Karnataka Times
Trending Stories, Viral News, Gossips & Everything in Kannada

Bank Loan: ಸಾಲ ಕಟ್ಟಲು ಸಾಧ್ಯವಾಗದೆ ಇದ್ದವರಿಗೆ ಬ್ಯಾಂಕ್ ಹೊಸ ರೂಲ್ಸ್! ಜನರಿಗೆ 4 ಹೊಸ ಅಧಿಕಾರ

Advertisement

ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪ್ರತಿಯೊಂದು ಕುಟುಂಬಗಳು ಕೂಡ ಬ್ಯಾಂಕಿನಿಂದ ಲೋನ್ ಪಡೆದುಕೊಳ್ಳುವಂತಹ ಆಕೆಯನ್ನು ಮೊದಲನೇ ಆಯ್ಕೆಯನ್ನಾಗಿ ಆಯ್ಕೆ ಮಾಡುತ್ತವೆ. ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳು ತಾವು ಯಾವುದೇ ಮನೆ ಅಥವಾ ಆಸ್ತಿಯನ್ನು ಖರೀದಿಸಬೇಕು ಎಂದಾದರೆ ಒಂದೇ ಸಲ ಅವರ ಬಳಿ ಹಣವನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ಲೋನ್(Loan) ಪಡೆದುಕೊಳ್ಳುವಂತಹ ಆಯ್ಕೆಯನ್ನು ಅವರು ಮೊದಲು ಆರಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಲೋನ್ ತೀರಿಸಲು ಸಾಧ್ಯವಾಗದೆ ಹೋದಾಗ ಅವರು ಲೋನ್ ಮಾಡಲು ಯಾವ ವಸ್ತು ಅಥವಾ ಆಸ್ತಿಯನ್ನು ಅಡವಿಟ್ಟಿದ್ದರು ಬ್ಯಾಂಕ್ ಅದನ್ನು ವಶಪಡಿಸಿಕೊಂಡು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿ ಆದಂತಹ ನಷ್ಟವನ್ನು ತೀರಿಸಿಕೊಳ್ಳುತ್ತದೆ. ಈ ಸಂದರ್ಭವನ್ನು ಕಾಣುವ ಮುಂಚೆ ನಾವು ಆರ್ಟಿಕಲ್ ನಲ್ಲಿ ಹೇಳಿರುವಂತಹ ಈ ಮಾಹಿತಿಯನ್ನು ಪ್ರಮುಖವಾಗಿ ಓದಿ ಹಾಗೂ ಆ ಸಂದರ್ಭದಲ್ಲಿ ಇದನ್ನು ನೀವು ಉಪಯೋಗಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಯಾವ ಕೆಲಸವೂ ಕೂಡ ನಂಬಿಕೆಗೆ ಅರ್ಹವಾದುದಲ್ಲ ಎಂದು ಹೇಳಬಹುದಾಗಿದೆ ಯಾಕೆಂದರೆ ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಕೋಟ್ಯಾಧೀಶರರು ಭಿಕ್ಷಾಧಿಪತಿಗಳು ಆಗಿದ್ದನ್ನು ಕೂಡ ನಾವು ನೋಡಿದ್ದೇವೆ. ಸಾಲವನ್ನು ತೆಗೆದುಕೊಳ್ಳುವಾಗಲೇ ಮೊದಲು ನೀವು ಅದನ್ನು ಕೊಟ್ಟಲು ಸಾಧ್ಯವಾಗುತ್ತಾ ಇಲ್ಲವೋ ಎನ್ನುವುದನ್ನು ಯೋಚಿಸಿ ನಂತರವಷ್ಟೇ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನೀವು ಸಾಲವನ್ನು ಕಟ್ಟಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿಯಲ್ಲಿದ್ದರೂ ಕೂಡ ನಿಮಗೆ ಮಾನವೀಯ ದೃಷ್ಟಿಯಿಂದ ಕೆಲವೊಂದು ಅಧಿಕಾರಗಳನ್ನು ಕೂಡ ನೀಡಲಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ನೀವು EMI ಕಂತನ್ನು ಕಟ್ಟುವುದನ್ನು ತಪ್ಪಿಸಿದರೆ ನಿಮಗೆ Reminder Notice ಅನ್ನು ಕಳುಹಿಸುತ್ತದೆ.

