Karnataka Times
Trending Stories, Viral News, Gossips & Everything in Kannada

RBI: ಲೋನ್ ವಿಚಾರವಾಗಿ ನಿಯಮ ಬದಲಾವಣೆ ಮಾಡಿದ ರಿಸರ್ವ್ ಬ್ಯಾಂಕ್! EMI ಕಟ್ಟುವವರಿಗೆ ಹೊಸ ಸೂಚನೆ.

RBI ಬ್ಯಾಂಕುಗಳ ಲೋನ್ ನಿಯಮದ ಮೇಲೆ ಕೆಲವೊಂದು ಬದಲಾವಣೆಗಳನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಲೋನ್ ಪಡೆದುಕೊಂಡಿರುವಂತಹ ಗ್ರಾಹಕರು ಸರಿಯಾದ ಸಮಯದಲ್ಲಿ EMI ಕಟ್ಟದೆ ಹೋದಲ್ಲಿ ಆ ಸಂದರ್ಭದಲ್ಲಿ ಪೆನಾಲ್ಟಿಯ ಮೇಲೆ ಬಡ್ಡಿ ಕೂಡ ಹಾಕಲಾಗುತ್ತಿತ್ತು (Penal Interest). ಇದನ್ನು ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದುಕೊಳ್ಳುವಂತಹ ಬದಲಾವಣೆಯನ್ನು ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಈ ವಿಚಾರದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Advertisement

ಆರ್‌ಬಿಐ (RBI) ನಿಯಮಗಳು ಹೇಳಿರುವ ಪ್ರಕಾರ ಮುಂದಿನ ವರ್ಷ ಅಂದರೆ 2024ರ ಜನವರಿ ಒಂದರಿಂದ ಪ್ರಾರಂಭವಾಗಿ ಯಾವುದೇ ಬ್ಯಾಂಕುಗಳು ಅಥವಾ NBFC ಸಂಸ್ಥೆಗಳು ಇಎಂಐ ಬೌನ್ಸ್ (EMI Bounce) ಆದರೆ ಆ ಸಂದರ್ಭದಲ್ಲಿ ಅದರ ಮೇಲೆ ಪೆನಾಲ್ಟಿಯನ್ನು ವಿಧಿಸಬಹುದು ಆದರೆ ಫೈನಲ್ಟಿ ಮೇಲೆ ಬಡ್ಡಿ ವಿಧಿಸುವ ಹಕ್ಕು ಇರುವುದಿಲ್ಲ ಎಂಬುದಾಗಿ ಆರ್ಬಿಐ ಸ್ಪಷ್ಟಪಡಿಸಿದೆ. ಈ ಮೂಲಕ ಪೆನಾಲ್ಟಿಯ ಬಡ್ಡಿಯ ಮೇಲೆ ಹಣವನ್ನು ಸಂಪಾದಿಸುವಂತಹ ಬ್ಯಾಂಕುಗಳ ಚಟುವಟಿಕೆಗಳನ್ನು ಮುಂದಿನ ವರ್ಷದ ಮೊದಲನೇ ತಾರೀಖಿನಿಂದಲೇ ನಿಲ್ಲಿಸಲಾಗುತ್ತದೆ.

Advertisement

RBI ಯಾಕೆ ಇಂತಹ ನಿಯಮವನ್ನು ಬದಲಾಯಿಸುತ್ತಿದೆ ಎನ್ನುವುದರ ಬಗ್ಗೆ ಕೂಡ ಖಂಡಿತವಾಗಿ ಪ್ರತಿಯೊಬ್ಬರಿಗೂ ಕೂಡ ಆಸಕ್ತಿ ಇರಬಹುದು. ಬನ್ನಿ ಆ ಕುತುಹಲವನ್ನು ಕೂಡ ಬಗೆಹರಿಸುವ ಪ್ರಯತ್ನವನ್ನು ಮಾಡೋಣ. ಮೊದಲಿನಿಂದಲೂ ಕೂಡ ಗ್ರಾಹಕರು ಈ ರೀತಿ ಬ್ಯಾಂಕಿ ನವರು ಈ ರೀತಿಯ ಪೆನಾಲ್ಟಿ ಬಡ್ಡಿ ಎನ್ನುವ ರೀತಿಯಲ್ಲಿ ಸಾಕಷ್ಟು ಹಣವನ್ನು ದೋಚುತಿದ್ದಾರೆ ಎಂಬುದಾಗಿ ರಿಸರ್ವ್ ಬ್ಯಾಂಕಿಗೆ ದೂರನ್ನು ಸಲ್ಲಿಸುತ್ತಿದ್ದರು.

