Karnataka Times
Trending Stories, Viral News, Gossips & Everything in Kannada

Income Tax Department: ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಿಂದ ಹೊರ ಬಂತು ನೋಡಿ ಪ್ರಮುಖ ಸೂಚನೆ.

Advertisement

ಪ್ರತಿಯೊಬ್ಬರು ಕೂಡ ಸರಿಯಾದ ನಿಗದಿತ ಸಂದರ್ಭದಲ್ಲಿ ಇನ್ಕಮ್ ಟ್ಯಾಕ್ಸ್ ಫೈಲಿಂಗ್ (IT Filing) ಮಾಡಿಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಅದರಲ್ಲೂ ಅಗತ್ಯವಾಗಿ ಫೈಲ್ ಮಾಡಿದ 30 ದಿನಗಳ ಒಳಗಾಗಿ ನೀವು ಫೈಲ್ ಮಾಡಿರುವುದನ್ನು ಪರಿಶೀಲಿಸುವುದಕ್ಕೆ ಮರೆಯಬಾರದು. ಇಲ್ಲವಾದಲ್ಲಿ ಇನ್ಕಮ್ ಟ್ಯಾಕ್ಸ್ ನಿಯಮ 1961ರ ಪ್ರಕಾರ ಲೇಟ್ ಫೀಸ್ ಅನ್ನು ಕೂಡ ಕಟ್ಟಬೇಕಾಗಿ ಬರಬಹುದು. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮೊದಲನೆಯದಾಗಿ eVerify ಮಾಡಬೇಕು. ITR ಸಲ್ಲಿಕೆ ಮಾಡಿರುವ ಬಗ್ಗೆ ನೀವು ನಿಗದಿತ ಸಮಯದ ಒಳಗೆ ಪರಿಶೀಲನೆ ಮಾಡಬೇಕು ಇಲ್ಲವಾದಲ್ಲಿ ಅದನ್ನು ಅಮಾನ್ಯ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ eVerification ಮಾಡುವಂತಹ ಬೇರೆ ವಿಧಾನಗಳು ಯಾವುವು ಎಂಬುದನ್ನು ನೋಡುವುದಾದರೆ ಆಧಾರ್ ಕಾರ್ಡ್ (Aadhaar Card) ನಲ್ಲಿ ರಿಜಿಸ್ಟರ್ ಮಾಡಿರುವಂತಹ ನಂಬರ್ ಗೆ OTP, ಈಗಾಗಲೇ ವ್ಯಾಲಿಡೇಟ್ ಮಾಡಿರುವ ನಿಮ್ಮ ಹಿಂದಿನ ಬ್ಯಾಂಕ್ ಅಕೌಂಟಿನ EVC ರಚಿಸುವುದು, ಅಥವಾ ಹಿಂದಿನ Demat ಅಕೌಂಟಿನ EVC, ATM ಮೂಲಕ EVC ನೆಟ್ ಬ್ಯಾಂಕಿಂಗ್ ಅಥವಾ ಡಿಜಿಟಲ್ ಸಹಿಯ ಮೂಲಕ ಸರ್ಟಿಫಿಕೇಟ್ ಇಂದ e-Verification ಮಾಡಬಹುದಾಗಿದೆ.

ಇದೇ ಸಂದರ್ಭದಲ್ಲಿ ಕೆಲವೊಂದು ಪ್ರಶ್ನೆಗಳು ಮೂಡಿ ಬರಬಹುದು ಉದಾಹರಣೆಗೆ 120 ದಿನಗಳ ಹಿಂದೆ ಐಟಿಆರ್ ಫೈಲಿಂಗ್ (ITR Filing) ಅನ್ನು ಮಾಡಲಾಗಿದೆ ಈಗಲೂ ಕೂಡ ಅದನ್ನು ಪರಿಶೀಲಿಸಬಹುದ ಎನ್ನುವುದಾಗಿ. ನೀವು ಸರಿಯಾದ ಕಾರಣವನ್ನು ನೀಡಿ ಯಾಕೆ ತಡವಾಯಿತು ಎಂಬುದನ್ನು ಸಮಜಾಯಿಸಿ ನೀಡಬೇಕಾಗಿರುತ್ತದೆ. ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ (Income Tax Department) ಇದನ್ನು ಪರಿಶೀಲಿಸಿದ ನಂತರ ನಿಮಗೆ ವೆರಿಫಿಕೇಶನ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಇನ್ನು ಇದನ್ನು ನೀವೇ ಮಾಡಬೇಕಾಗಿಲ್ಲ ನಿಮ್ಮ ಕಂಪನಿಯ ಪ್ರತಿನಿಧಿಯಾಗಿ ಇರುವಂತಹ ಯಾವ ವ್ಯಕ್ತಿ ಕೂಡ ಇದನ್ನು ಮಾಡಬಹುದಾಗಿದೆ ಎಂಬುದಾಗಿ ನಿಯಮಗಳು ತಿಳಿಸುತ್ತದೆ.

ಈ ಸಂದರ್ಭದಲ್ಲಿ ಆಧಾರ್ ಕಾರ್ಡಿ (Aadhaar Card) ಗೆ ಯಾರ ನಂಬರ್ ರಿಜಿಸ್ಟರ್ ಆಗಿದೆಯೋ ಅವರ ನಂಬರಿಗೆ OTP ಕಳುಹಿಸಲಾಗುತ್ತದೆ ಅದನ್ನು ಅಲ್ಲಿ ನಮೂದಿಸಿದರೆ ಸಾಕು. ಈ ಸಂದರ್ಭದಲ್ಲಿ ಪ್ರಮುಖವಾಗಿ ಪ್ರತಿಯೊಬ್ಬರಿಗೂ ಕೂಡ ಅನುಮಾನ ಬರೋದು ಅಥವಾ ಗೊಂದಲದಲ್ಲಿ ಬೀಳುವುದಕ್ಕೆ ಕಾರಣವಾಗುವುದು ನನ್ನ ಐ ಟಿ ಆರ್ ಫೈಲಿಂಗ್ ವೆರಿಫಿಕೇಶನ್ ಆಗಿದೆಯಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳುವುದು ಹೇಗೆ ಅಂತ. ಬನ್ನಿ ಹಾಗಿದ್ದರೆ ಅದನ್ನು ಕೂಡ ತಿಳಿಯೋಣ.

ಟ್ರಾನ್ಸಾಕ್ಷನ್ ID ಜೊತೆಗೆ ನಿಮಗೆ ಯಶಸ್ವಿಯಾಗಿದೆ ಅನ್ನೋ ಮೆಸೇಜ್ ಕೂಡ ಕಾಣಿಸುತ್ತದೆ. eFilinig ನಲ್ಲಿ ರಿಜಿಸ್ಟರ್ ಮಾಡಿಕೊಂಡಿರುವಂತಹ ಇಮೇಲ್ ಐಡಿಗೆ ಇಮೇಲ್ ಅನ್ನು ಕೂಡ ಕಳಿಸಲಾಗುತ್ತದೆ. ನಿಮ್ಮ ಬದಲಾಗಿ Authorised Signatory ಪ್ರತಿನಿಧಿ ಇದನ್ನು ಮಾಡಿದ್ರು ಕೂಡ ಇಬ್ಬರಿಗೂ ಕೂಡ ಇ-ಮೇಲ್ ಐಡಿಯಾ ಮುಖಾಂತರ ಇದರ ದೃಢೀಕರಣವನ್ನು ನೀಡಲಾಗುತ್ತದೆ. ಹೀಗಾಗಿ ನಿಗದಿತ ದಿನಾಂಕದ ಒಳಗೆ ಐಟಿಆರ್ ಫೈಲಿಂಗ್ ಮಾಡಿದ ನಂತರ ವೆರಿಫಿಕೇಶನ್ ಅನ್ನು ತಪ್ಪದೆ ಮಾಡಿ.

Leave A Reply

Your email address will not be published.