ಸಾಲ (Loan) ಎನ್ನುವುದು ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಅಗತ್ಯವಾದ ಹಾಗೂ ಅವರ ಆದಾಯಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವಂತಹ ವಸ್ತುವನ್ನು ಪಡೆದುಕೊಳ್ಳಲು ಅವರು ಕೊನೆಯದಾಗಿ ಆಯ್ಕೆ ಮಾಡಿಕೊಳ್ಳುವಂತಹ ಒಂದು ಆರ್ಥಿಕ ಸಹಾಯವಾಗಿದೆ. ಆದರೆ ಈಗ ಸಾಲದ (Loan) ಬಗ್ಗೆ ಕೇಳಿ ಬರುತ್ತಿರುವಂತಹ ಒಂದು ಮಾಹಿತಿ ಪ್ರತಿಯೊಬ್ಬ ಸಾಲಗಾರರಲ್ಲಿ ಕೂಡ ಖುಷಿಯ ವಾತಾವರಣವನ್ನು ಹುಟ್ಟುಹಾಕಿದೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಆ ಮಾಹಿತಿ ಏನು ಎಂಬುದನ್ನು ತಿಳಿಯೋಣ.
ನೀವು ಯಾರಿಂದಾದರೂ ಕೈ ಸಾಲ (Loan) ವನ್ನು ಪಡೆದುಕೊಂಡಿದ್ದಲ್ಲಿ ಅದನ್ನು ಅವರು ಮೂರು ವರ್ಷಗಳಿಂದ ಕೇಳಿದೆ ಹೋದಲ್ಲಿ ಮತ್ತೆ ಅದನ್ನು ನೀವು ಕಟ್ಟಬೇಕಾದ ಅಗತ್ಯವಿಲ್ಲ ಎಂಬುದಾಗಿ ಕಾನೂನು ನಿಯಮಗಳು ಹೇಳುತ್ತಿದ್ದು ಮೂರು ವರ್ಷಗಳು ಕಳೆದ ನಂತರ ಒಂದು ದಿನವಾದರೂ ಕೂಡ ಅದನ್ನು ಅವರು ಕೇಳುವಂತಹ ಅಧಿಕಾರವನ್ನು ಹೊಂದಿರುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಹಣಕಾಸು ಸಂಸ್ಥೆಗಳು ನೀಡುವಂತಹ ಸಾಲಕ್ಕೆ ಕೂಡ ಮೂರು ವರ್ಷಗಳ ವಾಯಿದೆ ಮಾತ್ರ ಇರುತ್ತದೆ.
ಆದರೆ ಈ ಸಂದರ್ಭದಲ್ಲಿ ಅವರು AOD ಅನ್ನು ಮೂರು ವರ್ಷಕ್ಕೆ ಮೊದಲೇ ಪರಿಗಣಿಸಿ ಉಳಿದ ಸಾಲದ ವ್ಯವಹಾರವನ್ನು ಮುಂದುವರಿಸಲಾಗುತ್ತದೆ. ನೀವು ಹತ್ತರಿಂದ 30 ವರ್ಷಗಳವರೆಗೂ ಕೂಡ ಸಾಲದ ಅವಧಿಯನ್ನು ಇಟ್ಟುಕೊಂಡಿದ್ದರು ಕೂಡ ಮೂರು ವರ್ಷಗಳಿಗೆ ಒಂದು ಬಾರಿ AOD ನಿಯಮವನ್ನು ಪಾಲಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಹತ್ತರಿಂದ ಮೂವತ್ತು ವರ್ಷಗಳ ಸಾಲದ ಅವಧಿಯನ್ನು ಹೊಂದಿದ್ದರೂ ಕೂಡ ಹಳಿಗಳ ಮೇಲೆ ನಿಮ್ಮ ಬಳಿ ಸಾಕಷ್ಟು ಸಹಿಗಳನ್ನು ಬ್ಯಾಂಕುಗಳು ಹಾಕಿಸಿಕೊಳ್ಳುತ್ತವೆ.