Advertisement

ಸಿಕ್ಕಿರುವಂತಹ ಅಂಕಿ ಅಂಶಗಳ ಪ್ರಕಾರ 2018 ರಿಂದ ಮಿನಿಮಮ್ ಬ್ಯಾಲೆನ್ಸ್ ಪೆನಾಲ್ಟಿ ಹೆಚ್ಚಿನ ಎಟಿಎಂ ಟ್ರಾನ್ಸಾಕ್ಷನ್ SMS ಸರ್ವಿಸ್ ನಂತಹ ಹಲವಾರು ಸರ್ವಿಸ್ ಹಾಗೂ ಬೇರೆ ಬೇರೆ ರೀತಿಯ ಕೆಲಸಗಳಿಗಾಗಿ ಚಾರ್ಜ್ ಎಂದು ಹಣವನ್ನು ವಸೂಲು ಮಾಡುತ್ತಾ 35,587 ಕೋಟಿ ರೂಪಾಯಿ ಅನ್ನು ಪೆನಾಲ್ಟಿಯ ರೂಪದಲ್ಲಿ ಈಗಾಗಲೇ ವಸೂಲು ಮಾಡಿವೆ ಎಂಬುದಾಗಿ ತಿಳಿದು ಬಂದಿದೆ.

Advertisement

ಇದೇ ರೀತಿ ಕಳೆದ ಐದು ವರ್ಷಗಳಿಂದಲೂ ಕೂಡ ಈ ರೀತಿಯ ಚಿಕ್ಕಪುಟ್ಟ ತಪ್ಪು ಅಥವಾ ಟ್ರಾನ್ಸಾಕ್ಷನ್ಗಳ ಮೇಲು ಕೂಡ ರೆನಾಲ್ಟಿಯ ರೂಪದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಬ್ಯಾಂಕುಗಳು ವಸೂಲು ಮಾಡಿರುವುದು ಕಂಡುಬಂದಿದ್ದು ಇದೇ ಹಿನ್ನೆಲೆಯಲ್ಲಿ ಜನರು ಕೂಡ ಆರ್‌ಬಿಐ (RBI) ನಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿ ದೂರುನ್ನು ಕೂಡ ಸಲ್ಲಿಸಿದ್ದಾರೆ. ಗ್ರಾಹಕರ ದೂರಿನ ಆಧಾರದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ಕಾರ್ಯಚರಣೆಯನ್ನು ಮಾಡುವಂತಹ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಬಹುದಾಗಿದೆ.

ಕೇಂದ್ರೀಯ ಬ್ಯಾಂಕಿನಿಂದ ತಿಳಿದು ಬಂದಿರುವ ಪ್ರಕಾರ RE’s ಗಳು ಕೇವಲ ಪೆನಾಲ್ಟಿ ಮಾತ್ರವಲ್ಲದ ಪೆನಾಲ್ಟಿಯ ಮೇಲೆ ಬಡ್ಡಿದರವನ್ನು ಕೂಡ ವಸೂಲು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದೇ ಕಾರಣಕ್ಕಾಗಿ RBI Guidelines ಪ್ರಕಾರ ಮುಂದಿನ ವರ್ಷದ ಮೊದಲನೇ ತಾರೀಖಿನಿಂದ ಯಾವುದೇ ಪೆನಾಲ್ಟಿಯ ಮೇಲೆ ಬಡ್ಡಿದರವನ್ನು ಯಾವುದೇ ಬ್ಯಾಂಕುಗಳು ವಿಧಿಸುವ ಹಾಗಿಲ್ಲ ಎನ್ನುವ ಕಟ್ಟುನಿಟ್ಟಿನ ಸುತ್ತೋಲೆಯನ್ನು ಹೊರಡಿಸಿದೆ.

Also Read: Loan: ಕಡಿಮೆ ಸಂಬಳ ಇದ್ದರು ಕೂಡಾ ಈ ಬ್ಯಾಂಕ್‌ ಗಳು ಸಾಲ ನೀಡುತ್ತದೆ ಮುಗಿಬಿದ್ದ ಜನತೆ.

Leave A Reply

Your email address will not be published.