ಸಾಕಷ್ಟು ಜನ ಬ್ಯಾಂಕ್ ವ್ಯವಹಾರ ನಡೆಸುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಇರುವ ನಿಯಮಗಳ ಬಗ್ಗೆ ಗೊತ್ತಿರುವುದಿಲ್ಲ ನಾವು ದೈನಂದಿನ ಜೀವನದಲ್ಲಿ ಒಂದಲ್ಲ ಒಂದು ಕೆಲಸಕ್ಕೆ ಬ್ಯಾಂಕ್ ಅನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವಲಂಬಿಸಿರುತ್ತೇವೆ ಹಾಗಾಗಿ ಬ್ಯಾಂಕ್ ನಲ್ಲಿ ಇರುವ ಪ್ರತಿಯೊಂದು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಉದಾಹರಣೆಗೆ ನೀವು ಬ್ಯಾಂಕ್ ನಲ್ಲಿ ಯಾರಾದರೂ ನಿಮಗೆ ಕೊಟ್ಟ ಚೆಕ್ (Cheque) ಅನ್ನು ಡೆಪಾಸಿಟ್ ಮಾಡಬಹುದು ಅಥವಾ ನೀವು ಬೇರೆಯವರಿಗೆ ಚೆಕ್ ಬರೆದು ಕೊಡಬಹುದು. ಇದು ಲಕ್ಷ ಮೌಲ್ಯದ ಚೆಕ್ ಆಗಿದ್ದರೆ ಈ ರೂಲ್ಸ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ನಾವು ನಮ್ಮ ಹಣವನ್ನು ಸುರಕ್ಷಿತವಾಗಿ ಇಡಲು ಬ್ಯಾಂಕ್ ಮೂಲಕ ವ್ಯವಹರಿಸುತ್ತೇವೆ. ಎಷ್ಟು ಬಾರಿ ಕ್ಯಾಶ್ ಬದಲು ಚೆಕ್ ನೀಡಿ ಹಣ ಪಾವತಿ ಮಾಡಬೇಕಾಗುತ್ತದೆ. ಯಾರಾದರೂ ಚೆಕ್ (Cheque) ನೀಡಿದರೆ ಅದನ್ನು ನೀವು ಬ್ಯಾಂಕ್ ಗೆ ಹೋಗಿ ಡೆಪಾಸಿಟ್ ಮಾಡಬೇಕು. ಇನ್ನು ಲಕ್ಷ ಮೌಲ್ಯದ ಚೆಕ್ ಆಗಿದ್ದರೆ ಕೆಲವರು ಇಂಗ್ಲೀಷಿನಲ್ಲಿ lakh ಎಂದು ಬರೆಯುತ್ತಾರೆ ಇನ್ನು ಕೆಲವರು Lac ಎಂದು ಬರೆಯುತ್ತಾರೆ ಇದರಲ್ಲಿ ಯಾವುದು ಸರಿ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಇಲ್ಲವಾದರೆ ಆ ಚೆಕ್ ಬೌನ್ಸ್ (Cheque Bounce) ಆಗುವ ಸಾಧ್ಯತೆ ಇರುತ್ತದೆ.
ಆರ್ ಬಿ ಐ ನಿಯಮ ಇಂತಿದೆ:
ನೀವು ಬೇರೆಯವರಿಗೆ ಚೆಕ್ (Cheque) ಕೊಡುವುದಾದರೆ ಅಥವಾ ನಿಮಗೆ ಯಾರಾದರೂ ಚೆಕ್ ಕೊಟ್ಟಾಗ ಅದನ್ನು ಬಳಸಿಕೊಳ್ಳುವುದರ ಬಗ್ಗೆ ಬ್ಯಾಂಕ್ ಹೇಳುವ ನಿಯಮವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಸಾಮಾನ್ಯವಾಗಿ ಚೆಕ್ನಲ್ಲಿ ಲಕ್ಷ ಎಂದು ಬರೆಯಲು ಲ್ಯಾಕ್ ಎಂದು ಬರೆಯುವುದು ಅಭ್ಯಾಸ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ನಿಯಮದ ಪ್ರಕಾರ ಜನರು ಲಕ್ಷ ಎಂದು ಬರೆಯಲು ಲಕ್ಷ ಎಂದೇ ಬರೆಯಬೇಕು ಅದರ ಬದಲು ಲ್ಯಾಕ್ ಎಂದು ಬರೆಯಬಾರದು. ಹಾಗೆಂದ ಮಾತ್ರಕ್ಕೆ ಚೆಕ್ ಬೌನ್ಸ್ (Cheque Bounce) ಆಗುತ್ತದೆ ಅಥವಾ ಚೆಕ್ ಪ್ರಯೋಜನಕ್ಕೆ ಬರುವುದಿಲ್ಲ ಎಂದಲ್ಲ. ಆದ್ರೆ ನಿಯಮದ ಪ್ರಕಾರ ಎಲ್ ಎ ಸಿ ಲಕ್ (Lack) ಎಂದು ಬರೆಯುವುದು ತಪ್ಪು.