ಆದರೆ ಈ ಸಂದರ್ಭದಲ್ಲಿ ನೀವು ಸ್ವಲ್ಪಮಟ್ಟಿಗೆ ಜಾಗೃತರಾಗಿರುವುದು ಕೂಡ ಅತ್ಯಂತ ಅವಶ್ಯಕವಾಗಿದೆ. ಮೂರು ವರ್ಷಗಳ ನಂತರ ಒಂದು ದಿನವಾದರೂ ಕೂಡ ಸಾಲವನ್ನು ಮರುಪಾವತಿಸುವಂತಹ ಅಗತ್ಯ ಇಲ್ಲದಿದ್ದರೂ ಕೂಡ ಸತ್ಯ ಹಾಗೂ ಧರ್ಮದ ನೆಲೆಯಲ್ಲಿ ಸಾಲವನ್ನು ಮರುಪಾವತಿ ಮಾಡುವಂತಹ ಸಲಹೆಯನ್ನು ಕಾನೂನು ಪ್ರಾಧಿಕಾರ ನೀಡುತ್ತದೆ. AOD ನಲ್ಲಿ ನೀವು ಸಾಲ (Loan) ತೆಗೆದುಕೊಂಡಿರುವಂತಹ ದಿನಾಂಕ ತಿಂಗಳು ಹಾಗೂ ವರ್ಷವನ್ನು ದಾಖಲಿಸಲಾಗುತ್ತೆ. ಇದರಲ್ಲಿ ಎಷ್ಟು ಕಟ್ಟಿದ್ದಾನೆ ಹಾಗೂ ಸಾಲವನ್ನು ಕಟ್ಟಲು ಬಾಕಿ ಇರುವಂತಹ ಮೊತ್ತವನ್ನು ಕೂಡ ನಮೂದಿಸಲಾಗುತ್ತದೆ. ಇದರ ಹಿನ್ನೆಲೆಯಲ್ಲಿ ವಾದಿ ಹಾಗೂ ಪ್ರತಿವಾದಿಯನ್ನು ಕಾನೂನು ಪ್ರಾಧಿಕಾರದ ಅಡಿಯಲ್ಲಿ ಕರೆಸಿ ನಂಬಿಕೆ ಹಾಗೂ ವಿಶ್ವಾಸದಲ್ಲಿ ಪಡೆದಿರುವಂತಹ ಸಾಲವನ್ನು ತೀರಿಸುವ ಬಗ್ಗೆ ಮನವೊಲಿಸಲಾಗುತ್ತದೆ.
ದಾಖಲೆ ಮೂಲಗಳ ಪ್ರಕಾರ ಪಡೆದುಕೊಂಡಿರುವಂತಹ ಸಾಲ (Loan) ಕ್ಕೆ ಮೂರು ವರ್ಷಗಳ ಮಿತಿ ಇರುತ್ತದೆ. ಮೂರು ವರ್ಷಗಳಲ್ಲಿ ಒಂದೇ ಒಂದು ಕಂತನ್ನು ಕೂಡ ಆತ ಕಟ್ಟದೆ ಹೋದಲ್ಲಿ ಆ ಸಂದರ್ಭದಲ್ಲಿ AOD ಅನ್ನು ಬಳಸಿಕೊಳ್ಳಲಾಗುತ್ತದೆ. ಇದೇ ರೀತಿಯಲ್ಲಿ ನೋಡುವುದಾದರೆ Marriage Loan ಗಳಿಗೆ 12 ವರ್ಷದ ಮಿತಿಯನ್ನು ಕೂಡ ವಿಧಿಸಲಾಗುತ್ತದೆ ಎಂಬುದನ್ನು ಕೂಡ ಈ ಮೂಲಕ ತಿಳಿದುಕೊಳ್ಳಬಹುದಾಗಿದ್ದು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನೀವು ಸಂಬಂಧಪಟ್ಟಂತಹ ವೆಬ್ ಸೈಟ್ ಗಳಿಗೆ ಅಧಿಕೃತವಾಗಿ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ.