Post Office Scheme: ಪೋಸ್ಟ್ ಆಫೀಸ್ ನಲ್ಲಿ 100 ರೂಪಾಯಿ ಠೇವಣಿ ಇಟ್ಟು ಎರಡು ಲಕ್ಷ ಲಾಭ ಗಳಿಸಿ, ಇಲ್ಲಿದೆ ಯೋಜನೆ
ಭವಿಷ್ಯದ ದೃಷ್ಟಿಯಿಂದ ಹಣ ಉಳಿತಾಯ ಮಾಡುವುದು ಬಹಳ ಮುಖ್ಯ ಹಾಗೂ ಪ್ರತಿಯೊಬ್ಬರ ಅಗತ್ಯ ಕೂಡ ಹೌದು. ಎಲ್ಲರಿಗೂ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ ಹಾಗಾಗಿ ಸ್ವಲ್ಪ ಸ್ವಲ್ಪವೇ ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ ನಿಮಗೆ ದೊಡ್ಡ ಮಟ್ಟದ ಲಾಭ ಸಿಗುತ್ತದೆ. ಅದಕ್ಕಾಗಿ ಸರಿಯಾದ ಉಳಿತಾಯ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಸುರಕ್ಷಿತ ಸ್ಥಳದಲ್ಲಿ ಹಣ ಹೂಡಿಕೆ ಮಾಡಬೇಕು. ಇದಕ್ಕೆ ಬೆಸ್ಟ್ ಆಯ್ಕೆ ಅಂದ್ರೆ ಪೋಸ್ಟ್ ಆಫೀಸ್ ಮೂಲಕ ಹಣ ಠೇವಣಿ ಇಡುವುದು.
ಪೋಸ್ಟ್ ಆಫೀಸ್ ನಲ್ಲಿ ಇರುವ ಯೋಜನೆ ಗಳಲ್ಲಿ ಆರ್ ಡಿ ಹಣ ಉಳಿತಾಯ ಮಾಡುವುದಕ್ಕೆ ಉತ್ತಮ ಯೋಜನೆಯಾಗಿದೆ. ಇದನ್ನ ನೀವು ಕೇವಲ ನೂರು ರೂಪಾಯಿಗಳನ್ನು ಹೂಡಿಕೆ ಮಾಡುವುದರ ಮೂಲಕ ಆರಂಭಿಸಬಹುದು. ಪೋಸ್ಟ್ ಆಫೀಸ್ ನಲ್ಲಿ ಹಣ ಇಟ್ಟರೆ ಯಾವುದೇ ಭಯವೂ ಇಲ್ಲ ಹಾಗಾಗಿ ಸಂಪೂರ್ಣ ಗ್ಯಾರಂಟಿ ಯೊಂದಿಗೆ ಮರುಕಳಿಸುವ ಠೇವಣಿಗಳ ಹೂಡಿಕೆಯನ್ನು ಇಲ್ಲಿ ಮಾಡಬಹುದು.
ಆರ್ ಡಿ ಗೆ ಇಲ್ಲ ಹೂಡಿಕೆಯ ನೀತಿ:
ಅಂಚೆ ಕಚೇರಿ (Post Office) ಯಲ್ಲಿ ನೀವು ಆರ್ ಡಿ ಹೂಡಿಕೆ ಮಾಡುವುದಾದರೆ ಇದಕ್ಕೆ ಗರಿಷ್ಠ ಮಿತಿ ಇಲ್ಲ ನೀವು ಕೇವಲ 100 ರೂಪಾಯಿಗಳನ್ನು ಠೇವಣಿ ಇಡುವುದರ ಮೂಲಕ ಆರ್ ಡಿ ಖಾತೆಯನ್ನು ಆರಂಭಿಸಬಹುದು. ಜನವರಿ 1, 2023 ರಿಂದ ಈ ಯೋಜನೆಯ ಬಡ್ಡಿಯು ಹೆಚ್ಚಾಗಿದ್ದು ವಾರ್ಷಿಕವಾಗಿ 5.8% ಬಡ್ಡಿ ನೀಡಲಾಗುತ್ತದೆ. ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿಯನ್ನು ನೀಡಲಾಗುತ್ತದೆ. ಉದಾಹರಣೆಗೆ ತಿಂಗಳಿಗೆ 3000 ಠೇವಣಿ ಇಟ್ಟರೆ ಐದು ವರ್ಷಗಳಲ್ಲಿ ಯೋಜನೆ ಮುಕ್ತಾಯ ಆಗುವಂತೆ ಆಯ್ಕೆ ಮಾಡಿದರೆ, ಯೋಜನೆಯ ಕೊನೆಯಲ್ಲಿ 2.10 ಲಕ್ಷ ರೂಪಾಯಿಗಳ ಲಾಭ ಪಡೆಯಬಹುದು.
ಠೇವಣಿಯ ಮೇಲೆ ಸಾಲ:
ಆರ್ ಡಿ ಖಾತೆ ತೆರೆದರೆ ಅದರ ಮೇಲೆ ಸಾಲ ಕೂಡ ಸಿಗುತ್ತದೆ 12 ಕಂತುಗಳನ್ನ ಪಾವತಿಸಿದ ನಂತರ ಠೇವಣಿ ಮಾಡಿದ ಮೊತ್ತಕ್ಕೆ ಅನುಸಾರವಾಗಿ ಅರ್ಧದಷ್ಟು ಅಂದರೆ 50% ಸಾಲವನ್ನ ಪಡೆಯಬಹುದು. ಆದರೆ ಸಾಲದ ಬಡ್ಡಿ ಆರ್ ಡಿ ಬಡ್ಡಿಗಿಂತಲೂ 2% ಹೆಚ್ಚಾಗಿರುತ್ತದೆ ಎನ್ನುವುದನ್ನು ಇಲ್ಲಿ ನೆನಪಿಟ್ಟುಕೊಳ್ಳಬೇಕು.
ಇನ್ನು ನಿಮ್ಮ ಠೇವಣಿ ಇಟ್ಟ ಅವಧಿ ಅಂದರೆ ಮೆಚ್ಯೂರಿಟಿಯ ನಂತರವೂ ಐದು ವರ್ಷಗಳವರೆಗೆ ಆರ್‌ಡಿ ಖಾತೆಯನ್ನು ಮುಂದುವರಿಸಬಹುದು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆಯನ್ನು ಕೂಡ ಪೋಸ್ಟ್ ಆಫೀಸ್ ನಲ್ಲಿ ತೆರೆಯಬಹುದು ಅಥವಾ ಮೂರು ಜನ ಜಂಟಿಯಾಗಿಯೂ ಕೂಡ ಆರ್ ಡಿ ಖಾತೆಯನ್ನು ಆರಂಭಿಸಬಹುದು. ಆರ್‌ಡಿ ಯಲ್ಲಿ ಮೂರು ವರ್ಷಗಳ ನಂತರ ಪ್ರಿ ಮೆಚ್ಯೂರ್ ಮಾಡಿಸಿಕೊಳ್ಳುವ ಸೌಲಭ್ಯವು ಇದೆ.