Bank Information: SBI, HDFC ಮತ್ತು Punjab Sindh Bank ಗಳಲ್ಲಿ ಖಾತೆ ಇದ್ದವರಿಗೆ ಮುಖ್ಯ ಸೂಚನೆ
ಭಾರತೀಯ ರಿಸರ್ವ್ ಬ್ಯಾಂಕ್- RBI ಫೆಬ್ರವರಿಯಲ್ಲಿ ತನ್ನ ರೆಪೋ ದರವನ್ನು ಹೆಚ್ಚಿಸಿದೆ. ಇದರಿಂದ ಬ್ಯಾಂಕ್ ಗಳಲ್ಲಿ ಸಾಲದ ಮೇಲಿನ ಬಡ್ಡಿ (Interest On Loan) ಹೆಚ್ಚಾಗಿದೆ. ಜೊತೆಗೆ ಗ್ರಾಹಕರು ಇಟ್ಟ ಸ್ಥಿರ ಠೇವಣಿಯ ಮೇಲೂ ಬಡ್ಡಿದರ ಹೆಚ್ಚಿಸಲಾಗಿದೆ. ಇದರ ಜೊತೆಗೆ ಬ್ಯಾಂಕ್‌ಗಳು ವಿಶೇಷ ಎಫ್‌ಡಿ (FD) ಯೋಜನೆಗಳನ್ನೂ ಆರಂಭಿಸಿದ್ದು, ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
2022-23 ರ ಹಣಕಾಸು ವರ್ಷವು ಕೊನೆಗೊಳ್ಳಲಿದ್ದು ಈ ಬ್ಯಾಂಕ್ ಗಳ ಹೊಸ ಎಫ್ ಡಿ (FD) ಠೇವಣಿ ಹೂಡಿಕೆ ಮಾಡಲು ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 31ರಂದು ಹೊಸ ಹೂಡಿಕೆಗಳನ್ನು ಮಾಡಲು ಕೊನೆಯ ದಿನಾಂಕವಾಗಿದೆ. SBIನ ‘ಅಮೃತ್ ಕಲಶ ಯೋಜನೆ’, HDFC ಬ್ಯಾಂಕ್‌ನ ‘ವಿಶೇಷ ಕಾಳಜಿ ಎಫ್‌ಡಿ ಯೋಜನೆ’ ಮತ್ತು ಪಂಜಾಬ್ ಸಿಂಧ್ ಬ್ಯಾಂಕ್ (Punjab Sind Bank) ನ ಎಫ್‌ಡಿ (FD) ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಇಂದೇ ಮಾಡಿ. SBIನ ಅಮೃತ್ ಕಲಾಶ್ ಠೇವಣಿ ಯೋಜನೆ (Amrit Kalash Deposit Scheme) ಫೇಬ್ರವರಿಯಲ್ಲಿ ಆರಂಭವಾಗಿದ್ದು, ಇನ್ನು ನಾಲ್ಕು ದಿನಗಳಲ್ಲಿ ಮುಗಿಯಲಿದೆ. ಈ ಯೋಜನೆಯ ಅಡಿಯಲ್ಲಿ, 400 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ 7.6% ಮತ್ತು ಸಾಮಾನ್ಯ ಜನರಿಗೆ 7.1% ಬಡ್ಡಿ ದರ ನೀಡಲಾಗುವುದು.
ಎಷ್ಟು ಹೂಡಿಕೆಗೆ ಎಷ್ಟು ಬಡ್ಡಿ:
400 ದಿನಗಳವರೆಗೆ ಹೂಡಿಕೆ ಮಾಡಿದರೆ 1 ಲಕ್ಷ ರೂ. ಠೇವಣಿಗೆ 8,017 ರೂ. ಸಮಾನ್ಯ ಜನರು ಹಾಗೂ ಮತ್ತು 8,600 ರೂ. ಗಳನ್ನು ಹಿರಿಯ ನಾಗರಿಕರು (Senior Citizens) ಗಳಿಸಬಹುದು. 7 ದಿನಗಳಿಂದ 10 ವರ್ಷಗಳ ಎಫ್‌ಡಿಗಳಿಗೆ 3- 7 ಬಡ್ಡಿಯನ್ನು ಬ್ಯಾಂಕ್ ನೀಡುತ್ತಿದೆ. HDFC ಹಿರಿಯ ನಾಗರಿಕರ ಆರೈಕೆ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದರೆ, 75 ತಿಂಗಳ ಎಫ್ ಡಿಯನ್ನು ಹಿರಿಯ ನಾಗರಿಕರು ಆರಂಭಿಸಿದರೆ 7.75% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ 2 ಕೋಟಿ ರೂಪಾಯಿವರೆಗೆ ಹೂಡಿಕೆ (FD) ಮಾಡಬಹುದು. ಈ ಯೋಜನೆಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಆದಾಯ ಪಡೆದುಕೊಳ್ಳಬಹುದು.
ಇನ್ನು ಗ್ರಾಹಕರು ಆನ್‌ಲೈನ್ (Online) ಮೂಲಕ ಹೂಡಿಕೆ ಮಾಡಿದರೆ ಅರ್ಧದಷ್ಟು ಹೆಚ್ಚುವರಿ ಲಾಭವನ್ನು ಪಡೆಯಬಹುದು. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 8.85% ವರೆಗೆ ಹೆಚ್ಚಿನ ಬಡ್ಡಿದರವನ್ನು ಘೋಷಿಸಿದೆ. ಒಬ್ಬ ಸೂಪರ್ ಸೀನಿಯರ್ ಸಿಟಿಜನ್ (Super Senior Citizen) ಪಿಎಸ್ ಬಿ ಉತ್ಕರ್ಷ್ ನಲ್ಲಿ 222 ದಿನಗಳ FD ಇಟ್ಟರೆ 8.85% ವರೆಗೆ ಬಡ್ಡಿಯನ್ನು ಗಳಿಸಿಕೊಳ್ಳಬಹುದು. ಹಿರಿಯ ನಾಗರಿಕರಿಗೆ 8.5% ಮತ್ತು ಸಾಮಾನ್ಯ ಹೂಡಿಕೆದಾರರಿಗೆ 8% ಬಡ್ಡಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಕೊಡುಗೆಗಳನ್ನು ಪಡೆಯಲು ಗ್ರಾಹಕರು ಮಾರ್ಚ್ 31 ರ ಒಳಗೆ ಆಯಾ ಬ್ಯಾಂಕ್ ಗಳಲ್ಲಿ ಹೂಡಿಕೆ (FD) ಮಾಡಬಹುದು.