Karnataka Times
Trending Stories, Viral News, Gossips & Everything in Kannada

RBI Rules: ಈ 3 ಬ್ಯಾಂಕುಗಳಿಂದ ಹಣ ತಗೆಯಲು ಲಿಮಿಟ್ ಹೇರಿದ ರಿಸರ್ವ್ ಬ್ಯಾಂಕ್! ಅಕೌಂಟ್ ಇದ್ದವರಿಗೆ ಆಘಾತ

ಭಾರತದಲ್ಲಿ ಪ್ರತಿಯೊಂದು ಬ್ಯಾಂಕಿಂಗ್ ವ್ಯವಸ್ಥೆ(Banking System ಸೇರಿದಂತೆ ಹೇಳಿ ಅರ್ಥ ವ್ಯವಸ್ಥೆಯನ್ನು ಸರಿಯಾದ ಸಂತುಲಿತ ಕ್ರಮದಲ್ಲಿ ಕಾಯ್ದಿರಿಸಿಕೊಳ್ಳುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅತ್ಯಂತ ಪ್ರಮುಖ ಜವಾಬ್ದಾರಿ ಆಗಿದ್ದು ಕಳೆದ ಕೆಲವು ವರ್ಷಗಳಿಂದಲೂ ಕೂಡ RBI ಈ ಜವಾಬ್ದಾರಿಯನ್ನು ಜವಾಬ್ದಾರಿತವಾಗಿ ನಿರ್ವಹಿಸಿಕೊಂಡು ಬರುತ್ತಿರುವುದು ನಿಜಕ್ಕೂ ಕೂಡ ನಾವೆಲ್ಲರೂ ಮೆಚ್ಚಿಕೊಳ್ಳಬೇಕಾಗಿರುವ ವಿಚಾರವಾಗಿದೆ. ಆದರೆ ಕೆಲವೊಂದು ನಿಯಮಗಳನ್ನು ಬದಲಾಯಿಸುವಂತಹ ಶಕ್ತಿ ಕೂಡ ಆರ್‌ಬಿಐಗೆ ಇರುತ್ತದೆ. ಅದನ್ನು ನಾವು ತಪ್ಪಾದ ರೀತಿಯಲ್ಲಿ ಭಾವಿಸಬಾರದು.

Advertisement

ಹೌದು ಇತ್ತೀಚಿಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank Of India) ದೇಶದ ಮೂರು ಬ್ಯಾಂಕುಗಳ ವಿರುದ್ಧ ಅತ್ಯಂತ ಕಠಿಣವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಕಠಿಣವಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದ ಮಾತ್ರಕ್ಕೆ ಆ ಬ್ಯಾಂಕುಗಳ ಲೈಸೆನ್ಸ್ ಅನ್ನು ರದ್ದು ಮಾಡಿದೆ ಎಂದರ್ಥವಲ್ಲ. ಹಾಗಿದ್ರೆ ಬನ್ನಿ ತೆಗೆದುಕೊಂಡಿರುವ ಕಠಿಣ ನಿರ್ಧಾರ ಏನು ಹಾಗೂ ಆ ಬ್ಯಾಂಕುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಹೌದು ಈ ಬ್ಯಾಂಕುಗಳಲ್ಲಿ ಕೆಲವೊಂದು ಸಮಸ್ಯೆಗಳ ಕಾರಣದಿಂದಾಗಿ ಇಲ್ಲಿನ ಗ್ರಾಹಕರಿಗೆ ಬ್ಯಾಂಕಿನ ಜೊತೆಗೆ ಮಾಡುವಂತಹ ಹಣಕಾಸು ವ್ಯವಹಾರದ ಲಿಮಿಟ್ ಅನ್ನು ತಗ್ಗಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

Advertisement

ಹೀಗಾಗಿ ಒಂದು ವೇಳೆ ನೀವು ಕೂಡ ಈ ಬ್ಯಾಂಕುಗಳ ಗ್ರಾಹಕಲಾಗಿದ್ರೆ, ಕೆಲವು ಸಮಯಗಳ ಕಾಲ ನೀವು ಹೆಚ್ಚಿನ ಹಣದ ಟ್ರಾನ್ಸಾಕ್ಷನ್ ಅನ್ನು ಈ ಬ್ಯಾಂಕುಗಳ ಮೂಲಕ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕಾಗಿದ್ದು ಆ ಬ್ಯಾಂಕುಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಜಯಪ್ರಕಾಶ್ ನಾರಾಯಣ್ ನಗರಿ ಸಹಕಾರಿ ಬ್ಯಾಂಕ್(Jayaprakash Narayan Nagari Sahakari) ನಲ್ಲಿ ಹಣವನ್ನು ಠೇವಣಿ ಇಟ್ಟಿರುವವರಿಗೆ ಹಣವನ್ನು ತೆಗೆಯದಂತೆ ನಿರ್ಬಂಧಿಸಲಾಗಿದೆ ಹಾಗೂ ಕರ್ಮಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಕೇವಲ ಹತ್ತು ಸಾವಿರ ರೂಪಾಯಿ ಹಣವನ್ನು ತೆಗೆಯುವಂತಹ ಲಿಮಿಟ್ ಇಡಲಾಗಿದೆ ಹಾಗೂ ಕೊನೆಯದಾಗಿ ವಿಜಯ್ವಾಡದಲ್ಲಿರುವಂತಹ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಕೇವಲ 1.50 ಲಕ್ಷ ರೂಪಾಯಿವರೆಗೆ ಮಾತ್ರ ಲೇವಾದೇವಿಯನ್ನು ಮಾಡುವಂತಹ ಲಿಮಿಟ್ ಅನ್ನು ಪ್ರತಿಬಂಧಿಸಲಾಗಿದೆ.

Advertisement

ಕಾಯ್ದೆ 1949ರ ಪ್ರಕಾರ ಈ ಎಲ್ಲಾ ನಿಯಮಗಳನ್ನು ಕೂಡ ಮುಂದಿನ ಆರು ತಿಂಗಳವರೆಗೂ ಕೂಡ ಕಾಯ್ದಿರಿಸಲಾಗಿದೆ. ಈ ಸಂದರ್ಭದಲ್ಲಿ RBI ಈ ಬ್ಯಾಂಕುಗಳನ್ನು ಯಾವ ರೀತಿಯಲ್ಲಿ ಮತ್ತೊಮ್ಮೆ ಸರಿಯಾದ ರೀತಿಯಲ್ಲಿ ಮತ್ತೆ ಎದ್ದು ಬರುವ ಹಾಗೆ ಮಾಡಬಹುದು ಎನ್ನುವಂತಹ ಯೋಜನೆಗಳನ್ನು ಹಾಕಿಕೊಳ್ಳಲಿದೆ. ಈ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೂ ಕೂಡ ಇದರ ಪ್ರತಿಯೊಂದು ಚಲನವಲನಗಳನ್ನು ಕೂಡ ಆರ್‌ಬಿಐ ಕಾರ್ಯ ನಿರ್ವಹಿಸಲಿದೆ. ಈ ಎಲ್ಲಾ ನಿಯಮಗಳನ್ನು ಸಡಿಲು ಮಾಡುವಂತಹ ಅಧಿಕಾರವನ್ನು ಕೂಡ ಆರ್ ಬಿ ಐ ಹೊಂದಿದೆ. ಇದೇ ರೀತಿ ಭಾರತ ದೇಶದಲ್ಲಿ ಇನ್ನೂ ಹಲವಾರು ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿರುವ ಕಾರಣದಿಂದಾಗಿ ಇಂತಹ ಕಠಿಣ ನಿಯಮಗಳನ್ನು ತೆಗೆದುಕೊಳ್ಳುವ ಮೂಲಕ ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ RBI ಪ್ರಯತ್ನ ಪಡುತ್ತಿದೆ ಎಂದು ಹೇಳಬಹುದಾಗಿದೆ.

Leave A Reply

Your email address will not be published.