Karnataka Times
Trending Stories, Viral News, Gossips & Everything in Kannada

Loan: ಸಾಲಕ್ಕೆ ಜಾಮೀನು ಹಾಕಿದವರಿಗೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್

Advertisement

ಪ್ರತಿಯೊಬ್ಬ ಮನುಷ್ಯ ಕೂಡ ತನ್ನ ಜೀವನದಲ್ಲಿ ಒಂದಲ್ಲ ಒಂದು ಆಸೆ ಅಥವಾ ಕನಸುಗಳನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಂದು ಕನಸುಗಳನ್ನು ಕೂಡ ಪೂರೈಸಿಕೊಳ್ಳುವುದಕ್ಕೆ ಆತ ದುಡಿಯೋ ಸಂಬಳ ಸಾಕಾಗ್ದೆ ಕೂಡ ಇರಬಹುದು. ಆ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ಆಯ್ಕೆ ಮಾಡುವಂತಹ ಮೊದಲ ವಿಚಾರ ಬ್ಯಾಂಕಿನಿಂದ ಲೋನ್ (Bank Loan) ತೆಗೆದುಕೊಳ್ಳುವುದು. ಉದಾಹರಣೆಗೆ ಮನೆ ಕಟ್ಟಿಸುವುದಕ್ಕಾಗಿ ಮನೆ ಲೋನ್ ಅಥವಾ ಕಾರನ್ನು ಖರೀದಿಸುವುದಕ್ಕಾಗಿ ಕಾರ್ ಲೋನ್ ಹೀಗೆ ಪ್ರತಿಯೊಂದು ವಿಧದ ಲೋನ್ ಗಳಲ್ಲಿ ಕೂಡ ನೀವು ಒಬ್ಬ ಜಾಮೀನುದಾರರನ್ನು (Guarantor) ಹೊಂದಿರಬೇಕಾಗುತ್ತದೆ. ಸಾಕಷ್ಟು ಸಮಯಗಳಲ್ಲಿ ಬ್ಯಾಂಕ್ ಜಾಮೀನುದಾರರಿಲ್ಲದೆ ಲೋನ್ ಅನ್ನು ಕೊಡೋದಿಲ್ಲ.

ಹೌದು ಯಾಕೆಂದ್ರೆ ಸಾಲ ತೆಗೆದುಕೊಂಡಿರುವಂತಹ ವ್ಯಕ್ತಿ ಒಂದು ವೇಳೆ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟದೇ ಹೋದಲ್ಲಿ ಬ್ಯಾಂಕ್ ಜಾಮೀನು ಹಾಕಿರುವವರನ್ನು ಕೇಳುತ್ತದೆ ಹಾಗೂ ಅವರಿಂದಲೂ ಕೂಡ ಸಾಲವನ್ನು ವಸೂಲು ಮಾಡುವಂತಹ ಅಧಿಕಾರವನ್ನು ಹೊಂದಿರುತ್ತದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್ (Supreme Court) ನೀಡಿರುವಂತಹ ಒಂದು ತೀರ್ಪು ಒಂದು ವೇಳೆ ಸಾಲಗಾರ ಸರಿಯಾದ ಸಮಯದಲ್ಲಿ ಸಾಲ ಕಟ್ಟದೇ ಹೋದಲ್ಲಿ ಆತನ ಜಾಮೀನು ದಾರರಿಂದ ಹಣವನ್ನು ವಸೂಲು ಮಾಡುವಂತಹ ಕಾನೂನಾತ್ಮಕ ಶಕ್ತಿ ಈಗ ದೊರೆತಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರದ ಹಣಕಾಸು ನಷ್ಟ ಹಾಗೂ ದಿವಾಳಿ ನಿಯಮಗಳಲ್ಲಿ ಬ್ಯಾಂಕುಗಳಿಗೆ ಈ ಅಧಿಕಾರವನ್ನು ನೀಡುವಂತಹ ಅರ್ಹತೆಯನ್ನು ಸುಪ್ರೀಂಕೋರ್ಟ್ ಕೂಡ ಅನುಷ್ಠಾನಗೊಳಿಸಲು ಗ್ರೀನ್ ಸಿಗ್ನಲ್ ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ಸಾಮಾನ್ಯವಾಗಿ ಈ ಮೊದಲು ಸಾಲಗಾರರಿಗೆ ಜಾಮೀನು ನೀಡುವಂತಹ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಬೇರೆ ಬೇರೆ ರೀತಿಯ ಸಬೂಬುಗಳನ್ನು ಬ್ಯಾಂಕುಗಳಿಗೆ ನೀಡಿ ತಮ್ಮ ಹೊಣೆಗಾರಿಕೆಯಿಂದ ನುಣಿಚಿಕೊಳ್ಳಲು ಪ್ರಯತ್ನ ಪಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇದೇ ಕಾರಣಕ್ಕಾಗಿ ಭಾರತ ದೇಶದಲ್ಲಿ ಈ ರೀತಿ ಸಾಲವನ್ನು ಕಟ್ಟದೇ ಇರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೂಡ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೈಗೊಳ್ಳಲಾಗುತ್ತಿದೆ ಯಾಕೆಂದರೆ ಇದರಿಂದ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ನಕಾರಾತ್ಮಕ ಪರಿಣಾಮಗಳು ಕಂಡುಬರುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಹಣವನ್ನು ವಸೂಲು ಮಾಡುವುದಕ್ಕೆ ಬ್ಯಾಂಕುಗಳಿಗೆ ಬೇಕಾಗುವಂತಹ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವಂತಹ ನಿರ್ಧಾರಕ್ಕೆ ಈಗ ಕೇಂದ್ರ ಸರ್ಕಾರ ಬಂದಿದ್ದು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೂಡ ಈಗ ಗ್ರೀನ್ ಸಿಗ್ನಲ್ ಅನ್ನು ನೀಡಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಬೇಕಾಗಿರುವ ವಿಚಾರವಾಗಿದೆ.

ಕಾರ್ಪೊರೇಟ್ ಸಾಲ (Corporate Loan) ಅಥವಾ ಯಾವುದೇ ಕಂಪನಿಗಳಿಗೆ ನೀಡಿರುವಂತಹ ಸಾಲಕ್ಕೆ ಜಾಮೀನನ್ನು ನೀಡಿರುವವರು ಒಂದು ವೇಳೆ ಸಾಲಗಾರರು ಹಣವನ್ನು ನೀಡದೆ ಹೋದಲ್ಲಿ ಆ ಹಣವನ್ನು ಕಟ್ಟುವುದಕ್ಕೆ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಹಾಗೂ ತಮ್ಮ ಹೊಣೆಗಾರಿಕೆಯಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದಾಗಿ ಕಟ್ಟುನಿಟ್ಟಿನ ನಿಯಮವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇನ್ನು ಮುಂದೆ ಯಾರೂ ಕೂಡ ಜಾಮೀನುದಾರರು ಸಾಲವನ್ನು ಕಟ್ಟುವಂತಹ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದಾಗಿ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಹೇಳಬಹುದಾಗಿದೆ.

Also Read: Loan: ಕಡಿಮೆ ಸಂಬಳ ಇದ್ದರು ಕೂಡಾ ಈ ಬ್ಯಾಂಕ್‌ ಗಳು ಸಾಲ ನೀಡುತ್ತದೆ ಮುಗಿಬಿದ್ದ ಜನತೆ

1 Comment
  1. MALLIKARJUN says

    ಹೀಗೆ ಆದರೆ ಜಾಮೀನು ಯಾರೂ ಕೊಡೋದಿಲ್ಲ. ಹಾಗಿದ್ರೆ ಬ್ಯಾಂಕ್ ಗಳು ಲೋನ್ ಕೊಡೋದನ್ನ ಬಿಟ್ಟು ಬಿಡುತ್ತವಾ ? ಯಾರೂ ಸಾಲ ಮಾಡದೆ ಜೀವನ ನಡೆಸಬೇಕು ;.ಕಾನೂನು ಮಾಡೋರಿಗಾದರು ಇದು ಸಾಧ್ಯ ನಾ.?

Leave A Reply

Your email address will not be published.