಡಿ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ 9.25 %. ಬಡ್ಡಿ ಹಣ ಪಡೆಯಬಹುದು. ಅದೇ ರೀತಿಯಾಗಿ 1001 ದಿನಗಳ ಕಾಲ ಎಫ್ ಡಿ ಇಟ್ಟರೆ 9.50% ಬಡ್ಡಿದರ ಸಿಗುತ್ತದೆ. ಇನ್ನು ಸಾಮಾನ್ಯ ಜನರಿಗೆ ಶೇಕಡ 9 ಬಡ್ಡಿದರ ಸಿಗುತ್ತದೆ.

ಹೆಚ್ಚಳವಾದ Repo Rate:

ಹಣದುಬ್ಬರಕ್ಕೆ ಸಂಬಂಧಪಟ್ಟ ಹಾಗೆ ಆರ್ ಬಿ ಐ (RBI) ಕಳೆದ ಫೆಬ್ರುವರಿ ತಿಂಗಳಿನಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಅಂದರೆ ಶೇಕಡ 0.25 ಹೆಚ್ಚಿಸಿದೆ ಇದರಿಂದ ಬ್ಯಾಂಕಿನ ಸಾಲಗಳ ಬಡ್ಡಿ ಕೂಡ ಹೆಚ್ಚಾಗಿದೆ. ಒಟ್ಟು ಈ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್ (Reserve Bank) ರೆಪೋದರ (Repo Rate) ವನ್ನ 2% ಹೆಚ್ಚಿಸಿದೆ.

Leave A Reply

Your email address will not be published.