Karnataka Times
Trending Stories, Viral News, Gossips & Everything in Kannada

LIC Scheme: LIC ಯಲ್ಲಿ 5 ವರ್ಷದಲ್ಲಿ ಡಬಲ್ ಆಗಲಿದೆ ಹಣ! ಈ ಯೋಜನೆಗೆ ಮುಗಿಬಿದ್ದ ಮಹಿಳೆಯರು

Advertisement

ನಾವು ನಮ್ಮ ಭವಿಷ್ಯಕ್ಕೋಸ್ಕರ ಹೂಡಿಕೆ ಮಾಡಿದರೆ ಒಳ್ಳೆಯದು. ಆದರೆ ಎಲ್ಲಿ, ಎಷ್ಟು ಹೂಡಿಕೆ ಮಾಡಬೇಕು? ಎಷ್ಟು ಅವಧಿಗೆ ಹೂಡಿಕೆ ಮಾಡಬೇಕು? ಎಷ್ಟು ಹೂಡಿಕೆ ಮಾಡಿದರೆ ನಮಗೆ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಹೂಡಿಕೆ ಮಾಡಿದರೆ ಒಳ್ಳೆಯದು. ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ನಿರೀಕ್ಷೆ ಮಾಡುತಿದ್ದರೆ ಭಾರತೀಯ ಜೀವ ವಿಮಾ ನಿಗಮದ ಹೂಡಿಕೆ ಪ್ಲಸ್ ಯೋಜನೆಯನ್ನು ನೀವು ತೆಗೆದುಕೊಳ್ಳಬಹುದು.

LIC ನಿವೇಶ್ ಪ್ಲಸ್ ಪ್ಲಾನ್:

ಇದು ಒಂದು ಬಾರಿ ಪ್ರೀಮಿಯಂ ಪಾವತಿಸುವಂತಹ ಯೋಜನೆ (LIC Scheme) ಯಾಗಿದೆ. ನಿಮ್ಮ ಈ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತೆ ಈ ಹೂಡಿಕೆಯಲ್ಲಿ ಅಪಾಯವು ಇರುವುದರಿಂದ ನೀವು ಹೆಚ್ಚು ಇದರ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಬೇಕಾಗುತ್ತದೆ ಆದರೆ ಇದರಲ್ಲಿ ಲಾಭ ಸಿಕ್ಕರೆ, ನಿಮ್ಮ ನಿರೀಕ್ಷೆಗೂ ಮೀರಿದ ಆದಾಯ ಸಿಗುತ್ತದೆ. ಅಪಾಯವಿದ್ದರೂ ಅತಿಯಾದ ಪ್ರಯೋಜನ ಸಿಗುವ ಯೋಜನೆ (LIC Scheme) ಇದಾಗಿದೆ.

ಐದು ವರ್ಷಗಳಲ್ಲಿ ಹಣ ದುಪ್ಪಟ್ಟು:

ನೀವು ಐದು ವರ್ಷಗಳ ಕಾಲ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಮೂಲ ಹಣಕ್ಕೆ 15% ಎಂಎಬಿ ಬೆಳವಣಿಗೆಯನ್ನು ಆಧರಿಸಿ ಐದು ವರ್ಷಗಳಲ್ಲಿ ಹಣ ದುಪಟ್ಟಾಗುತ್ತದೆ. LIC ನಿವೇಶ ಪ್ಲಸ್ ಯೋಜನೆಯ ಇನ್ನೊಂದು ವಿಶೇಷತೆ ಅಂದ್ರೆ ಇದು ಒಂದೇ ಒಂದು ಪ್ರೀಮಿಯ ಮಾತ್ರ ನೀವು ಪಾವತಿಸಿದರೆ ಸಾಕು ಇದರಲ್ಲಿ ಜೀವ ವಿಮೆ ಹಾಗೂ ಅಪಘಾತ ವಿಮಾ ಕವರೇಜ್ ಕೂಡ ಸಿಗುತ್ತದೆ.

ಇದರ ಮೊತ್ತ ನೀವು ಎಷ್ಟು ಹೂಡಿಕೆ ಮಾಡುತ್ತಿರೋ ಅದನ್ನು ಆಧರಿಸಿ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ, ನೀವು 1.5 ಲಕ್ಷ ರೂಪಾಯಿಗಳನ್ನು ಎಲ್ಐಸಿ ನಿವೇಶ ಪ್ಲಸ್ ಪ್ಲಾನ್ ನಲ್ಲಿ ಹೂಡಿಕೆ ಮಾಡಿದರೆ, 1, 87,500 ಸಾಮಾನ್ಯ ಕವರೇಜ್, 3,75,000ಗಳ ಅಪಘಾತ ಕವರೇಜ್ ಪಡೆದುಕೊಳ್ಳುತ್ತೀರಿ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ಮೂರು ವರ್ಷದ ನಂತರ ಇದರ ಮೊತ್ತವು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

ನಾಲ್ಕು ರೀತಿಯ ಹೂಡಿಕೆ ಲಭ್ಯ:

ಎಲ್ಐಸಿ ನಿವೇಶ ಪ್ಲಸ್ ಯುಲಿಪ್ (ULIP) ಹೂಡಿಕೆಯನ್ನು ನೀವು ಆಯ್ದುಕೊಂಡರೆ ಇದರಲ್ಲಿ ವಿವಿಧ ಹೂಡಿಕೆ ಆಯ್ಕೆಗಳನ್ನು ಪಡೆದುಕೊಳ್ಳುತ್ತೀರಿ. ಬೆಳವಣಿಗೆ ನಿಧಿ, ಸಮತೋಲನ ನಿಧಿ, ಸುರಕ್ಷಿತ ನಿಧಿ, ಬಾಂಡ್ ನಿಧಿ ಈ ರೀತಿ ನಾಲ್ಕು ಹೂಡಿಕೆಗಳು ಲಭ್ಯ. ಬೆಳವಣಿಗೆ ನಿಧಿ ಹಾಗೂ ಸಮತೋಲನ ನಿಧಿ ಆಯ್ಕೆ ಮಾಡಿಕೊಂಡರೆ ಅಪಾಯ ಮಟ್ಟ ಹೆಚ್ಚಿರುತ್ತದೆ. ಸುರಕ್ಷಿತ ನಿಧಿ ಆಯ್ದುಕೊಂಡರೆ ಅಥವಾ ಬಾಂಡ್ ನಿಧಿ ಆಯ್ದುಕೊಂಡರೆ ಅಪಾಯದ ಮಟ್ಟ ಬಹಳ ಕಡಿಮೆ ಇರುತ್ತದೆ. ಆದರೆ ನೀವು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ರೆಡಿ ಇದ್ದರೆ ಹೆಚ್ಚಿನ ಮೊತ್ತವನ್ನು ಗಳಿಸಬಹುದು. ಹಾಗಾಗಿ ನೀವು ಹೂಡಿಕೆ ಮಾಡುವುದಕ್ಕಿಂತ ಮುಂಚೆ ಎಲ್ಐಸಿ ಏಜೆಂಟ್ ಗಳ ಬಳಿ ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ನಂತರ ಹೂಡಿಕೆ ಮಾಡಿ.

Leave A Reply

Your email address will not be published.