ಭಾರತ ದೇಶದಲ್ಲಿ ಮೋದಿ ಸರ್ಕಾರ (Modi Government) ಬಂದಾಗಿನಿಂದಲೂ ಕೂಡ ಆನ್ಲೈನ್ ಟ್ರಾನ್ಸಾಕ್ಷನ್ ಹಾಗೂ ಡಿಜಿಟಲ್ ವ್ಯವಹಾರಗಳು ಹೆಚ್ಚಾಗಿವೆ ಎಂದು ಹೇಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ Online Banking ಹಾಗೂ UPI ಟ್ರಾನ್ಸಾಕ್ಷನ್ಗಳು ಗಣನೀಯವಾಗಿ ಹೆಚ್ಚಾಗಿವೆ ಎಂದು ಹೇಳಬಹುದಾಗಿದೆ ಹಾಗೂ ನೀವು ಕೂಡ ಇವುಗಳನ್ನು ಬಳಸುತ್ತಿದ್ದೀರಿ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂದರ್ಭದಲ್ಲಿ ನೀವು ಮಾಡುವಂತಹ ಮಿಸ್ಟೇಕ್ಗಳನ್ನು ಯಾವ ರೀತಿ ಸರಿಪಡಿಸಬಹುದು ಎನ್ನುವುದರ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ.
RBI ಹೇಳಿರುವ ಪ್ರಕಾರ ತನ್ನ ಮಾರ್ಗಸೂಚಿಗಳ ಅಡಿಯಲ್ಲಿ ತಪ್ಪಾದ ಖಾತೆಗೆ ಅಮೌಂಟ್ ಹಾಕಿದಾಗ (Money Transfer) 48 ಗಂಟೆಗಳ ಒಳಗೆ ಆ ಹಣವನ್ನು ಪಡೆಯುವಂತಹ ಅವಕಾಶ ನಿಮಗೆ ಇರುತ್ತದೆ ಎಂಬುದಾಗಿ ಹೇಳಿದೆ. UPI ಟ್ರಾನ್ಸಾಕ್ಷನ್ ಮಾಡಿದ ನಂತರ ನಿಮ್ಮ ಮೊಬೈಲ್ ಗೆ ಬರುವಂತಹ ಮೆಸೇಜ್ ಗಳನ್ನು ಯಾವತ್ತು ಕೂಡ ಡಿಲೀಟ್ ಮಾಡುವುದಕ್ಕೆ ಹೋಗಬೇಡಿ.
ಈ ಮೆಸೇಜ್ ನಲ್ಲಿ PPBL ನಂಬರ್ ಇರುತ್ತದೆ. ಹಣವನ್ನು ರಿಫಂಡ್ ಪಡೆಯೋದಕ್ಕಾಗಿ ನೀವು ಈ ನಂಬರ್ ಅನ್ನು ಬಳಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. RBI ಹೇಳಿರುವ ಪ್ರಕಾರ ಬ್ಯಾಂಕ್ ನಿಮಗೆ ತಪ್ಪಾಗಿ ಹಾಕಿರುವ ಹಣವನ್ನು ರಿಫಂಡ್ ಮಾಡುವುದಕ್ಕೆ 48 ಗಂಟೆಗಳ ಒಳಗೆ ಸಹಾಯ ಮಾಡಬೇಕು ಇಲ್ಲವಾದಲ್ಲಿ ನೀವು bankingombudsman.rbi.org.in ವೆಬ್ಸೈಟ್ನಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ಬ್ಯಾಂಕಿಗೆ ನೀವು ತಪ್ಪಾಗಿ ಯಾವ ಖಾತೆಗೆ ಹಣವನ್ನು ಕಳಿಸಿದ್ದೀರಿ ಅವರ ಹೆಸರು ಹಾಗೂ ಎಲ್ಲಾ ವಿವರಗಳನ್ನು ಕೂಡ ಲಿಖಿತ ರೂಪದಲ್ಲಿ ಬರೆದು ನೀಡಬೇಕು.
