Karnataka Times
Trending Stories, Viral News, Gossips & Everything in Kannada

RBI: ATM ವಿಷಯದಲ್ಲಿ ರಾತ್ರೋರಾತ್ರಿ ದೊಡ್ಡ ಬದಲಾವಣೆ ತಂದ RBI

ಇಂದು ಸಾಮಾನ್ಯವಾಗಿ ಬಹುತೇಕ ಎಲ್ಲರೂ ಡೆಬಿಟ್ ಕಾರ್ಡ್ (Debit Card) ಹಾಗೂ ಕ್ರೆಡಿಟ್ ಕಾರ್ಡ್ (Credit Card) ಮೂಲಕವೇ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಾರೆ. ಇದೀಗ ಆರ್ ಬಿ ಐ ಇವುಗಳಿಗೆ ಸಂಬಂಧಪಟ್ಟಹಾಗೆ ಹೊಸ ನಿಯಮಗಳನ್ನು ಪರಿಚಯಿಸಿದೆ. ಹಾಗಾಗಿ ಯಾರೆಲ್ಲಾ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಾರೋ ಅವರು ಈ ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

Advertisement

ಹೌದು ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಈ ಹೊಸ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ಇತ್ತೀಚಿನ ದಿನಗಳಲ್ಲಿ ಕಾರ್ಡ್ ಗಳ ವಿಚಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ ಈಗ ಆರ್‌ಬಿಐ ಹೊಸ ನಿಯಮಗಳನ್ನು ಕೈಗೊಂಡಿದೆ ಇದರಿಂದ ಗ್ರಾಹಕರಿಗೆ ಪ್ರಯೋಜನ ಆಗುತ್ತಾ ಅಥವಾ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಾ ನೋಡೋಣ.

Advertisement

ಮೊದಲನೆಯದಾಗಿ ನೀವು ಯಾವುದೇ ದೇಶದಲ್ಲಿದ್ದರೂ ಸರಿ, ಪ್ರಪಂಚಾದ್ಯಂತ ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದಾಗಿದೆ. ಈ ನಿಯಮ ರೂಪೇ ಕಾರ್ಡ್ (Rupay Card) ಹೊಂದಿರುವವರೆಗೂ ಕೂಡ ಅನ್ವಯವಾಗುತ್ತಿರುವುದರಿಂದ ಇದು ಹೆಚ್ಚು ಸಂತಸವನ್ನು ನೀಡಿದೆ. ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ಕಾರ್ಡ್ ನೆಟ್ವರ್ಕ್ ಅನ್ನು ಕೂಡ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ಗ (Credit Card) ಳನ್ನು ಮೊಬೈಲ್ ಸಂಖ್ಯೆಗಳಂತೆ ಪೋರ್ಟ್ ಮಾಡಿಕೊಳ್ಳಲು ಕೂಡ ಸಾಧ್ಯ.

Advertisement

ಅಕ್ಟೋಬರ್ ಒಂದರಿಂದ ಇದು ಆರಂಭವಾಗುವ ನಿರೀಕ್ಷೆ ಇದೆ. ನಿಮ್ಮ ಸಿಮ್ ನೆಟ್ವರ್ಕ್ ಪೋರ್ಟ್ ಆಗುತ್ತಿದ್ದ ಹಾಗೆ ವೀಸಾ ಕಾರ್ಡ್ (VISA Card), ರೂಪೇ ಕಾರ್ಡ್ (Rupay Card), ಮಾಸ್ಟರ್ ಕಾರ್ಡ್ (Master Card), ಅಮೇರಿಕನ್ ಎಕ್ಸ್ಪ್ರೆಸ್ ಹೀಗೆ ಬೇರೆ ಬೇರೆ ಕಾರ್ಡ್ ಗಳನ್ನು ನೀವು ನಿಮಗೆ ಬೇಕಾದಂತೆ ಆಯ್ದುಕೊಳ್ಳಬಹುದು. ಈ ಪ್ರತಿಯೊಂದು ಕಾರ್ಡ್ ಗಳು ವಿಭಿನ್ನ ಪ್ರಯೋಜನಗಳನ್ನು ಹಾಗೂ ಸೌಲಭ್ಯಗಳನ್ನು ನೀಡುತ್ತಿದ್ದು ನಿಮಗೆ ಯಾವುದು ಸೂಕ್ತ ಎಂಬುದನ್ನು ನೋಡಿ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Advertisement

ಕಾರ್ಡು ನೆಟ್ವರ್ಕ್ ಪೋರ್ಟೆಬಿಲಿಟಿ ಮಾಡಿಕೊಳ್ಳುವುದು ಹೇಗೆ?

ಸುಮಾರು 2ಕ್ಕು ಹೆಚ್ಚು ದೇಶಗಳಲ್ಲಿ ಪ್ರಸ್ತುತ ಇರುವ ದೊಡ್ಡ ಕಾರ್ಡ್ ಅಂದರೆ ವೀಸಾ ಕಾರ್ಡ್. ಇದರ ಮಾರುಕಟ್ಟೆಯ ಕ್ಯಾಪ್ ಸುಮಾರು 40 ಲಕ್ಷ ಕೋಟಿಗಳು. ವೀಸಾ ಆದ ನಂತರ ಮಾಸ್ಟರ್ ಕಾರ್ಡ್ ಸುಮಾರು 150 ದೇಶಗಳಲ್ಲಿ ಲಭ್ಯವಿದ್ದು, ಇದರಲ್ಲಿ ನೀವು ರೂಪೇ ಸ್ಥಳೀಯ ಕಾರ್ಡ್ ನೆಟ್ವರ್ಕ್ ಕೂಡ ಪಡೆಯಬಹುದು.

ಇನ್ನು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನಲ್ಲಿ ಇರುವಂತಹ ಇನ್ನಷ್ಟು ಸಮಸ್ಯೆಗಳನ್ನು ಪರಿಹರಿಸುವ ಆರ್ಬಿಐ (RBI) ಹೊಸ ನಿಯಮಗಳು ಸ್ಪಂದಿಸಲಿದೆ ನೀವು ಎಟಿಎಂ ಕಾರ್ಡ್ (ATM Card) ಹೊಸ ನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲಿಯವರೆಗೆ ನೀವು ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ನಿಮಗೆ ಯಾವುದೇ ಕಂಪನಿಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕೊಡಲಾಗುತ್ತಿತ್ತು. ಆ ಕಾರ್ಡ್ ಗೆ ಅನುಗುಣವಾಗಿ ನಿಮಗೆ ನಿಯಮಗಳು ಕೂಡ ಅನ್ವಯವಾಗುತ್ತಿದ್ದವು. ಇವುಗಳಲ್ಲಿ ಕೆಲವು ಕಾರ್ಡ್ ಮೂಲಕ ಆನ್ ಲೈನ್ ಶಾಪಿಂಗ್ ಮಾಡುವ ಹಾಗಿಲ್ಲ, ಅಂತರಾಷ್ಟ್ರೀಯ ಹಣಕಾಸು ವ್ಯವಹಾರ ಮಾಡುವ ಹಾಗಿಲ್ಲ ಇಂತಹ ನಿಯಮಗಳೂ ಇದ್ದವು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಆರ್ ಬಿ ಐ ಕಾರ್ಡ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ಕೊಡುವ ಹೊಸ ನಿಯಮ ಜಾರಿಗೆ ತರಲಿದೆ.

Also Read: ATM Card: ಎಟಿಎಂ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಈ ವಿಚಾರ ತಿಳಿಯಲೇ ಬೇಕು..! ಸರ್ಕಾರಿ ನಿಯಮ

Leave A Reply

Your email address will not be published.