Karnataka Times
Trending Stories, Viral News, Gossips & Everything in Kannada

Gold Loan: ಚಿನ್ನದ ಮೇಲೆ ಸಾಲ ತೆಗೆಯುವವರಿಗೆ ಹೊಸ ಸೂಚನೆ

ಸಾಕಷ್ಟು ಜನರು ಚಿನ್ನವನ್ನು ಅಡವಿಟ್ಟು ತಮ್ಮ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತಾರೆ ಇದನ್ನು ಗೋಲ್ಡ್ ಲೋನ್ (Gold Loan) ಎನ್ನುವುದಾಗಿ ಕರೀತಾರೆ. ಈ ಸಂದರ್ಭದಲ್ಲಿ ಸಾಲಕ್ಕೆ ನೀವು ಬ್ಯಾಂಕಿನಲ್ಲಿ ಅಥವಾ ಯಾವುದೇ ಫೈನಾನ್ಸಿಯಲ್ ಕಂಪನಿಗಳಲ್ಲಿ ಆ ಸಾಲದ ಭರವಸೆ ರೂಪದಲ್ಲಿ ಅಡವಿಟ್ಟಿರುವಂತಹ ಚಿನ್ನವೆ ಮೇಲಾಧಾರವಾಗಿರುತ್ತದೆ. ಹಾಗಿದ್ರೆ ಬನ್ನಿ ಗೋಲ್ಡ್ ಲೋನ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಿಮಗೆ ಇಂದಿನ ಆರ್ಟಿಕಲ್ ನಲ್ಲಿ ತಿಳಿಸಲು ಹೊರಟಿದ್ದು ಬನ್ನಿ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ.

Advertisement

SBI ICICI HDFC ನಂತಹ ಬ್ಯಾಂಕುಗಳಲ್ಲಿ ಸೇರಿದಂತೆ ಮುತ್ತೂಟ್ ಫೈನಾನ್ಸ್ ಮಣಪುರಂ ಗೋಲ್ಡ್ ಲೋನ್ (Gold Loan) ಗಳಲ್ಲಿ ಕೂಡ ನೀವು ಚಿನ್ನದ ಮೇಲಿನ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ನೀವು ತಿಳಿದುಕೊಂಡಿರಬೇಕು. ಈ ಸಂದರ್ಭದಲ್ಲಿ ನೀವು ಚಿನ್ನವನ್ನು ಅಡವಿಟ್ಟು ಅದರ ಮೇಲೆ ಪಡೆದುಕೊಳ್ಳಬಹುದಾದಂತಹ ಕನಿಷ್ಠ ಹಾಗೂ ಗರಿಷ್ಠ ಪ್ರಮಾಣದ ಸಾಲದ ಮೊತ್ತ ಎಷ್ಟು ಎಂಬುದನ್ನು ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ. ಹಾಗಿದ್ದರೆ ಯಾವೆಲ್ಲ ಸಂಸ್ಥೆಗಳು ಚಿನ್ನದ ಮೇಲೆ ಎಷ್ಟು ಪ್ರಮಾಣದ ಸಾಲವನ್ನು ನೀಡುತ್ತವೆ ಎಂಬುದನ್ನು ತಿಳಿಯೋಣ ಬನ್ನಿ. ICICI Bank ಹತ್ತು ಸಾವಿರ ರೂಪಾಯಿ ಯಿಂದ ಪ್ರಾರಂಭಿಸಿ ಒಂದು ಕೋಟಿ ರೂಪಾಯಿವರೆಗೂ ಚಿನ್ನದ ಸಾಲ ನೀಡುತ್ತದೆ.

Advertisement

ಪಬ್ಲಿಕ್ ಸೆಕ್ಟರ್ ನಲ್ಲಿ ಅತ್ಯಂತ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ SBI 20,000 ಇಂದ 20 ಲಕ್ಷ ರೂಪಾಯಿಗಳ ವರೆಗೂ ಕೂಡ ನೀಡುತ್ತದೆ. ಇನ್ನೊಂದು ಕಡೆ ಮುತ್ತೂಟ್ ಫೈನಾನ್ಸ್ 1500 ಪ್ರಾರಂಭಿಸಿ ಗರಿಷ್ಠ ಮಿತಿ ಇಲ್ಲದೆ ಚಿನ್ನದ ಸಾಲ (Gold Loan) ವನ್ನು ನೀಡುತ್ತದೆ. RBI ಈ ವಿಚಾರದಲ್ಲಿ ಚಿನ್ನದ ಸಾಲ (Gold Loan) ದ ಅನುಪಾತವನ್ನು 75 ಪ್ರತಿಶತದಿಂದ 90% ಕ್ಕೆ ಹೆಚ್ಚಿಸಿತ್ತು. ನೀವು ಈ ಸಂದರ್ಭದಲ್ಲಿ ಅವಧಿ ಮುಗಿಯುವುದರ ಒಳಗೆ ಲೋನ್ ಅನ್ನು ಕಟ್ಟುವಂತಹ ಸಂಪೂರ್ಣ ಆಯ್ಕೆಯನ್ನು ಹೊಂದಿರುತ್ತೀರಿ. ಆದರೆ ಇದು ಕೆಲವೊಮ್ಮೆ ನೀವು ಸಾಲವನ್ನು ಪಡೆದುಕೊಂಡಿರುವ ಬ್ಯಾಂಕ್ ಅಥವಾ NBFC ಮೇಲೆ ನಿರ್ಧಾರಿತವಾಗುತ್ತದೆ ಹಾಗೂ ನಿಯಮಗಳು ಬದಲಾದರೂ ಆಗಬಹುದು.