ಸಾಕಷ್ಟು ಸಂದರ್ಭದಲ್ಲಿ ಈ ರೀತಿಯ ಮಿಸ್ಟೇಕ್ ನಡೆದಾಗ ಹಣವನ್ನು ವಾಪಸ್ ಪಡೆದುಕೊಳ್ಳಲು ಗ್ರಾಹಕರು ಸಾಕಷ್ಟು ಪರದಾಡಬೇಕಾದ ಪರಿಸ್ಥಿತಿ ಬರುತ್ತದೆ ಇದಕ್ಕಾಗಿಯೇ UPI ಹಾಗೂ Net Banking ಮಾಡುವ ಸಂದರ್ಭದಲ್ಲಿ ಸರಿಯಾದ ಖಾತೆಗೆ ಹಣವನ್ನು ಹಾಕುತ್ತಿದ್ದೇನೆ ಎನ್ನುವುದನ್ನು ಮೊದಲಿಗೆ ಪ್ರಮುಖವಾಗಿ ಎರಡೆರಡು ಬಾರಿ ಚೆಕ್ ಮಾಡಿದ ನಂತರವಷ್ಟೇ ಆ ಖಾತೆಗೆ ಹಣವನ್ನು ಹಾಕಿ ಇಲ್ಲವಾದಲ್ಲಿ ಕೆಲವೊಮ್ಮೆ ನೀವು ನಿಮ್ಮ ಹಣವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ.
ಇನ್ನು ಕಳೆದುಕೊಂಡಿರುವ ಹಣವನ್ನು ರೀಫಂಡ್ ಪಡೆದುಕೊಳ್ಳುವ ವಿಧಾನವನ್ನು ನೋಡುವುದಾದರೆ ಈ ಕೂಡಲೇ ಬ್ಯಾಂಕಿಗೆ ಕರೆ ಮಾಡಿ PPBL ನಂಬರ್ ಅನ್ನು ನೀಡಿ ಹಣವನ್ನು ತಪಾದ ಖಾತೆಗೆ ಹಾಕಿರುವ ಕುರಿತಂತೆ ದೂರನ್ನು ದಾಖಲು ಮಾಡಿ. ಇದಾದ ನಂತರ ಬ್ಯಾಂಕಿಗೆ ಖುದ್ದಾಗಿ ನೀವೇ ಹೋಗಿ ದೂರನ್ನು ದಾಖಲಿಸಿ. ಬ್ರಾಂಚ್ ಮ್ಯಾನೇಜರ್ (Bank Branch Manager) ಹೆಸರಿನಲ್ಲಿ ಕೂಡ ಒಂದು ಪತ್ರವನ್ನು ಬರೆಯಬೇಕಾಗುತ್ತದೆ. ನೀವು ತಪ್ಪಾಗಿ ಯಾರ ಖಾತೆಗೆ ಹಣವನ್ನು ಟ್ರಾನ್ಸ್ಫರ್ ಮಾಡಿದ್ದಿರೋ ಅವರ ಖಾತೆಯ ಸಂಪೂರ್ಣ ಡೀಟೇಲ್ಸ್ ಅನ್ನು ಕೂಡ ಇಲ್ಲಿ ನಮೂದಿಸಬೇಕಾಗುತ್ತದೆ. ಸಂದರ್ಭದಲ್ಲಿ ಟ್ರಾನ್ಸಾಕ್ಷನ್ ರೆಫರೆನ್ಸ್ ನಂಬರ್ ಟ್ರಾನ್ಸ್ಫರ್ ಮಾಡಿರುವಂತಹ ದಿನಾಂಕ ಮತ್ತು ಮೊತ್ತ ಅದರ ಜೊತೆಗೆ IFSC ಕೋಡ್ ಅನ್ನು ಕೂಡ ದಾಖಲಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ.