Business: Online ಮೂಲಕ 500 ರೂ ಒಳಗೆ ವ್ಯವಹಾರ ಮಾಡುವವರಿಗೆ ಸಿಹಿಸುದ್ದಿ!

Advertisement
ಇತ್ತೀಚಿನ ದಿನಗಳಲ್ಲಿ ಭಾರತ ಸಂಪೂರ್ಣವಾಗಿ ಡಿಜಿಟಲೀಕರಣಕ್ಕೆ ತಿರುಗಿ ಕೊಂಡಿದೆ. ಮೊದಲಿಲ್ಲ ಕೇವಲ ಎಟಿಎಂನಿಂದ ಹಣವನ್ನು ತೆಗೆಯುವುದು ಅಥವಾ ಬ್ಯಾಂಕಿಗೆ ಹೋಗಿ ಅಲ್ಲಿಂದ ಹಣವನ್ನು ಟ್ರಾನ್ಸಾಕ್ಷನ್ ಮಾಡುವಂತಹ ಪ್ರಕ್ರಿಯೆಗಳನ್ನು ಮಾಡಲಾಗುತ್ತಿತ್ತು ಆದರೆ ಈಗ ಸಂಪೂರ್ಣವಾಗಿ UPI ಅಪ್ಲಿಕೇಶನ್ಗಳ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ (Online Transaction) ಹೆಚ್ಚಾಗಿದೆ. ಒಂದು ವೇಳೆ ನೀವು ಕೂಡ ಹೆಚ್ಚಾಗಿ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವವರಾಗಿದ್ದರೆ ನಿಮಗೊಂದು ಸಂತೋಷದ ಸುದ್ದಿಯನ್ನು RBI ನೀಡಿದೆ ಎಂದು ಹೇಳಬಹುದಾಗಿದೆ. ಕೆಲವೊಮ್ಮೆ ಆನ್ಲೈನ್ ಟ್ರಾನ್ಸ್ಯಾಕ್ಷನ್ ಮಾಡುವಾಗ ನಿಮಗೆಲ್ಲರಿಗೂ ತಿಳಿದಿರಬಹುದು ಕೆಲವೊಮ್ಮೆ ನೆಟ್ವರ್ಕ್ ಸರಿಯಿಲ್ಲದೆ ಹೋದಲ್ಲಿ ಟ್ರಾನ್ಸಾಕ್ಷನ್ ಮಾಡುವುದು ಸಾಧ್ಯವಾಗುವುದಿಲ್ಲ. ಅಂಥವರಿಗೆ ಇದೊಂದು ಗುಡ್ ನ್ಯೂಸ್ ಎಂದು ಹೇಳಬಹುದಾಗಿದೆ.
RBI ಇತ್ತೀಚಿಗಷ್ಟೇ ಇದರ ಬಗ್ಗೆ ಒಂದು ನಿಯಮವನ್ನು ಜಾರಿಗೆ ತಂದಿದ್ದು ಆಫ್ಲೈನ್ನಲ್ಲಿ ನೀವು UPI WALLET ಮೂಲಕ 500 ರೂಪಾಯಿವರೆಗೂ ಕೂಡ ಕಳುಹಿಸಬಹುದಾಗಿದೆ. 200 ರೂಪಾಯಿ ಇದ್ದ ಈ ಲಿಮಿಟ್ ಅನ್ನು ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 500 ರೂಪಾಯಿಗೆ ಏರಿಸಿದೆ ಎಂಬುದಾಗಿ ತಿಳಿದು ಬಂದಿದೆ. ಈ ಟ್ರಾನ್ಸಾಕ್ಷನ್ ಅನ್ನು ನೀವು ಯಾವುದೇ ವ್ಯವಹಾರ (Business) ದಲ್ಲಿ ಕೂಡ ಬಳಸಬಹುದೇ ಎಂಬುದಾಗಿ ತಿಳಿದು ಬಂದಿದ್ದು ರೂ.2000ವರೆಗಿನ ಲಿಮಿಟ್ ಅನ್ನು ಇದರಲ್ಲಿ ಲಗತ್ತಿಸಲಾಗಿದೆ.
ಕೇಂದ್ರೀಯ ಬ್ಯಾಂಕ್ ಆಫ್ಲೈನ್ ನಲ್ಲಿ 500 ರೂಪಾಯಿವರೆಗಿನ ಹಣವನ್ನು ತಮ್ಮ UPI ವ್ಯಾಲೆಟ್ ಮೂಲಕ ಕಳುಹಿಸಬಹುದು ಎನ್ನುವಂತಹ ನಿಯಮವನ್ನು ಜಾರಿಗೆ ತರುವುದಕ್ಕೆ ಪ್ರಮುಖ ಕಾರಣ ಜನರ ನಡುವೆ ಡಿಜಿಟಲ್ ಟ್ರಾನ್ಸಾಕ್ಷನ್ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ ಎನ್ನುವುದಾಗಿ ಕೇಂದ್ರೀಯ ಬ್ಯಾಂಕ್ ಹೇಳಿಕೊಂಡಿದೆ.
ಇಲ್ಲಿ ಕೇಂದ್ರೀಯ ಬ್ಯಾಂಕ್ ಅಂದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗುತ್ತದೆ. ಬೇಸಿಕ್ ಫೋನ್ ಅನ್ನು ಇಟ್ಟುಕೊಂಡಿರುವವರು ಕೂಡ UPI Lite ಪ್ಲಾಟ್ಫಾರ್ ಮೂಲಕ ಹಣವನ್ನು ಟ್ರಾನ್ಸಾಕ್ಷನ್ ಮಾಡುವಂತಹ ಪರಿಕ್ರಮವನ್ನು ಸಾಕಷ್ಟು ಸಮಯಗಳಿಂದಲೂ ಕೂಡ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತಿರುವುದು ಕೂಡ ಅಂಕಿ ಅಂಶಗಳಿಂದ ತಿಳಿದು ಬಂದಿದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.
RBI ಇದೇ ಕಾರಣಕ್ಕಾಗಿ UPI Lite ಪ್ಲಾಟ್ ಫಾರ್ಮ್ ಮೂಲಕ ಮಾಡುವಂತಹ ವ್ಯವಹಾರಗಳಿಗೆ ಇನ್ನಷ್ಟು ವೇಗವನ್ನು ನೀಡುವ ಕಾರಣಕ್ಕಾಗಿಯೇ NFC ಮೂಲಕ ಆಫ್ ಲೈನ್ ನಲ್ಲಿ ಹಣವನ್ನು ಕಳುಹಿಸುವಂತಹ ವ್ಯವಸ್ಥೆಯನ್ನು ಆಕ್ಟಿವ್ ಮಾಡುವುದಕ್ಕೆ ಅನುಮತಿಯನ್ನು ನೀಡಿತ್ತು. ಈ ಸಂದರ್ಭದಲ್ಲಿ ನಿಮಗೆ ಟ್ರಾನ್ಸಾಕ್ಷನ್ ಮಾಡೋದಕ್ಕೆ PIN ಅಗತ್ಯ ಕೂಡ ಇರೋದಿಲ್ಲ ಹಾಗೂ ವೇಗವಾಗಿ ಕಳುಹಿಸುವಂತಹ ತಂತ್ರಜ್ಞಾನವನ್ನು ಕೂಡ ಜಾರಿಗೆ ತರುವ ಕುರಿತಂತೆ ಆರ್‌ಬಿಐ ಪ್ರಯತ್ನವನ್ನು ನಡೆಸುತ್ತಿರುವುದು ಕೂಡ ಈ ಮೂಲಕ ತಿಳಿದು ಬರುತ್ತದೆ.