Karnataka Times
Trending Stories, Viral News, Gossips & Everything in Kannada

RBI: ಬ್ಯಾಂಕ್ ಮುಳುಗಡೆಯಾದರೆ ಎಷ್ಟು ಹಣ ಸಿಗುತ್ತೆ? ನಿಯಮ ಬದಲಿಸಿದ ರಿಸರ್ವ್ ಬ್ಯಾಂಕ್

Advertisement

ಪ್ರತಿಯೊಬ್ಬರ ಆರ್ಥಿಕ ಸ್ಥಿತಿಗಳನ್ನು ಅದರಲ್ಲೂ ವಿಶೇಷವಾಗಿ ಉಳಿತಾಯಗಳನ್ನು ಸರಿಯಾಗಿ ಹೊಂದಿಸಿ ಇಟ್ಟುಕೊಳ್ಳಬೇಕೆಂದರೆ ಪ್ರತಿಯೊಬ್ಬರು ಕೂಡ ಬ್ಯಾಂಕಿಂಗ್ ವ್ಯವಸ್ಥೆಯ (Banking System) ಮೊರೆ ಹೋಗುತ್ತಾರೆ. ಬ್ಯಾಂಕಿಂಗ್ ವ್ಯವಸ್ಥೆ ಇದ್ರೆ ಮಾತ್ರ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ಸರಿಯಾದ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಕೂಡ ಅರ್ಥ ಮಾಡಿಕೊಳ್ಳಬೇಕಾಗಿದೆ ಹಾಗೂ ಅರ್ಥ ಮಾಡಿಕೊಂಡಿರುವ ವಿಚಾರವಾಗಿದೆ.

ಹೌದು ಬ್ಯಾಂಕ್ ಅಕೌಂಟ್ ನಲ್ಲಿ ಹಣವನ್ನು ಇಡುವ ಮೂಲಕ ಅಥವಾ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ (Fixed Deposit) ನಂತಹ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ತಮ್ಮ ಉಳಿತಾಯವನ್ನು ಅವರು ಸುನಿಷ್ಚಿತಗೊಳಿಸಬಹುದಾಗಿದೆ. ನೀವು ಬ್ಯಾಂಕಿನಲ್ಲಿ ಹಣವನ್ನು ಇಡೋದಕ್ಕೆ ಎಷ್ಟಾದರೂ ಲಿಮಿಟ್ ಇದೆಯಾ ಅಂತ ಕೇಳಬಹುದು ಆದರೆ ಲಿಮಿಟ್ ಇಲ್ದೆ ಇದ್ರು ಕೂಡ ನೀವು 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಜಮಾ ಮಾಡಿದರೆ ಅದರ ಕುರಿತಂತೆ ಬ್ಯಾಂಕಿನವರು ಇನ್ಕಮ್ ಟ್ಯಾಕ್ಸ್ (Income Tax) ನವರಿಗೆ ಮಾಹಿತಿ ನೀಡುತ್ತಾರೆ. ನಿಮ್ಮ ಬಳಿ ಸರಿಯಾದ ದಾಖಲೆ ಇದ್ದರೆ ನೀವು ಯಾವುದೇ ಭಯಪಡಬೇಕಾಗಿರೋ ಅಗತ್ಯ ಇಲ್ಲ. ಇಲ್ಲವಾದಲ್ಲಿ ನೀವು ದಾಖಲೆ ಇಲ್ಲದೆ ಇರೋ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇನ್ನು ಹಣ ಇದೆ ಅಂತ ಎಷ್ಟು ಬೇಕಾದರೂ ಕೂಡ ನೀವು ಬ್ಯಾಂಕ್ ನಲ್ಲಿ ಹಣವನ್ನು ಇಡೋದಕ್ಕೆ ಸಾಧ್ಯವಿಲ್ಲ ಯಾಕೆಂದರೆ ಕೆಲವೊಮ್ಮೆ ಬ್ಯಾಂಕುಗಳು ದಿವಾಳಿ ಆಗುವ ಸಾಧ್ಯತೆ ಕೂಡ ಇರುತ್ತದೆ ಹಾಗೂ ಈ ಸಂದರ್ಭದಲ್ಲಿ ನೀವು ನಿಮ್ಮ ಹೆಚ್ಚಿನ ಹಣದ ಜಮಾಾವಣೆಯಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಒಂದು ವೇಳೆ ನೀವು ಬ್ಯಾಂಕಿನಲ್ಲಿ 10 ಲಕ್ಷ ರೂಪಾಯಿ ಹಣವನ್ನು ಜಮಾ ಮಾಡಿದ್ರೆ ಆ ಸಂದರ್ಭದಲ್ಲಿ ನಿಮಗೆ ಎಷ್ಟು ಹಣ ಪರಿಹಾರ ರೂಪದಲ್ಲಿ ವಾಪಸ್ ಸಿಗುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ. ಈ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ನೀವು ಕೂಡ ಮುಂದಿನ ದಿನಗಳಲ್ಲಿ ಯಾವುದೇ ಬ್ಯಾಂಕಿನಲ್ಲಿ ಹಣವನ್ನು ಜಮಾ ಮಾಡಿದರೂ ಕೂಡ ಈ ಲಿಮಿಟ್ ಗಿಂತ ಹೆಚ್ಚಿನ ಹಣವನ್ನು ಜಮಾ ಮಾಡದೇ ಇರುವಂತಹ ನಿರ್ಧಾರವನ್ನು ಕೈ ತೆಗೆದುಕೊಳ್ಳುತ್ತೀರಿ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ದುಡಿದಿರುವ ಹಣವನ್ನು ಕಳೆದುಕೊಳ್ಳಲು ಯಾರು ಕೂಡ ಇಷ್ಟಪಡುವುದಿಲ್ಲ. ಹೀಗಾಗಿ ಬನಿ ನಿಯಮಗಳ ಪ್ರಕಾರ ಎಷ್ಟು ಹಣಕ್ಕೆ ಬ್ಯಾಂಕಿನಿಂದ ಸೇಫ್ಟಿ ಗ್ಯಾರಂಟಿಯನ್ನು ನೀಡಲಾಗುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ.

DICGC ಡಿಪೋಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ತನ್ನ ಅಧೀನದಲ್ಲಿ ಬರುವಂತಹ ಬ್ಯಾಂಕುಗಳ ಗ್ರಾಹಕರಿಗೆ ಒಂದು ವೇಳೆ ಬ್ಯಾಂಕ್ ನಷ್ಟದಿಂದ ಮುಳುಗಿ ಹೋಗುವ ಸಂದರ್ಭ ಬಂದರೆ ಹೆಚ್ಚೆಂದರೆ 5 ಲಕ್ಷಗಳ ವರೆಗಿನ ಹಣವನ್ನು ಪರಿಹಾರ ರೂಪದಲ್ಲಿ ನೀಡುವಂತಹ ಗ್ಯಾರಂಟಿಯನ್ನು ನೀಡುತ್ತದೆ ಹಾಗೂ ಯಾರೊಬ್ಬರೂ ಕೂಡ ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಒಂದು ಬ್ಯಾಂಕಿನ ಖಾತೆಯಲ್ಲಿ ಇಡುವುದು ರಿಸ್ಕ್ ಎಂದು ಹೇಳಬಹುದಾಗಿದೆ. ಇದನ್ನು ಬ್ಯಾಂಕ್ ನಿಮಗೆ ದಿವಾಳಿಯಾದ 90 ದಿನಗಳ ಒಳಗಾಗಿ ನೀಡುವಂತಹ ನಿಯಮವನ್ನು ಕೂಡ ರೂಪಿಸಲಾಗಿದೆ. ಹೀಗಾಗಿ 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ನೀವು ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಠೇವಣಿ ಇಡುವುದು ರಿಸ್ಕ್ ಎಂದು ಹೇಳಬಹುದಾಗಿದೆ.

Leave A Reply

Your email address will not be published.