Karnataka Times
Trending Stories, Viral News, Gossips & Everything in Kannada

Bank of Baroda: ಬ್ಯಾಂಕ್ ಆಫ್ ಬರೋಡಾದಲ್ಲಿ ಹಣ ಇಟ್ಟವರಿಗೆ ಸಿಹಿಸುದ್ದಿ!.

Advertisement

ಸರ್ಕಾರಿ ಸ್ವಾಮ್ಯತೆಯನ್ನು ಹೊಂದಿರುವಂತಹ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಬ್ಯಾಂಕ್ ಆಫ್ ಬರೋಡ (Bank Of Baroda) ಕೂಡ ಅಗ್ರಗಣ್ಯ ಬ್ಯಾಂಕುಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಇದು ತನ್ನ ಬ್ಯಾಂಕಿನ ಗ್ರಾಹಕರಿಗೆ ಆದಷ್ಟು ಉತ್ತಮವಾದ ಯೋಜನೆಗಳನ್ನು ಜಾರಿಗೆ ತರುವಂತಹ ಪ್ರಯತ್ನವನ್ನು ಪ್ರತಿ ಬಾರಿ ಮಾಡುತ್ತದೆ. ಬನ್ನಿ ಹಾಗಿದ್ರೆ ಲೇಟೆಸ್ಟ್ ಆಗಿ ತನ್ನ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡ ಯಾವ ಯೋಜನೆಯನ್ನು ಜಾರಿಗೆ ತಂದಿದೆ ಎಂಬುದನ್ನು ತಿಳಿಯೋಣ.

BOB ಅಂದರೆ ಬ್ಯಾಂಕ್ ಆಫ್ ಬರೋಡ (Bank of Baroda) ವಿಡಿಯೋ ಬ್ಯಾಂಕಿಂಗ್ ಕೆ ವೈ ಸಿ (Video Banking KYC) ಯನ್ನು ಮಾಡಲು ಪ್ರಾರಂಭಿಸಿದೆ. ಕುಳಿತುಕೊಂಡಲ್ಲಿಂದಲೇ ನೀವು ವಿಡಿಯೋ ಬ್ಯಾಂಕಿಂಗ್ KYC ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು 18 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಆಧಾರ್ ಹಾಗೂ ಪಾನ್ ಕಾರ್ಡ್ (PAN Card) ನಂತಹ ಪ್ರಮುಖ ದಾಖಲೆಗಳನ್ನು ಕೂಡ ನೀವು ಹೊಂದಿರಬೇಕಾಗಿರುತ್ತದೆ. ಇದಕ್ಕಾಗಿ ಮೊದಲು ಬ್ಯಾಂಕ್ ಆಫ್ ಬರೋಡದ (Bank of Baroda) ಅಧಿಕೃತ ವೆಬ್ಸೈಟ್ ಗೆ ಹೋಗಿ KYC ಅಪ್ಡೇಟ್ ಮಾಡಿಸಿಕೊಳ್ಳುವುದಕ್ಕೆ ನೀವು ಅಪ್ಲಿಕೇಶನ್ ಹಾಕಬೇಕಾಗುತ್ತದೆ. ಬ್ಯಾಂಕಿನ ಉದ್ಯೋಗಿ ನಿಮಗೆ ವಿಡಿಯೋ ಕಾಲ್ ಮಾಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ.

ಅಂದರೆ ನೀವು ಮನೆಯಲ್ಲಿ ಕುಳಿತುಕೊಂಡು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನಿಮ್ಮ ಆಧಾರ್ (Aadhaar) ಹಾಗೂ ಪಾನ್ ಕಾರ್ಡ್ (PAN Card) ಸೇರಿದಂತೆ ಬಿಳಿ ಬಣ್ಣದ ಹಾಳೆ ಹಾಗೂ ಕೆಂಪು ಇಲ್ಲವೇ ನೀಲಿ ಬಣ್ಣದ ಪೆನ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ. ಬ್ಯಾಂಕ್ ಆಫ್ ಬರೋಡ (Bank of Baroda) ಹೇಳಿರುವ ಹಾಗೆ ಈ ರೀತಿ ಕೆವೈಸಿ ಮಾಡಿಸಿಕೊಳ್ಳುವಂತಹ ಜನರು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ಒಳಗೆ KYC ಕಾಲ್ ಅನ್ನು ಪಡೆದುಕೊಳ್ಳುವುದಕ್ಕೆ ಸಿದ್ಧರಾಗಿರಬೇಕು ಎಂಬುದಾಗಿ ಹೇಳಿದೆ.