Advertisement

ಇನ್ನು ಲೋನ್ ಅವಧಿ ಭಿನ್ನ ಭಿನ್ನವಾದ ಬ್ಯಾಂಕುಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಉದಾಹರಣೆ HDFC ಬ್ಯಾಂಕ್ ನಲ್ಲಿ ಮೂರು ತಿಂಗಳಿನಿಂದ 24 ತಿಂಗಳುಗಳವರೆಗೆ, SBI Bank ನಲ್ಲಿ ಗರಿಷ್ಠ ಮಿತಿ ಮೂವತ್ತಾರು ತಿಂಗಳಾಗಿದೆ. ಮುತ್ತೂಟ್ ಫೈನಾನ್ಸ್ ಬ್ಯಾಂಕ್ ನಲ್ಲಿ ಕೂಡ ಅದರದೇ ಆದಂತಹ ಅವಧಿಯ ನಿಯಮವಿರುತ್ತದೆ. ಇನ್ನು ಈ ಸಂದರ್ಭದಲ್ಲಿ ಬ್ಯಾಂಕುಗಳು ಅಥವಾ NBFC ಸಂಸ್ಥೆಗಳು 1.5 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ 150 ಹಾಗೂ ಅದಕ್ಕಿಂತ ಹೆಚ್ಚಿನ ಸಾಲಗಳಿಗೆ 500 ರೂಪಾಯಿಗಳ ಶುಲ್ಕವನ್ನು ಕೂಡ ವಿಧಿಸುತ್ತವೆ ಎಂಬುದನ್ನು ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.

Advertisement

ಹಾಗಿದ್ದರೆ ಬನ್ನಿ ಚಿನ್ನದ ಸಾಲ (Gold Loan) ವನ್ನು ಬ್ಯಾಂಕಿನಿಂದ ಪಡೆದುಕೊಳ್ಳಲು ಬೇಕಾಗಿರುವಂತಹ ದಾಖಲೆ (Documents For Gold Loan) ಪತ್ರಗಳು ಎಂಬುದನ್ನು ತಿಳಿದುಕೊಳ್ಳೋಣ. ಪಾನ್ ಕಾರ್ಡ್ (PAN Card) ಹಾಗೂ ನಿಮ್ಮ ಗುರುತಿನ ಪತ್ರದ ರೂಪದಲ್ಲಿ ಆಧಾರ್ ಕಾರ್ಡ್ (Aadhaar Card) ವೋಟರ್ ಐಡಿ ಕಾರ್ಡ್ (Voter ID Card) ಅದರ ಜೊತೆಗೆ ನಿಮ್ಮ ಫೋಟೋ ಬೇಕಾಗಿರುವುದು ಹಾಗೂ ಬ್ಯಾಂಕುಗಳು ಬದಲಾಗುತ್ತಾ ಹೋದಂತೆ ಅಲ್ಲಿ ಕೇಳಲಾಗುವಂತಹ ದಾಖಲೆಗಳು ಕೂಡ ಬದಲಾಗುತ್ತವೆ. ಹೀಗಾಗಿ ಬ್ಯಾಂಕಿಗೆ ಹೋಗುವುದಕ್ಕಿಂತ ಮುಂಚೆ ಅವರಲ್ಲಿ ಕರೆ ಮಾಡಿ ಬೇಕಾಗಿರುವಂತಹ ದಾಖಲೆ ಪಾತ್ರಗಳನ್ನು ನೀವು ಹೆಚ್ಚುವರಿಯಾಗಿ ತೆಗೆದುಕೊಂಡು ಹೋಗಬಹುದಾಗಿದೆ.

Leave A Reply

Your email address will not be published.