ಭಾರತದಲ್ಲಿ ಪ್ರತಿಯೊಂದು ಬ್ಯಾಂಕುಗಳು ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ RBI ಅಧೀನದಲ್ಲಿ ಬರುತ್ತದೆ. ಬ್ಯಾಂಕುಗಳಲ್ಲಿ ಅಕೌಂಟ್ ಮಾಡಿದರೆ ಸಾಕು ನಿಮಗೆ ಎಟಿಎಂ ಕಾರ್ಡ್(ATM Card) ಸೇರಿದಂತೆ ಚೆಕ್ ಬುಕ್ ಜೊತೆಗೆ ಇನ್ನು ಹಲವಾರು ಸೌಲಭ್ಯಗಳನ್ನು ಬ್ಯಾಂಕುಗಳು ಒದಗಿಸುತ್ತವೆ. ಇನ್ನು ಬ್ಯಾಂಕುಗಳಲ್ಲಿ ಎಟಿಎಂ ಕಾರ್ಡ್ ನೀಡಿದಾಗ ಅದನ್ನು ಉಚಿತವಾಗಿ ಎಷ್ಟು ಬಾರಿ ಬಳಸಿಕೊಳ್ಳಬಹುದು ಎನ್ನುವಂತಹ ಲಿಮಿಟ್ ಅನ್ನು ಕೂಡ ನಿಗದಿಪಡಿಸಿರುತ್ತಾರೆ. ಅದಕ್ಕಿಂತ ಹೆಚ್ಚಿನ ಟ್ರಾಂಧ್ಯಾಕ್ಷರಗಳನ್ನು ಮಾಡಿದಾಗ ನೀವು ಚಾರ್ಜಸ್ ಗಳನ್ನು ಕಟ್ಟಬೇಕಾಗುತ್ತದೆ. ಹಾಗಿದ್ರೆ ಬನ್ನಿ ದೇಶದ ಪ್ರಮುಖ ಬ್ಯಾಂಕುಗಳು ಈ ರೀತಿಯ ಟ್ರಾನ್ಸಾಕ್ಷನ್ ಮೇಲೆ ಎಷ್ಟು ಚಾರ್ಜಸ್ ಚಾರ್ಜ್ ಮಾಡುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ.
ಮೊದಲಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್(PNB Bank) ಬಗ್ಗೆ ಮಾತನಾಡುವುದಾದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೆಟ್ರೋ ಹಾಗೂ ಚಿಕ್ಕ ನಗರಗಳಲ್ಲಿ ಪ್ರತಿ ತಿಂಗಳಿಗೆ 5 ಉಚಿತ ಟ್ರಾನ್ಸಾಕ್ಷನ್ ಗಳನ್ನು ಮಾಡುವಂತಹ ಅವಕಾಶವನ್ನು ನೀಡುತ್ತದೆ ಹಾಗೂ ನಿಮ್ಮ ಪಿನ್ ಅನ್ನು ಬದಲಾವಣೆ ಮಾಡುವುದಕ್ಕೆ ಕೂಡ ಹತ್ತು ರೂಪಾಯಿಗಳ ಚಾರ್ಜ್ ಅನ್ನು ವಿಧಿಸುತ್ತದೆ. ಕ್ಯಾಶ್ ಟ್ರಾನ್ಸಾಕ್ಷನ್ ಮೇಲಿನ ಲಿಮಿಟ್ ಮಿತಿಮೀರಿದಾಗ 21 ರೂಪಾಯಿ ಜೊತೆಗೆ ಜಿಎಸ್ಟಿಯನ್ನು ವಿಧಿಸುತ್ತದೆ ಹಾಗೂ ನಾನ್ ಕ್ಯಾಶ್ ಟ್ರಾನ್ಸಾಕ್ಷನ್ ಮೇಲೆ 9 ರೂಪಾಯಿ ಹಾಗೂ ಜಿಎಸ್‌ಟಿಯನ್ನು ವಿಧಿಸುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು 25,000 ಗಿಂತ ಹೆಚ್ಚಿನ ಬ್ಯಾಲೆನ್ಸ್ ಅಕೌಂಟ್ ನವರಿಗೆ 5 ಉಚಿತ ಟ್ರಾನ್ಸಾಕ್ಷನ್ ಗಳನ್ನು ಎರಡು ವಿಭಾಗಕ್ಕೂ ಸಲ್ಲುವಂತೆ ನೀಡಿದ್ದಾರೆ. ಲಿಮಿಟ್ ಮೇರಿದರೆ ಈ ಸಂದರ್ಭದಲ್ಲಿ ಹತ್ತು ರೂಪಾಯಿ ನೀಡಬೇಕಾಗುತ್ತದೆ. ಇನ್ನು ಎಸ್‌ಬಿಐ ಎಟಿಎಂ ಕಾರ್ಡ್ ನಿಂದ ಬೇರೆ ಬ್ಯಾಂಕಿನ ಎಟಿಎಂ ಕಾರ್ಡ್ ಮೆಷಿನ್ ನಲ್ಲಿ ಹಣವನ್ನು ತೆಗೆದರೆ 20 ರೂಪಾಯಿ ಹಾಗೂ ಜಿಎಸ್ಟಿಯನ್ನು ವಿಧಿಸಲಾಗುತ್ತದೆ. ICICI BANK. ಐಸಿಐಸಿಐ ಬ್ಯಾಂಕ್ ನಲ್ಲಿ ಮೂರು ಟ್ರಾನ್ಸಾಕ್ಷನ್ ಗಳನ್ನು ಮಾಡುವ ಉಚಿತ ಅವಕಾಶವನ್ನು ನೀಡಲಾಗುತ್ತದೆ ಅದಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಮಾಡಿದಲ್ಲಿ ನಾನ್ ಫೈನಾನ್ಸಿಯಲ್ ಟ್ರಾನ್ಸಾಕ್ಷನ್ ಗಳಿಗೆ 8.5 ಹಾಗೂ ಫೈನಾನ್ಸಿಯಲ್ ಟ್ರಾನ್ಸಾಕ್ಷನ್ ಗಳಿಗೆ 21 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.
HDFC Bank: ಹೆಚ್ ಡಿ ಎಫ್ ಸಿ ಬ್ಯಾಂಕಿನ ಗ್ರಾಹಕರುಗಳಿಗೆ ಪ್ರತಿ ತಿಂಗಳು 5 ಉಚಿತ ಟ್ರಾನ್ಸಾಕ್ಷನ್ ಗಳನ್ನು ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಲಿಮಿಟ್ ಮೀರಿ ಎಟಿಎಂನಿಂದ ಹಣವನ್ನು ತೆಗೆಯಲು ಹೋದರೆ ಪ್ರತಿ ಟ್ರಾನ್ಸಾಕ್ಷನ್ ಗಳಿಗೆ 20 ರೂಪಾಯಿ ಕ್ಯಾಶ್ ಟ್ರಾನ್ಸಾಕ್ಷನ್ ಗಳಿಗೆ ಹಾಗೂ ನಾನ್ ಕ್ಯಾಶ್ ಟ್ರಾನ್ಸಾಕ್ಷನ್ ಗಳಿಗೆ ನೀವು 8.5 ರೂಪಾಯಿಗಳನ್ನು ಚಾರ್ಜ್ ನೀಡಬೇಕಾಗುತ್ತದೆ. ಇವಿಷ್ಟು ಭಾರತೀಯ ಪ್ರಮುಖ ಬ್ಯಾಂಕುಗಳಾಗಿದ್ದು ಇವುಗಳ ಎಟಿಎಂ ಕ್ಯಾಶ್ ಟ್ರಾನ್ಸಾಕ್ಷನ್ಗಳ ಮೇಲೆ ವಿಧಿಸಲಾಗುವಂತಹ ಚಾರ್ಜ್ ಗಳ ಬಗ್ಗೆ ನಾವು ಈ ಆರ್ಟಿಕಲ್ ನಲ್ಲಿ ಸಂಪೂರ್ಣವಾಗಿ ನಿಮಗೆ ವಿವರಿಸಿದ್ದೇವೆ.