Karnataka Times
Trending Stories, Viral News, Gossips & Everything in Kannada

Bank Cheque Rules: ಬೆಳ್ಳಂಬೆಳಿಗ್ಗೆ ಚೆಕ್ ಬುಕ್ ಇರುವವರಿಗೆ ಹೊಸ ರೂಲ್ಸ್ ತಂದ ರಿಸರ್ವ್ ಬ್ಯಾಂಕ್!

Advertisement

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ವಿಧಗಳನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ UPI ಮೂಲಕ ಟ್ರಾನ್ಸಾಕ್ಷನ್ ಗಳನ್ನು ಮಾಡುತ್ತಿರಬಹುದು ಆದರೆ ದೊಡ್ಡ ಮಟ್ಟದ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾಯಿಸಬೇಕು ಎಂದರೆ ಆ ಸಂದರ್ಭದಲ್ಲಿ ಖಂಡಿತವಾಗಿ ಬ್ಯಾಂಕ್ ವ್ಯವಸ್ಥೆ ಪರಿಚಯಿಸಿರುವಂತಹ ಚೆಕ್ ಮೂಲಕ ಟ್ರಾನ್ಸಾಕ್ಷನ್ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ನೀವು ಜಾಗರೂಕರ ಆಗಿರಬೇಕು ಇಲ್ಲವಾದಲ್ಲಿ ಚೆಕ್ ಬೌನ್ಸ್(Cheque Bounce) ಆಗುತ್ತದೆ ಹಾಗೂ ಅದರಿಂದಾಗಿ ನೀವು ಕೆಲವೊಂದು ದಂಡವನ್ನು ಕಟ್ಟಬೇಕಾದಂತ ಪರಿಸ್ಥಿತಿಯನ್ನು ಕೂಡ ತಂದುಕೊಳ್ಳಬೇಕಾಗುತ್ತದೆ. ಸರ್ಕಾರ ಇದೆ ವಿಚಾರವನ್ನು ಕಡಿಮೆ ಮಾಡುವ ಬಗ್ಗೆ ಯೋಚನೆ ಮಾಡಿದ್ದು ಪರಿಣಿತರ ಸಲಹೆ ಮೇರೆಗೆ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದು ಬನ್ನಿ ಅದರ ಬಗ್ಗೆ ಇಂದಿನ ಆರ್ಟಿಕಲ್ ನಲ್ಲಿ ನಾವು ತಿಳಿದುಕೊಳ್ಳೋಣ.

ಸರ್ಕಾರ ಈ ರೀತಿಯ ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚಾಗಬಾರದು ಎನ್ನುವ ಕಾರಣಕ್ಕಾಗಿ ತಜ್ಞರ ತಂಡವನ್ನು ರಚಿಸಿದ್ದು ಅದರಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರವನ್ನೇ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯಬಾರದು ಎನ್ನುವ ಕಾರಣಕ್ಕಾಗಿ ಹೊಸ ನಿಯಮಗಳ ರೂಪದಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದೆ. ಇನ್ನು ಒಬ್ಬ ವ್ಯಕ್ತಿ ತನ್ನ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಚೆಕ್ ಅನು ನೀಡಿದಾಗ ಆತನ ಖಾತೆಯಲ್ಲಿ ಹಣ ಇಲ್ಲದೆ ಇರುವುದು ನಂತರದ ದಿನಗಳಲ್ಲಿ ಮುನ್ನಲೆಗೆ ಬರುತ್ತದೆ.

ಇದೇ ಕಾರಣಕ್ಕಾಗಿ ವಿತ್ತ ಸಚಿವಾಲಯದಿಂದ(Ministry Of Finance) ತಿಳಿದುಬಂದಿರುವ ಮಾಹಿತಿಯ ಪ್ರಕಾರ ಅವರ ಬೇರೆ ಖಾತೆಯ ಹಣದಿಂದಲೂ ಕೂಡ ಆ ಹಣವನ್ನು ಕಡಿತಗೊಳಿಸಬಹುದಾಗಿದೆ ಎಂಬುದಾಗಿ ಕೂಡ ನಿರ್ಧಾರವನ್ನು ಕೈ ತೆಗೆದುಕೊಳ್ಳಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಫೈನಾನ್ಸ್ ಮಿನಿಸ್ಟ್ರಿ ಚೆಕ್ ಬೌನ್ಸ್ ಪ್ರಕರಣ ಕಡಿಮೆಯಾಗುವುದಕ್ಕಾಗಿ ಮಾಡಿರುವಂತಹ ಮತ್ತೊಂದು ರಾಮಬಾಣದ ಪರಿಹಾರ ಏನೆಂದರೆ ಒಮ್ಮೆ ಚೆಕ್ ಬೌನ್ಸ್ ಆದರೆ ಮತ್ತೆ ಮುಂದಿನ ದಿನಗಳಲ್ಲಿ ಅವರಿಗೆ ಬೇರೆ ಯಾವುದೇ ಬ್ಯಾಂಕುಗಳಲ್ಲಿ ಕೂಡ ಅಕೌಂಟ್ ಮಾಡುವಂತಹ ಅವಕಾಶವನ್ನು ನೀಡಲು ಸಾಧ್ಯವಿಲ್ಲ ಹೀಗಾಗಿ ಇಂತಹ ಕಟ್ಟುನಿಟಿನ ಕ್ರಮಗಳಿಂದಾಗಿ ಖಂಡಿತವಾಗಿ ಚೆಕ್ ಬೌನ್ಸ್ ಮಾಡುವಂತಹ ಯೋಜನೆಯನ್ನು ಹೊಂದಿರುವವರು ಕೂಡ ಮುಂದಿನ ದಿನಗಳಲ್ಲಿ ಈ ಯೋಚನೆಯಿಂದ ಹಿಂದೆ ಸರಿಯುತ್ತಾರೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಂಬಂಧಪಟ್ಟಂತಹ ಇಲಾಖೆಗಳಿಗೆ ಸರ್ಕಾರ ಈ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮವನ್ನು ಕೈ ತೆಗೆದುಕೊಳ್ಳುವುದಕ್ಕೆ ಸೂಚಿಸಿದ್ದು ನಿಜಕ್ಕೂ ಕೂಡ ಹೆಚ್ಚಬೇಕಾಗಿರುವ ವಿಚಾರ.

ಚೆಕ್ ಬೌನ್ಸ್ ಅಂದರೆ ಖಂಡಿತವಾಗಿ ಅರ್ಥವ್ಯವಸ್ಥೆಯಲ್ಲಿ ಬ್ಯಾಂಕಿನ ಭರವಸೆಯನ್ನು ಮುರಿದುಕೊಂಡಿರುವಂತಹ ಘಟನೆಯಾಗಿದ್ದು ಇದರಿಂದಾಗಿ ನಿಮ್ಮ CIBIL SCORE ಕೂಡ ಕಡಿಮೆಯಾಗಿ ಭವಿಷ್ಯದಲ್ಲಿ ನಿಮಗೆ ಏನಾದರೂ ಲೋನ್ ಬೇಕಾದಲ್ಲಿ ಕೂಡ ಬ್ಯಾಂಕುಗಳು ನಿಮ್ಮ ಈ ಹಳೆಯ ಇತಿಹಾಸವನ್ನು ನೋಡಿ ನಿಮಗೆ ಯಾವುದೇ ಲೋನ್ ಅನ್ನು ಕೊಡುವುದಿಲ್ಲ ಹೀಗಾಗಿ ನೀವು ಕೂಡ ಈ ರೀತಿಯ ಚೆಕ್ ಬೌನ್ಸ್ ಮಾಡುವಂತಹ ಕೆಲಸವನ್ನು ಯಾವುದೇ ಕಾರಣಕ್ಕೂ ಕೂಡ ಮಾಡಲು ಹೋಗಬೇಡಿ.

Leave A Reply

Your email address will not be published.