Karnataka Times
Trending Stories, Viral News, Gossips & Everything in Kannada

Cheque: ಚೆಕ್ ನ ಹಿಂದೆ ಸಹಿ ಮಾಡುವವರಿಗೆ ಹೊಸ ಸೂಚನೆ ಕೊಟ್ಟ ರಿಸರ್ವ್ ಬ್ಯಾಂಕ್!

ಆರ್ಥಿಕ ವ್ಯವಹಾರಕ್ಕಾಗಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ನೀಡುವಂತಹ ಸೇವೆಗಳನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಾರೆ. ಅದರಲ್ಲಿ ವಿಶೇಷವಾಗಿ ದೊಡ್ಡಮಟ್ಟದ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ (Banking Transaction) ಗಳಿಗಾಗಿ ಚೆಕ್ ಬುಕ್ ಅನ್ನು ಪ್ರಮುಖವಾಗಿ ಉಪಯೋಗಿಸಲಾಗುತ್ತದೆ. ಹೀಗಾಗಿ ಚೆಕ್ ಬುಕ್ ಅನ್ನು ಬಳಸುವಾಗ ಕೆಲವೊಂದು ಪ್ರಮುಖ ವಿಚಾರಗಳನ್ನು ಗಮನಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇಲ್ಲವಾದಲ್ಲಿ ಚೆಕ್ ಬೌನ್ಸ್ ಆಗುವಂತಹ ಸಾಧ್ಯತೆ ಕೂಡ ಈ ಸಂದರ್ಭದಲ್ಲಿ ಹೆಚ್ಚಾಗಿರುತ್ತದೆ. ಹಾಗಿದ್ರೆ ಬನ್ನಿ ಚೆಕ್ ಬಳಕೆಯ ಸಂದರ್ಭದಲ್ಲಿ ನೀವು ಅತ್ಯಂತ ಪ್ರಮುಖವಾಗಿ ಗಮನಿಸಿ ಬೇಕಾಗಿರುವಂತಹ ವಿಚಾರ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

Advertisement

ಚೆಕ್ ಬುಕ್ ವಿಚಾರಕ್ಕೆ ಬಂದ್ರೆ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಸಾಮಾನ್ಯ ವಾಗಿ ಜನರಿಗೆ ಮಾಹಿತಿ ಇರೋದಿಲ್ಲ. ಅದರಲ್ಲೂ ವಿಶೇಷವಾಗಿ ನೀವು ಗಮನಿಸಬಹುದು ಚೆಕ್ ಬುಕ್ (Cheque Book) ಹಿಂದಿನ ಭಾಗದಲ್ಲಿ ಸಹಿ ಹಾಕುವುದನ್ನು ಕೂಡ ನೀವು ಗಮನಿಸಿರುತ್ತೀರಿ. ಇದನ್ನು ಯಾತಕ್ಕಾಗಿ ಹಾಕುತ್ತಾರೆ ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಆದರೆ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರ ಏನಂದರೆ ಎಲ್ಲಾ ರೀತಿಯ ಚೆಕ್ ಗಳಲ್ಲಿ ಕೂಡ ಹಿಂದಿನ ಭಾಗದಲ್ಲಿ ಸಹಿ ಹಾಕಲು ಸಾಧ್ಯವಿಲ್ಲ ಅಥವಾ ಸಹಿ ಹಾಕಬೇಕಾದ ಅಗತ್ಯ ಇರುವುದಿಲ್ಲ. Bearer Cheque ಹಿಂಭಾಗದಲ್ಲಿ ಮಾತ್ರ ಸಹಿ ಹಾಕಬೇಕಾಗಿರುತ್ತದೆ ಹಾಗೂ Order Cheque ಹಿಂಭಾಗದಲ್ಲಿ ಸಹಿ ಹಾಕಬೇಕಾದ ಅಗತ್ಯವಿರುವುದಿಲ್ಲ.

Advertisement

ಎಲ್ಲಕ್ಕಿಂತ ಮುಂಚೆ ಈ ಎರಡು ವಿಭಿನ್ನವಾದ ಚೆಕ್ (Cheque) ಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬೇಕಾಗಿರುವುದು ಆದ್ಯ ಕರ್ತವ್ಯ ಆಗಿರುತ್ತದೆ. Bearer Cheque ಎಂದರೆ ಬ್ಯಾಂಕಿಗೆ ಹೋಗಿ ಜಮಾ ಮಾಡುವಂತಹ ಚೆಕ್ ಆಗಿರುತ್ತದೆ ಹಾಗೂ ಈ ಚೆಕ್ ನಲ್ಲಿ ಯಾವುದೇ ಹೆಸರನ್ನು ಬರೆಯಲಾಗಿರುವುದಿಲ್ಲ. ಇದೇ ಕಾರಣಕ್ಕಾಗಿ ಈ ಚೆಕ್ ಹಿಂಭಾಗದಲ್ಲಿ ಸಹಿಯನ್ನು ಮಾಡಬೇಕಾದ ಅಗತ್ಯ ಇರುತ್ತದೆ. Bearer Cheque ಚೆಕ್ ಕಳೆದುಹೋದಲ್ಲಿ ನೀವು ದೊಡ್ಡ ಮಟ್ಟದ ಸಮಸ್ಯೆಗೆ ಸಿಲುಕಿ ಕೊಳ್ಳುತ್ತೀರಿ.

Advertisement

ಯಾಕೆಂದರೆ ಇದರಲ್ಲಿ ಯಾವುದೇ ಹೆಸರನ್ನು ಬರೆದಿಡುವುದಿಲ್ಲ ಕೇವಲ ಹಿಂಬದಿ ಸಹಿ ಮಾತ್ರ ಹಾಕಿಸಿಕೊಂಡಿರುತ್ತಾರೆ. ಇದನ್ನು ಬ್ಯಾಂಕ್ ಹಾಕಿಸಿಕೊಂಡಿರುತ್ತದೆ ಯಾಕಾಗಿ ಅಂದರೆ ಒಂದೋ ಇದು ಟ್ರಾನ್ಸ್ಫರ್ ಆಗಿದೆ ಎನ್ನುವುದಾಗಿ ಇಲ್ಲವೇ ಇಲ್ಲಿ ಇರುವಂತಹ ತಪ್ಪುಗಳಿಗೆ ಬ್ಯಾಂಕ್ ಕಾರಣ ಅಲ್ಲ ಎನ್ನುವುದನ್ನು ಸುನಿಶ್ಚಿತಗೊಳಿಸಲು. ಒಂದು ವೇಳೆ ಇಂತಹ ಚೆಕ್ಕಿನಲ್ಲಿ ಮೊತ್ತ 50,000 ರೂಪಾಯಿ ಗಿಂತ ಹೆಚ್ಚಾಗಿದ್ದರೆ ಇದಕ್ಕಾಗಿ ಅಡ್ವಾನ್ಸ್ ಪ್ರೂಫ್ ಅನ್ನು ಕೂಡ ನೀಡಬೇಕಾಗುತ್ತದೆ. ಮೂರನೇ ವ್ಯಕ್ತಿ ಈ ಚೆಕ್ ಅನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರೆ ಆವಾಗಲೂ ಕೂಡ ಚೆಕ್ ಹಿಂಬದಿಯಲ್ಲಿ ಸಹಿ ಅತ್ಯಗತ್ಯವಾಗಿರುತ್ತದೆ.

Advertisement

ಒಂದು ವೇಳೆ ಒಬ್ಬ ವ್ಯಕ್ತಿ ತನ್ನ ಖಾತೆಯಿಂದಲೇ ಹಣವನ್ನು ತೆಗೆಯುವುದಕ್ಕಾಗಿ Bearers Cheque ಅನ್ನು ಉಪಯೋಗಿಸುತ್ತಿದ್ದಾನೆ ಎಂದರೆ ಅದಕ್ಕಾಗಿ ಆತ ಚೆಕ್ ಹಿಂಬದಿಯಲ್ಲಿ ಸಹಿ ಹಾಕಬೇಕಾದ ಅಗತ್ಯ ಇರುವುದಿಲ್ಲ. Order Cheque ನಲ್ಲಿ ಬೇರೆ ವ್ಯಕ್ತಿಗೆ ಹಣವನ್ನು ಟ್ರಾನ್ಸ್ಫರ್ ಮಾಡಲು ಚೆಕ್ ಅನ್ನು ಬರೆಯಲಾಗುತ್ತದೆ ಹೀಗಾಗಿ ಬ್ಯಾಂಕಿನವರೇ ಆ ವ್ಯಕ್ತಿಯ ವಿವರಗಳನ್ನು ಖುದ್ದಾಗಿ ಪರಿಶೀಲಿಸುತ್ತಾರೆ. ಇದೇ ಕಾರಣಕ್ಕಾಗಿ ಈ ಚೆಕ್ ಬುಕ್ ನಲ್ಲಿ ಹಿಂಬದಿಯಲ್ಲಿ ಸಹಿ ಹಾಕಬೇಕಾದ ಅಗತ್ಯ ಇರುವುದಿಲ್ಲ. ಇಂತಹ ಚಿಕ್ಕ ಪುಟ್ಟ ವಿಚಾರಗಳನ್ನು ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಮಾಡುವಾಗ ನೀವು ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಚಿಕ್ಕ ತಪ್ಪಿನಿಂದಲೂ ಕೂಡ ಚೆಕ್ ಬೌನ್ಸ್(Cheque Bounce) ಆಗುವಂತಹ ಸಾಧ್ಯತೆ ಕೂಡ ಇರುತ್ತದೆ ಎನ್ನುವುದನ್ನು ನೀವು ಮನಗಾಣ ಬೇಕಾಗುತ್ತದೆ.

Leave A Reply

Your email address will not be published.