ಇದಾದ ನಂತರ ಗ್ರಾಹಕರಿಗೆ ಸಂಬಂಧಪಟ್ಟಂತಹ ಪ್ರತಿಯೊಂದು ಡೇಟಾ ಕೂಡ ವೆಬ್ಸೈಟ್ನಲ್ಲಿ ಅಪ್ಡೇಟ್ ಆಗುತ್ತದೆ. ಇದಾದ ನಂತರ ಬ್ಯಾಂಕಿನ ಕಡೆಯಿಂದ ಗ್ರಾಹಕರಿಗೆ ಒಂದು ಮೆಸೇಜ್ ಅನ್ನು ಕಳುಹಿಸುವ ಮೂಲಕ ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣವಾಗಿರುವ ಕುರಿತಂತೆ ದೃಢೀಕರಣವನ್ನು ಕಳುಹಿಸಲಾಗುತ್ತದೆ ಎಂದು ಹೇಳಬಹುದಾಗಿದೆ.

2021 ರಲ್ಲಿ ವಿಡಿಯೋ ಕಾಲ್ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸಲಾಗಿತ್ತು ಈಗ ಈ ಸೇವೆಯನ್ನು ಪ್ರತಿಯೊಂದು ಸಾಂಪ್ರದಾಯಿಕ ಗ್ರಾಹಕರಿಗೂ ಕೂಡ ಅನ್ವಯ ಆಗುವಂತೆ ವಿಸ್ತರಿಸಲಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಬ್ಯಾಂಕ್ ಆಫ್ ಬರೋಡ (Bank of Baroda) ಬ್ಯಾಂಕಿನ ಗ್ರಾಹಕರಿಗೆ ಮನೆಯಿಂದ ಕುಳಿತುಕೊಂಡಲ್ಲೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಈ ಮೂಲಕ ಪಡೆದುಕೊಳ್ಳುವುದಕ್ಕೆ ಬ್ಯಾಂಕ್ ಉತ್ತಮವಾದ ಯೋಜನೆಯನ್ನು ಜಾರಿಗೆ ತಂದಿರುವುದನ್ನು ಈ ಮೂಲಕ ನಾವು ಮೆಚ್ಚಿಕೊಳ್ಳಬೇಕಾಗುತ್ತದೆ.

ನಿಜಕ್ಕೂ ಕೂಡ ಮುಂದಿನ ದಿನಗಳಲ್ಲಿ ಈ ರೀತಿಯ ಬ್ಯಾಂಕಿಂಗ್ ವ್ಯವಸ್ಥೆ ಅಡ್ವಾನ್ಸ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಿಗೆ ಬ್ಯಾಂಕಿನ ಕುರಿತಂತೆ ಇನ್ನಷ್ಟು ಹೆಚ್ಚಿನ ನಂಬಿಕೆ ಹಾಗೂ Goodwill ಹೆಚ್ಚಾಗುವಂತೆ ಮಾಡಬಹುದು ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ನೀವು ಕೂಡ ಬ್ಯಾಂಕ್ ಆಫ್ ಬರೋಡದ ಗ್ರಾಹಕರಾಗಿದ್ರೆ ಖಂಡಿತವಾಗಿ ಈ ಸೇವೆಯನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

Also Read: Bank Of Baroda: ಬ್ಯಾಂಕ್ ಆಫ್ ಬರೋಡದಲ್ಲಿ ಲೋನ್ ಪಡೆದವರಿಗೆ ಆಘಾತ! ಧಿಡೀರ್ ನಿಯಮ ಬದಲು.

Leave A Reply

Your email address will not be published.