ಸಾಮಾನ್ಯವಾಗಿ ಆದಾಯ ನಿಯಮಗಳ (Income Law) ಪ್ರಕಾರ ಸಂಬಂಧಿಕರಿಂದ ಪಡೆದುಕೊಂಡಿರುವಂತಹ ಸಾಲ (Loan) ಅಥವಾ ಉಡುಗೊರೆ ಇಲ್ಲವೇ ಕಾಣಿಕೆಯನ್ನು ಡೊನೇಶನ್ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಕಾನೂನಿನ ಪ್ರಕಾರ ಇಂತಹ ಬೆಳೆಬಾಳುವಂತಹ ವಸ್ತುಗಳನ್ನು ಗಿಫ್ಟ್ ರೀತಿಯಲ್ಲಿ ನೋಡಲಾಗುತ್ತದೆ. ಆದರೆ ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರವೇನೆಂದರೆ ಇಂತಹ ಎಲ್ಲಾ ಡೊನೇಷನ್ ಅಥವಾ ಗಿಫ್ಟ್ ಗಳು ಒಂದೇ ಕಾನೂನಿನ ಅಡಿಯಲ್ಲಿ ಬರುವುದಿಲ್ಲ ಎನ್ನುವುದಾಗಿ ಇನ್ಕಮ್ ಟ್ಯಾಕ್ಸ್ ಇಲಾಖೆ (Income Tax Department) ಯಿಂದ ಈಗ ಹೊಸ ಕಾನೂನು ಜಾರಿ ಆಗಿರುವುದರಲ್ಲಿ ಹೇಳಲಾಗಿದೆ. ನೀವು ಕೂಡ ನಮ್ಮ ಹಾಗೆ ಗೊಂದಲ ಮಾಡಿಕೊಂಡಿದ್ದರೆ ಬನ್ನಿ ಇದರ ನಿಜವಾದ ಮಾಹಿತಿಗಳನ್ನು ಪಡೆದುಕೊಳ್ಳೋಣ.
ಹತ್ತಿರವಾಗಿರುವಂತಹ ಸಂಬಂಧಿಕರಿಂದ ಪಡೆದುಕೊಂಡಿರುವಂತಹ ಗಿಫ್ಟ್ ಗಳ ಮೇಲೆ ಕೆಲವು ರಿಯಾಯಿತಿಗಳು ಸಿಗುತ್ತವೆ ನಿಜ ಆದರೆ ವರ್ಷಪೂರ್ತಿ ನೀವು ಪಡೆಯುವಂತಹ ಗಿಫ್ಟ್ಗಳ ಮೇಲೆ ರಿಯಾಯಿತಿ ಸಿಗುತ್ತದೆ ಎಂಬುದನ್ನು ಭಾವಿಸಬೇಡಿ ಅದಕ್ಕೂ ಕೂಡ ಇನ್ಕಮ್ ಟ್ಯಾಕ್ಸ್ (Income Tax) ವಿಭಾಗದಿಂದ ಕೆಲವೊಂದು ಮಿತಿಯನ್ನು ವಿಧಿಸಲಾಗಿದೆ. ಉದಾಹರಣೆಗೆ ನೀವು ಲಾಕ್ ಡೌನ್ ಸಂದರ್ಭದಲ್ಲಿ ಬೇರೆಯವರಿಂದ ಅಂದರೆ ನಿಮ್ಮ ಸಂಬಂಧಿಕರ ಬಳಿ ಹಣ (Loan) ಅಥವಾ ಇನ್ನಿತರ ಉಡುಗೊರೆಯ ಸಹಾಯವನ್ನು ಪಡೆದುಕೊಂಡಿದ್ದೀರಿ ಎಂಬುದಾಗಿ ಭಾವಿಸಿ. ಹಾಗಿದ್ದರೆ ಈ ಸಹಾಯದ ಮೇಲೆ ನೀವು ಎಷ್ಟು ಟ್ಯಾಕ್ಸ್ ಅನ್ನು ಕಟ್ಟಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೂಡ ಪಡೆದುಕೊಳ್ಳೋಣ ಬನ್ನಿ.