ನೀವು ಸತತವಾಗಿ ಮೂರು ಕಂತುಗಳನ್ನು ಕಟ್ಟದೆ ಹೋದಲ್ಲಿ ಆ ಸಂದರ್ಭದಲ್ಲಿ ಬ್ಯಾಂಕ್ ಸಾಲವನ್ನು ಮರುಪಾವತಿಸುವ Legal Notice ಅನ್ನು ಕಳುಹಿಸಿಕೊಳ್ಳುತ್ತದೆ. ಇದಾದ ನಂತರ ನೀವು ಸಾಲವನ್ನು ಕಟ್ಟಿದ ಹೋದಲ್ಲಿ ನಿಮ್ಮನ್ನು ಡೀಫಾಲ್ಟರ್ ಎಂಬುದಾಗಿ ಘೋಷಿಸಲಾಗುತ್ತದೆ. ನಿಮ್ಮಿಂದ ಹಣವನ್ನು ಪಡೆಯಲು ಬ್ಯಾಂಕ್ ಏಜೆಂಟರನ್ನು ಬಳಸಿಕೊಳ್ಳಬಹುದು ಆದರೆ ಆ ಏಜೆಂಟರು ನಿಮ್ಮ ಜೊತೆಗೆ ಅನುಚಿತವಾಗಿ ವರ್ತಿಸುವ ಹಾಗಿಲ್ಲ ಒಂದು ವೇಳೆ ಹಾಗೆ ವರ್ತಿಸಿದರೆ ನೀವು ಅವರ ವಿರುದ್ಧ ದೂರನ್ನು ಸಲ್ಲಿಸುವ ಅಧಿಕಾರವನ್ನು ಹೊಂದಿರುತ್ತೀರಿ. ಒಂದು ವೇಳೆ ಬ್ಯಾಂಕಿಗೆ ದೂರು ನೀಡಿದಾಗ ಅವರು ಸರಿಯಾಗಿ ಪ್ರತಿಕ್ರಿಯೆ ನೀಡದೆ ಹೋದಲ್ಲಿ Bank Ombudsman ನಲ್ಲಿ ಕೂಡ ನೀವು ಇದರ ಬಗ್ಗೆ ದೂರನ್ನು ಸಲ್ಲಿಸಬಹುದಾಗಿದೆ.

ನೇರವಾಗಿ ನಿಮ್ಮ ಆಸ್ತಿಯನ್ನು ಕಬ್ಜ ಮಾಡಿಕೊಳ್ಳಲು ಕೂಡ ಬ್ಯಾಂಕ್ ಗೆ ಸಾಧ್ಯವಿಲ್ಲ. 9 ದಿನಗಳ ಕಾಲ ನೀವು ಹಣವನ್ನು ಕಟ್ಟದೆ ಹೋದಲ್ಲಿ ಆಗ ನಿಮ್ಮ ಆಸ್ತಿಯನ್ನು ಬ್ಯಾಂಕ್ NPA ಎಂಬುದಾಗಿ ಘೋಷಿಸುತ್ತದೆ. ಈ ಸಂದರ್ಭದಲ್ಲಿ ಕೂಡ 60 ದಿನಗಳ ಕಾಲ ಸಾಲ ಕಟ್ಟುವುದಕ್ಕೆ ಸಾಲಗಾರನಿಗೆ ಅವಕಾಶವನ್ನು ನೀಡಲಾಗುತ್ತದೆ ಆ ಸಂದರ್ಭದಲ್ಲಿ ಕೂಡ ಆತ ಸಾಲವನ್ನು ಕಟ್ಟದೆ ಹೋದಲ್ಲಿ ಅವರ ಆಸ್ತಿಯನ್ನು ಹರಾಜು ಮಾಡುವುದಕ್ಕೆ ಬ್ಯಾಂಕ್ ಮುಂದುವರಿಯಬಹುದಾಗಿದೆ. ಈ ಸಂದರ್ಭದಲ್ಲಿ ಕೂಡ ಹರಾಜು ಪ್ರಕ್ರಿಯೆಯಲ್ಲಿ ಮುಂದುವರಿಯುವುದಕ್ಕಿಂತ ಮುಂಚೆ 30 ದಿನಗಳ ನಂತರ ಕಾದು ಪಬ್ಲಿಕ್ ನೋಟ್ಸ್ ಅನ್ನು ಕಳಿಸಬೇಕಾಗುತ್ತದೆ.

ನೀವು ಎಲ್ಲಿಂದ ಸಾಲವನ್ನು ಪಡೆದಿದ್ದೀರೋ ಆ ಬ್ಯಾಂಕು ಅಥವಾ ಫೈನಾನ್ಸಿಯಲ್ ಸಂಸ್ಥೆಗಳು(Financial Company) ನಿಮ್ಮ ಆಸ್ತಿಯನ್ನು ಹರಾಜು ಹಾಕುವುದಕ್ಕಿಂತ ಮುಂಚೆ ಅದರ ಮೌಲ್ಯವನ್ನು ಮೊದಲಿಗೆ ಬಹಿರಂಗಪಡಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಹೇಳಿರುವಂತಹ ಆಸ್ತಿಯ ಮೌಲ್ಯಕ್ಕಿಂತ ಕಡಿಮೆ ಎಂದು ಅನಿಸಿದರೆ ನೀವು ಆ ಬೆಲೆಯ ವಿರುದ್ಧ ಚಾಲೆಂಜ್ ಹಾಕಬಹುದಾದ ಪ್ರತಿಯೊಂದು ಹಕ್ಕುಗಳು ಕೂಡ ನಿಮಗೆ ಕಾನೂನಿನ ಅಡಿಯಲ್ಲಿದೆ. ಹೀಗಾಗಿ ಇವಿಷ್ಟು ಅಧಿಕಾರಗಳನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.