Income Tax: ಬ್ಯಾಂಕಿನಲ್ಲಿ ಹಣ ಇಡುವದಕ್ಕೆ ಹೊಸ ಲಿಮಿಟ್ ! ಇದಕ್ಕಿಂತ ಜಾಸ್ತಿ ಇಟ್ಟರೆ ಆದಾಯ ತೆರಿಗೆಯಿಂದ ರೇಡ್ ಗ್ಯಾರಂಟಿ
ಆದಾಯ ಇಲಾಖೆಗೆ ಸಂಬಂಧಪಟ್ಟಹಾಗೆ ಹಾಗೂ ಬ್ಯಾಂಕಿಂಗ್ ಸೆಕ್ಟರ್ ಗಳಲ್ಲಿ ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಒಬ್ಬ ವ್ಯಕ್ತಿ ತನ್ನ ಬಳಿ ಎಷ್ಟು ನಗದು ಹಣ ಹೊಂದಿರಬೇಕು, ಬ್ಯ್ಂಕ್ ವ್ಯವಹಾರಗಳಲ್ಲಿ ದಿನಕ್ಕೆ ಎಷ್ಟು ಹಣದ ವರೆಗೆ ವ್ಯವಹಾರ ಮಾಡಬಹುದು ಜೊತೆಗೆ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇರಬಹುದು ಎಂಬುದರ ಬಗ್ಗೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಲಾಗಿದ್ದು ಒಂದು ವೇಳೆ ಈ ನಿಯಮದ ಹೊರತಾಗಿ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ನಲ್ಲಿ ಇಟ್ಟರೆ ಭಾರಿ ದಂಡ ತರಬೇಕಾಗುತ್ತದೆ. ಬ್ಯಾಂಕಿನಲ್ಲಿ ಹೆಚ್ಚಾಗಿ ಉಳಿತಾಯಕ್ಕಾಗಿ ಹಣ ಇಡಲಾಗುತ್ತದೆ ಆದರೆ ಹಣ ಎಷ್ಟಿರಬೇಕು ಎನ್ನುವುದಕ್ಕೆ ಕೂಡ ಮಿತಿಯನ್ನು ಹೇಳಲಾಗಿದೆ.
ಉಳಿತಾಯ ಖಾತೆಯಲ್ಲಿ ಹಣದ ಮಿತಿ:
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ನಿಮ್ಮ ಉಳಿತಾಯ ಖಾತೆ ಇದ್ದು ಅದರಲ್ಲಿ ಹಣ ಇಟ್ಟರೆ ನಿಮ್ಮ ಉಳಿತಾಯ ಖಾತೆಯಿಂದ ಹೆಚ್ಚಿನ ಮೊತ್ತದ ವಹಿವಾಟು ಮಾಡಿದರೆ ಅದರಿಂದ ಸಮಸ್ಯೆ ಆಗಬಹುದು. ಹಾಗಾದ್ರೆ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಹಾಕಬಹುದು ಹಾಗೂ ಎಷ್ಟರವರೆಗೆ ವ್ಯವಹಾರ ಮಾಡಬಹುದು ಎಂಬುದನ್ನು ನೋಡುವುದಾದರೆ, ಸಾಮಾನ್ಯವಾಗಿ ದೇಶದಲ್ಲಿ 90ರಷ್ಟು ಜನ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ.
ಉಳಿತಾಯ ಖಾತೆ ಎಂದರೆ, ಸಮಾನ ಮೊತ್ತದ ಹಣ ವಿನಿಮಯ ಮಾಡಿಕೊಳ್ಳುವಂತಹ ಖಾತೆಯಾಗಿದೆ. ಇದರಲ್ಲಿ ಸರ್ಕಾರದ ಮಿತಿಯನ್ನು ಮೀರಿ ವ್ಯವಹಾರ ಮಾಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರದ ನೀತಿಯ ಪ್ರಕಾರ ಉಳಿತಾಯ ಖಾತೆಯಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ಠೇವಣಿ ಇಟ್ಟರೆ ನೀವು ನಿಮ್ಮ ಖಾತೆಯ ಸಂಪೂರ್ಣ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕಾಗುತ್ತದೆ. ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಖಾತೆಯಲ್ಲಿ ಇರಿಸಿದರೆ ಬ್ಯಾಂಕಿನ ಎಲ್ಲಾ ವಹಿವಾಟಿನ ಬಗ್ಗೆ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು.
ಒಂದು ವೇಳೆ ನೀವು 10 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಮಾಡಿದರೆ ಅದನ್ನು ಆದಾಯ ತೆರಿಗೆ (Income Tax) ಇಲಾಖೆಗೆ ತಿಳಿಸಬೇಕು ಇಲ್ಲವಾದರೆ ನಿಮ್ಮ ಮನೆಗೆ ನೋಟಿಸ್ ಕಳುಹಿಸಬಹುದು. ಇಷ್ಟು ಹಣ ಎಲ್ಲಿಂದ ಬಂತು? ಈ ಆದಾಯದ ಮೂಲ ಯಾವುದು ಎಲ್ಲವನ್ನು ನೀವು ಹೇಳಬೇಕಾಗುತ್ತದೆ ಒಂದು ವೇಳೆ ಈ ಹಣ ವಿನಿಮಯಕ್ಕೆ ನಿಮ್ಮ ಬಳಿ ಸರಿಯಾದ ದಾಖಲೆ ಇಲ್ಲದೆ ಇದ್ದಲ್ಲಿ ನೀವು ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಇನ್ನು ಈ ರೀತಿ ಹಣ ವ್ಯವಹಾರ ಮಾಡುವುದಕ್ಕೆ ಆದಾಯ ತೆರಿಗೆ ((Income Tax)) ರಿಟರ್ನ್ಸ್ ಕೂಡ ಸಲ್ಲಿಸಬೇಕಾಗುತ್ತದೆ ಒಂದು ವೇಳೆ ನೀವು ಹಾಗೆ ಮಾಡದೆ ಇದ್ದಲ್ಲಿ ನಿಮಗೆ ನೋಟಿಸ್ ಜಾರಿಗೊಳಿಸುವ ಎಲ್ಲಾ ಅಧಿಕಾರ ಆದಾಯ ತೆರಿಗೆ ಇಲಾಖೆಗೆ ಇರುತ್ತದೆ.
ಪಾವತಿಸ ಬೇಕು ತೆರಿಗೆ, ಇಲ್ಲವಾದರೆ ಭಾರಿ ದಂಡ!
ನೀವು ನಿಮ್ಮ ಬ್ಯಾಂಕ್ ನಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಮತದ ಹಣ ವ್ಯವಹಾರ ಮಾಡಿದರೆ 10% ಟಿ ಡಿಎಸ್ ಪಾವತಿಸಬೇಕು. ಬ್ಯಾಂಕಿನ ಬಡ್ಡಿಯ ಮೊತ್ತ 40,000 ಗಳಿಗಿಂತ ಹೆಚ್ಚಿನ ಮೊತ್ತವನ್ನು ನೀವು ಪಡೆಯುತ್ತಿದ್ದರೆ ಆಗ ಟಿ ಡಿ ಎಸ್ ಕಡಿತಗೊಳಿಸಲಾಗುತ್ತದೆ. ಆದರೆ ಹಿರಿಯ ನಾಗರಿಕರ ಖಾತೆಯಲ್ಲಿ 10 ಲಕ್ಷ ರೂಪಾಯಿಗಳವರೆಗೆ ಇರಿಸಿದರೆ ಒಂದು ವರ್ಷಕ್ಕೆ 50 ಸಾವಿರ ಬಡ್ಡಿಯ ಮೇಲೆ ತೆರಿಗೆ ಇರುವುದಿಲ್ಲ ಆದರೆ ಈ ಮಿತಿಯನ್ನು ಮೀರಿದರೆ ಮಾತ್ರ ಹಿರಿಯ ನಾಗರಿಕರು ಕೂಡ 10% ಟಿ ಡಿ ಎಸ್ ಪಾವತಿಸಬೇಕು.
ಇನ್ನು ಉಳಿತಾಯ ಖಾತೆ (Saving Account) ಯಲ್ಲಿ ತಿಂಗಳಿಗೆ ಮೂರು ಸಲಕ್ಕಿಂತ ಹೆಚ್ಚು ಬಾರಿ ಹಣವನ್ನು ಜಮಾ ಮಾಡಿದರೆ, ಅದರಲ್ಲೂ ದೊಡ್ಡ ಮೊತ್ತದ ಹಣವಾಗಿದ್ದರೆ ಅದಕ್ಕೂ ಕೂಡ ನೀವು ಸರಿಯಾದ ದಾಖಲೆಗಳನ್ನು ಹೊಂದಿರಬೇಕು. ಉಳಿತಾಯ ಖಾತೆಯಲ್ಲಿ ಎಷ್ಟು ಹಣೆ ಇಡಬೇಕು ಎನ್ನುವುದಕ್ಕೆ ಯಾವುದೇ ಮಿತಿ ನಿಗದಿಪಡಿಸಿಲ್ಲ ಆದರೆ ಖಾತೆಯಲ್ಲಿ ಹಣ ಇಡುವಾಗ ಅದಕ್ಕೆ ಸರಿಯಾದ ದಾಖಲೆ ಇರಬೇಕು ಜೊತೆಗೆ ತೆರಿಗೆ ಪಾವತಿಸಿರಬೇಕು.
ನಿಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಇದ್ದು ಅದಕ್ಕೆ ಐಟಿಆರ್ ಸಲ್ಲಿಸದೆ ಇದ್ದರೆ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಹಾಗಾಗಿ ಆದಾಯ ತೆರಿಗೆ ನೋಟಿಸ್ ಮನೆಗೆ ಬರುವುದನ್ನು ತಪ್ಪಿಸುವುದಕ್ಕೆ ನೀವು ಸರಿಯಾದ ಆದಾಯ ತೆರಿಗೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಆದಾಯ ತೆರಿಗೆ (Income Tax) ಇಲಾಖೆ ನೋಟಿಸ್ ಜಾರಿಗೊಳಿಸಿದ್ದು ನೀವು ಅದಕ್ಕೆ ಪ್ರತ್ಯುತ್ತರ ನೀಡದೆ ಇದ್ದಲ್ಲಿ ದಂಡದ ಜೊತೆಗೆ ಜೈಲುವಾಸ ಕೂಡ ಅನುಭವಿಸಬೇಕಾಗುತ್ತದೆ. ಹಾಗಾಗಿ ಬ್ಯಾಂಕ್ ವ್ಯವಹಾರ ಮಾಡುವಾಗ ತೆರಿಗೆ ಇಲಾಖೆಯ ಎಲ್ಲಾ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಿ.