ಇಂದು ಕೆಲಸ ಮಾಡುವ ಅನೇಕರಿಗೆ ಉಳಿತಾಯ ಮನೋಭಾವನೆ ಇರುತ್ತದೆ ಇನ್ನು ಕೆಲವರು ದೀರ್ಘಾವಧಿ ಯೋಜನೆ ಮಾಡಿ ನಿವೃತ್ತಿ ಬಳಿಕದ ಯೋಚನೆಯನ್ನು ಸಹ ಮಾಡುತ್ತಾರೆ. ಹಾಗಾಗಿ ಅನೇಕ ನಿವೃತ್ತಿ (Retainment) ಬಳಿಕದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ದುಡಿವ ಸಮಯದಲ್ಲಿ ಹಣ ವ್ಯರ್ಥ ಮಾಡಿ ನಿವೃತ್ತಿ ಬಳಿಕ ಖಾಲಿ ಕೈಯಾಗಬೇಕಾಗುತ್ತದೆ.
ಇಂದು ಹಣ ಜೀವನದ ಅಗತ್ಯ ಮತ್ತು ಅವಶ್ಯಕತೆ ಪೂರೈಸುವ ಸಾಧನವಾಗಿದೆ. ಹಾಗಾಗಿ ಉತ್ತಮ ದುಡಿಮೆ ಇರುವಾಗಲೇ ಪಿಂಚಣಿ ಇತರ ಮಾಡಿಕೊಂಡು ಬಿಟ್ಟರೆ ಉಳಿದೆಲ್ಲವೂ ತುಂಬಾ ಸುಲಭಸಾಧ್ಯವಾಗಲಿದೆ. ಈ ವರ್ಷ ಯಾವುದೆಲ್ಲ ಪಿಂಚಣಿ (Pension) ಯೋಜನೆ ಉಪಯುಕ್ತ ಆಗಲಿದೆ ಇನ್ನಿತರ ಮಾಹಿತಿ ಈ ಲೇಖನದಲ್ಲಿ ನೀಡಲಾಗುವುದು.
ಈ ಪ್ರಕ್ರಿಯೆ ಅನುಸರಿಸಿ?
ಉಳಿತಾಯ ಯೋಜನೆಗೆ ಆಗಲಿ ಅಥವಾ ಪಿಂಚಣಿ (Pension) ಗೆ ಆಗಲಿ ಸುಖಾ ಸುಮ್ಮನೆ ಹಣ ಹಾಕಲು ಸಾಧ್ಯ ಇಲ್ಲ ಅದರ ಬಗ್ಗೆ ಪೂರ್ವ ಯೋಚನೆ ಎಲ್ಲ ಇರಲೇ ಬೇಕು. ಹಾಗಾಗಿ ಉತ್ತಮ ಯೋಜನೆ ಯೋಚನೆ ರೂಪಿಸಿದಾಗ ಹಣಕಾಸಿನ ಭದ್ರತೆ ಸಿಕ್ಕಂತಾಗುವುದು.
- ನೀವು ಆರಂಭಿಕ ಹಂತದಲ್ಲೇ ಹೂಡಿಕೆ ಮಾಡುವುದರಿಂದ ನಿವೃತ್ತಿ ಅವಧಿಗೆ ಅದು ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ಅಂದರೆ ವೃತ್ತಿ ಜೀವಮದೊಂದಿಗೆ ಹಣ ಉಳಿಸುವ ಮನೋಭಾವನೆ ತುಂಬಾ ಅಗತ್ಯ.
- ಪಿಂಚಣಿ (Pension) ಗೆ ಹಣ ವಿನಿಯೋಗ ಮಾಡಬಹುದು. ಇದು ಉದ್ಯೋಗದಲ್ಲಿರುವಾಗ ನಿರ್ದಿಷ್ಟ ಮೊತ್ತಕಡಿತವಾಗಲಿದ್ದರೂ ನಿಮ್ಮ ನಿವೃತ್ತಿಗೆ ಈ ಹಣ ತಿಂಗಳ ಪ್ರಕಾರ ಸಿಗಲಿದೆ.
- ನೀವು ಸಂಗ್ರಹಿಸಿದ ಹಣವನ್ನು ಉಳಿತಾಯ ಖಾತೆಯಲ್ಲಿ ಸಂಗ್ರಹಿಸಿಡುವುದು. ಇದು ನಿಮ ನಿವೃತ್ತಿ ಅವಧಿಗೆ ಸಾಕಷ್ಟು ನೆರವಾಗಲಿದೆ.
- ನಿವೃತ್ತಿಗಾಗಿ ಮಾಡುವ ಹೂಡಿಕೆಯ ಮೇಲೆ ಟ್ಯಾಕ್ಸ್ ಇರಲಾರದು ಹಾಗಾಗಿ ತೆರಿಗೆ ಹೊರೆ ಇಲ್ಲದೆ ಉಳಿತಾಯ ಮಾಡಲು ಜೀವನ ಭದ್ರತೆ ಕಾಯಲು ಇದೊಂದು ಉಪಯುಕ್ತ ಕ್ರಮವಾಗಲಿದೆ.
- ನಿವೃತ್ತಿ ಅವಧಿಯಲ್ಲಿ ಗರಿಷ್ಠ ಮೊತ್ತ ಪಡೆಯಲು ಹೂಡಿಕೆಯ ಅಂಶ ವಿಸ್ತರಣೆ ಆಗಬೇಕು. ಬಾಂಡು, ಶೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ನಲ್ಲಿ ಹಣ ಉಳಿತಾಯ ಮಾಡಬೇಕು.
- ನಿವೃತ್ತಿಯ ಬಳಿಕ ತಿಂಗಳವರೆಗೆ ಹಣ ಪಡೆಯಲು ಪಿಂಚಣಿ ಉಪಯುಕ್ತ ಆಗಿದೆ. ಅದರಲ್ಲಿ ಪಿಂಚಣಿ ವರ್ಷಾಶನ ಒಂದು ಕಾಣಬಹುದು. ನಿವೃತ್ತಿಯ ಬಳಿಕ ಸ್ಥಿರ ಮಾಸಿಕ ಪಿಂಚಣಿ ನೀಡಲಿದೆ. ಇದು ಉತ್ತಮ ಲಾಭದ ಒಂದು ಮಾರ್ಗವಾಗಿದೆ.
- ಪಿಂಚಣಿ (Pension) ಅಥವಾ ಇತರ ಯೋಜನೆ ಮೂಲಕ ಉಳಿತಾಯ ಮಾಡುವವರು ತಜ್ಞರ ಸಲಹೆ ಬಲ್ಲವರ ಮಾರ್ಗದರ್ಶನ ಪಡೆದು ಮುಂದೆ ಹೋಗುವುದು ಉತ್ತಮವಾಗಿದೆ.
ಒಟ್ಟಾರೆಯಾಗಿ ಪ್ರತಿಯೊಬ್ಬರಿಗೆ ಸಹ ನಿವೃತ್ತಿ ಮುಪ್ಪು ಎಲ್ಲವೂ ಸಿಗಲೇ ಇದ್ದು ಈಗಲೇ ಅದಕ್ಕಾಗಿ ಮಾಡುವ ಸಿದ್ಧತೆ ಕೂಡ ಅಷ್ಟೇ ಮುಖ್ಯವಾಗಿದೆ.