ಚೆಕ್ ನ ಹಿಂದೆ ಸಹಿ ಹಾಕುವುದು ಯಾಕೆ:
ಇನ್ನು ನೀವು ಬ್ಯಾಂಕನಲ್ಲಿ ಚೆಕ್ (Cheque) ಮೂಲಕ ವ್ಯವಹಾರ ಮಾಡಿದರೆ ಈ ವಿಷಯ ನಿಮಗೆ ಚೆನ್ನಾಗಿ ಗೊತ್ತಿರಬಹುದು ಯಾವುದೇ ಚೆಕ್ ಬ್ಯಾಂಕ್ ನಲ್ಲಿ ಪಾಸ್ ಆಗಬೇಕು ಎಂದರೆ ಚೆಕ್ ನ ಹಿಂಭಾಗದಲ್ಲಿ ಬರೆದಿರುವವರ ಸಹಿ ಇದ್ದೇ ಇರುತ್ತದೆ. ಸಹಿ ಇಲ್ಲದೆ ಇದ್ದರೆ ಬ್ಯಾಂಕ್ ನವರು ಚೆಕ್ ಹಿಂದುಗಡೆ ಸಹಿ ಹಾಕುವಂತೆ ಹೇಳುತ್ತಾರೆ ಬ್ಯಾಂಕ್ ಕ್ಯಾಶ್ ಹಣ ಕೊಡುವುದಕ್ಕೂ ಮೊದಲು ಚೆಕ್ ಅನ್ನು ಪರಿಶೀಲಿಸಿ ಹಿಂಭಾಗದಲ್ಲಿ ಸಹಿ ಮಾಡಲು ಹೇಳುತ್ತಾರೆ.
ಒಂದು ಚೆಕ್ ಹಿಂಭಾಗದಲ್ಲಿ ಸಹಿ ಇದ್ದರೆ ಮಾತ್ರ ನೀವು ಬ್ಯಾಂಕ್ನಿಂದ ಹಣ ಸ್ವೀಕರಿಸಿರುವುದರ ಬಗ್ಗೆ ಪುರಾವೆ ಸಿಗುತ್ತದೆ. ಇಲ್ಲವಾದರೆ ಆ ಚೆಕ್ ಹಿಡಿದುಕೊಂಡು ಮತ್ತೆ ಬ್ಯಾಂಕ್ ನಲ್ಲಿ ಹಣ ಕೇಳುವಂತಹ ಕೂಡ ನಡೆಯಬಹುದು. ಹಾಗಾಗಿ ಚೆಕ್ (Cheque) ಕೊಡುವಾಗ ಚೆಕ್ ಹಿಂಭಾಗದಲ್ಲಿ ಸಹಿ ಇರಲೇಬೇಕು. ಇನ್ನು ದೊಡ್ಡ ಮೊತ್ತದ ಹಣವನ್ನು ಚೆಕ್ ಮೂಲಕ ತೆಗೆದುಕೊಳ್ಳುವುದು ಅಥವಾ ಕೊಡುವುದು ಮಾಡುವುದಾದರೆ ಪ್ಯಾನ್ ಕಾರ್ಡ್ (PAN Card) ಅನ್ನು ಕೂಡ ನೀವು ಕೊಡಲೇಬೇಕಾಗುತ್ತದೆ.
ಇನ್ನು ಚೆಕ್ ನಲ್ಲಿ ನೀವು ಯಾವುದೇ ರೀತಿಯ ತಿದ್ದುಪಡಿಯನ್ನು ಕೂಡ ಮಾಡುವ ಹಾಗಿಲ್ಲ ಹಾಗಾಗಿ ಚೆಕ್ ಬರೆಯುವಾಗಲೇ ಬಹಳ ಎಚ್ಚರಿಕೆಯಿಂದ ಬರೆಯಬೇಕು. ಹೀಗೆ ಚೆಕ್ ಮೂಲಕ ನೀವು ಬ್ಯಾಂಕ್ ವ್ಯವಹಾರ ಮಾಡುವುದಾದರೆ ಇಂತಹ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು.