Home Loan: ಮನೆ ಸಾಲ ಮಾಡುವಾಗ ಈ ಆಯ್ಕೆ ಮಾಡಿದರೆ ಬಡ್ಡಿ ಏರುವುದೇ ಇಲ್ಲ! ಮುಗಿಬಿದ್ದ ಜನ
ಆರ್ ಬಿ ಐ (RBI) ಹಣಕಾಸು ವ್ಯವಹಾರ ಹಾಗೂ ಹಣದುಬ್ಬರ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಹಾಗೆ ರೆಪೋ ದರವನ್ನು ಹೆಚ್ಚಿಸುವ ಅಥವಾ ತಗ್ಗಿಸುವ ಕೆಲಸ ಮಾಡುತ್ತದೆ. ಆದರೆ ಬ್ಯಾಂಕುಗಳ ಮೇಲೆ ಅದು ಪರಿಣಾಮ ಬೀರುತ್ತದೆ ಹಾಗೂ ಬ್ಯಾಂಕಿನಲ್ಲಿ ಕೊಡುವ ಸಾಲದಿಂದ ಹಿಡಿದು ಎಫ್ ಡಿ, ಇ ಎಂ ಐ ಮೇಲೆ ಕೂಡ ಪರಿಣಾಮ ಬೀರಬಹುದು.
ಇತ್ತೀಚಿಗೆ ಎಲ್ಲಾ ಹಣಕಾಸು ಸಂಸ್ಥೆಗಳು ಬ್ಯಾಂಕ್ ಹಾಗೂ ಎನ್ ಬಿ ಎಫ್ ಸಿ ಕಂಪನಿಗಳು ಆರ್‌ಬಿಐ (RBI) ಫ್ಲೋಟಿಂಗ್ ರೇಟ್ ನಿಂದ ಗ್ರಾಹಕರು ಸ್ಥಿರ ದರ ಸಾಕ್ಕೆ ಬದಲಾಯಿಸುವ ಆಯ್ಕೆಯನ್ನು ನೀಡಿದೆ. ರೆಪೋ ದರ ಹೆಚ್ಚಳವಾಗಿರುವ ಸಮಯದಲ್ಲಿಯೂ ಸಾಲ ಪಡೆದು ಗ್ರಾಹಕರು ಲಾಭ ಪಡೆದುಕೊಳ್ಳಬಹುದು ಹಾಗಾದ್ರೆ ಸ್ಥಿರ ದರ ಸಾಲವನ್ನ ಆಯ್ಕೆ ಮಾಡಿಕೊಳ್ಳುವುದು ಹೇಗೆ ಆಗುವುದರಿಂದ ಸಿಗುವಂತಹ ಹೆಚ್ಚುವರಿ ಪ್ರಯೋಜನಗಳೇನು ನೋಡೋಣ.
ಸ್ಥಿರ ದರ ಸಾಲ:
ಇಲ್ಲಿ ಬಡ್ಡಿ ದರ (Interest Rate) ಸ್ಥಿರವಾಗಿರುತ್ತದೆ. ನೀವು ಯಾವುದೇ ಸಾಲ ತೆಗೆದುಕೊಂಡರು ಹಣಕಾಸು ಯೋಜನೆಯಲ್ಲಿನ ಯಾವುದೇ ಬದಲಾವಣೆಗಳು ಕೂಡ ನಿಮ್ಮ ಬಡ್ಡಿ ದರದ ಮೇಲೆ ಪರಿಣಾಮ ಬೀರುವುದಿಲ್ಲ. ಇವತ್ತಿನ ದಿನದಲ್ಲಿ ಸಾಲ ತೆಗೆದುಕೊಳ್ಳುವಾಗ ಸ್ಥಿರ ದರ ಬಡ್ಡಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಈ ಬಡ್ಡಿದರ ಸಾಲ ತೀರಿಸುವವರೆಗೂ ಒಂದೇ ಆಯ್ಕೆಯನ್ನು ಹೊಂದಿರುತ್ತದೆ ಈ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸ್ಥಿರ ಸಾಲದ ಮೇಲಿನ ಬಡ್ಡಿ ದರ ಫ್ಲೋಟಿಂಗ್ ದರಕ್ಕಿಂತ ಹೆಚ್ಚಾಗಿರುತ್ತದೆ ಎಂಬುದು ನೆನಪಿರಲಿ.
ಸ್ಥಿರ ದರದ ಸಾಲ ಪಡೆದುಕೊಳ್ಳುವುದು ಎಷ್ಟು ಸರಿ:
ಬಡ್ಡಿ ದರ ಏರುವ ಸಂದರ್ಭಇದ್ದಲ್ಲಿ ಸ್ಥಿರ ದರದ ಸಾಲ ಬಹಳ ಸೂಕ್ತ. ಸ್ಥಿರ ದರದ ಸಾಲ (Home Loan) ತೆಗೆದುಕೊಂಡಿದ್ದರೆ ನಿಮಗೆ ಈಎಂಐ ಒಂದೇ ರೀತಿಯಲ್ಲಿ ಇರುತ್ತದೆ. ಅದರಲ್ಲಿ ಹೆಚ್ಚು ಕಡಿಮೆ ಅನ್ನುವಂತಹ ಬದಲಾವಣೆ ಇರುವುದಿಲ್ಲ. 2022ರಲ್ಲಿ ಆರ್ ಬಿ ಐ ರೆಪೋ ದರ (RBI Repo Rate) ದಲ್ಲಿ ಹೆಚ್ಚಳವನ್ನು ಆರಂಭಿಸಿತು. ಫೆಬ್ರುವರಿ 2023ರ ವರೆಗೆ ರೆಪೋ ದರ ಶೇಕಡಾ 2.5 ರಷ್ಟು ಹೆಚ್ಚಾಗಿತ್ತು. ಈಗ ರೆಪೋ ದರ ಶೇಕಡ 4 ರಿಂದ 6.50% ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಮೇ 22ರ ಸಮಯದಲ್ಲಿ ಸ್ಥಿರ ದರದ ಸಾಲವನ್ನು ಯಾರಾದರೂ ತೆಗೆದುಕೊಂಡಿದ್ದರೆ ಈ ರೆಪೋ ದರದ ಬದಲಾವಣೆಗಳಿಂದಾಗಿ ಆ ವ್ಯಕ್ತಿ ಕಟ್ಟುವ ಈಎಂಐ ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಸಾಲ ತೆಗೆದುಕೊಂಡಾಗ ಯಾವ ಬಡ್ಡಿದರ ಇರುತ್ತದೆಯೋ ಈಗಲೂ ಕೂಡ ಅದೇ ಬಡ್ಡಿದರ ಅನ್ವಯವಾಗುತ್ತದೆ.
ಸ್ಥಿರ ದರದ ಸಾಲ ತೆಗೆದುಕೊಂಡರೆ ಸಿಗುವ ಪ್ರಯೋಜನ:
ಮೊದಲನೆಯದಾಗಿ ಸ್ಥಿರ ದರ ಸಾಲವನ್ನು ತೆಗೆದುಕೊಂಡರೆ ಮಾರುಕಟ್ಟೆಯಲ್ಲಿ ಯಾವುದೇ ದರದ ಬದಲಾವಣೆ ಇದ್ದರೂ ಆ ಸಾಲದ ಮೇಲಿನ ಅವಧಿಯಲ್ಲಿ ಅಥವಾ ಇಎಂಐ ನಲ್ಲಿ ಯಾವ ಬದಲಾವಣೆಗಳು ಕೂಡ ಆಗುವುದಿಲ್ಲ. ಆದ್ದರಿಂದ ವ್ಯಕ್ತಿಯ ಆರ್ಥಿಕ ಸ್ಥಿರತೆ ಹಾಗೆ ಇರುತ್ತದೆ. ಹಣಕಾಸು ವ್ಯವಹಾರದ ಬಾಹ್ಯ ಆರ್ಥಿಕ ಅಂಶಗಳು ವ್ಯಕ್ತಿಯ ಸಾಲದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಹಾಗಾಗಿ ರೆಪೋ ದರ ಜಾಸ್ತಿ ಆದರೆ ಅಥವಾ ಕಡಿಮೆಯಾದರೆ ಸ್ಥಿರ ದರದ ಸಾಲದ ಮೇಲೆ ಯಾವ ತೊಂದರೆಯೂ ಆಗುವುದಿಲ್ಲ. ಆದ್ದರಿಂದ ಸ್ಥಿರ ದರ ಸಾಲದಲ್ಲಿ ಅಪಾಯ ಕಡಿಮೆ ಎನ್ನಬಹುದು.