ಪ್ರತಿವರ್ಷ ತನ್ನ ಕುಟುಂಬಸ್ಥರಿಂದ ಪಡೆದುಕೊಳ್ಳುವಂತಹ ನಗದು ಅಥವಾ ಯಾವುದೇ ವಸ್ತು ರೂಪದ ಸಹಾಯವನ್ನು ಹೆಚ್ಚಿನ ಐವತ್ತು ಸಾವಿರ ರೂಪಾಯಿ ಮೌಲ್ಯದವರೆಗೂ ಕೂಡ ಯಾವುದೇ ಟ್ಯಾಕ್ಸ್ ಇಲ್ಲದೆ ಒಬ್ಬ ವ್ಯಕ್ತಿ ಪಡೆದುಕೊಳ್ಳಬಹುದಾಗಿದ್ದು ಇನ್ನು ಕುಟುಂಬದ ಸದಸ್ಯರ ಕೆಲವೊಂದು ಗಿಫ್ಟ್ ಗಳು ಟ್ಯಾಕ್ಸ್ ಫ್ರೀ ಕೂಡ ಆಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರಲ್ಲಿ ಐದು ಜನ ಸದಸ್ಯರು ಇದ್ದಾರೆ ಎಂದರೆ ಆ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಪ್ರತ್ಯೇಕವಾಗಿ ಐವತ್ತು ಸಾವಿರ ರೂಪಾಯಿಗಳ ವಾರ್ಷಿಕ ರಿಯಾಯಿತಿ ಈ ರೀತಿ ಪಡೆಯುವಂತಹ ಗಿಫ್ಟ್ಗಳ ಮೇಲೆ ವಿಧಿಸಲಾಗುತ್ತದೆ.
ಆ ಲೆಕ್ಕದಲ್ಲಿ ವಾರ್ಷಿಕವಾಗಿ ಈ ಕುಟುಂಬದ ಮೇಲೆ 2.5 ಲಕ್ಷಗಳವರೆಗೆ ಟ್ಯಾಕ್ಸ್ ಫ್ರೀ (Tax Free) ನಿಯಮವನ್ನು ಅಳವಡಿಸಬಹುದಾಗಿದೆ. 50,000 ಕ್ಕಿಂತ ಹೆಚ್ಚಿನ ಮೌಲ್ಯದ ಗಿಫ್ಟ್ ಅನ್ನು ಪಡೆದುಕೊಂಡರೆ ಅದನ್ನು ಬೇರೆ ಮೂಲದ ಆದಾಯ ಎನ್ನುವುದಾಗಿ ಪರಿಗಣಿಸಲಾಗಿ ಆ ಟ್ಯಾಕ್ಸ್ ಸ್ಲಾಬ್(Tax Slab) ಮೇಲೆ ಟ್ಯಾಕ್ಸ್ ಅನ್ನು ವಿಧಿಸಲಾಗುತ್ತದೆ. ಕಷ್ಟದ ಸಂದರ್ಭಗಳಲ್ಲಿ ಈ ರೀತಿಯ ಸಹಾಯಗಳನ್ನು ಟ್ಯಾಕ್ಸ್ ರೂಪದಲ್ಲಿ ಕಾಣುವುದು ಸಾಕಷ್ಟು ಬೇಸರವನ್ನು ತರುತ್ತದೆ ಆದರೆ ಕೆಲವೊಂದು ಸಂಬಂಧಿಗಳಿಂದ ಪಡೆಯುವ ಸಹಾಯ ಸಂಪೂರ್ಣ ಟ್ಯಾಕ್ಸ್ ಫ್ರೀ ಆಗಿರುತ್ತದೆ. ಹಾಗಿದ್ದರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಸಂಬಂಧಿಕರಿಂದ ಪಡೆಯುವಂತಹ ಪ್ರತಿಯೊಂದು ಸಹಾಯಗಳು ಕೂಡ ಡೊನೇಷನ್ ಅಥವಾ ಗಿಫ್ಟ್ ರೂಪದಲ್ಲಿ ಅಂದರೆ ಟ್ಯಾಕ್ಸ್ ನಿಯಮದ (Income Tax Rules) ಅಡಿಯಲ್ಲಿ ಬರುವುದಿಲ್ಲ. ಅತ್ಯಂತ ಆತ್ಮೀಯ ಸಂಬಂಧಿಕರಿಂದ ಪಡೆಯುವಂತಹ ಕೆಲವೊಂದು ಹುಡುಗರಿಗಳು ಸಂಪೂರ್ಣವಾಗಿ ಟ್ಯಾಕ್ಸ್ ರಹಿತವಾಗಿರುತ್ತದೆ. ಸ್ವಂತ ಅಣ್ಣ ತಮ್ಮಂದಿರಿಂದ ಅಕ್ಕತಂಗಿಯರಿಂದ ಇಲ್ಲವೇ ನಿಮ್ಮ ಜೀವನ ಸಂಗಾತಿ ಅಥವಾ ತಂದೆ ತಾಯಿಯರಿಂದ ಪಡೆದುಕೊಳ್ಳುವಂತಹ ಉಡುಗೊರೆಗಳನ್ನು ಈ ಟ್ಯಾಕ್ಸ್ ಪರಿಧಿಯಿಂದ ಹೊರಗಿಡಲಾಗುತ್ತದೆ. ಇವರಿಂದ ಪಡೆದುಕೊಳ್ಳುವಂತಹ ಸಹಾಯ ಹಾಗೂ ಉಡುಗೊರೆಗೆ ಯಾವುದೇ ಟ್ಯಾಕ್ಸ್ ಮಿತಿಯನ್ನು ವಿಧಿಸಲಾಗುವುದಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.