Karnataka Times
Trending Stories, Viral News, Gossips & Everything in Kannada

Bank Locker: ಬ್ಯಾಂಕ್ ಲಾಕರ್ ನಲ್ಲಿ ಮಹತ್ವದ ನಿಯಮ ಬದಲಾವಣೆ ಮಾಡಿದ ರಿಸರ್ವ್ ಬ್ಯಾಂಕ್.

Advertisement

ತಮ್ಮ ಬೆಳೆಬಾಳುವ ವಸ್ತು ಅಥವಾ ಚಿನ್ನ ಇಲ್ಲವೇ ಕೆಲವೊಂದು ಆಸ್ತಿಪತ್ರಗಳನ್ನು ಬ್ಯಾಂಕಿನ ಲಾಕರ್ ನಲ್ಲಿ ಇಡಲು ಬ್ಯಾಂಕಿನ ಗ್ರಾಹಕರು ಬ್ಯಾಂಕಿನಲ್ಲಿ ಲಾಕರ್(Bank Locker) ಮಾಡುತ್ತಾರೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank Of India) ಬ್ಯಾಂಕ್ ಲಾಕರ್ ವಿಚಾರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಅದರ ಅನ್ವಯ ಹೊಸ ಅಗ್ರಿಮೆಂಟ್ ಗೆ ಸಹಿ ಹಾಕುವಂತೆ ಗ್ರಾಹಕರಲ್ಲಿ ಕೇಳಿಕೊಂಡಿದೆ. ಬನ್ನಿ ಈ ವಿಚಾರದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಕೆಲವೊಂದು ಬ್ಯಾಂಕುಗಳು 500 ರೂಪಾಯಿಗಳ ಸ್ಟ್ಯಾಂಪ್ ಪೇಪರ್ ಅನ್ನು ತರುವಂತಹ ಹೇಳುತ್ತಿದ್ದರೆ ಇನ್ನೂ ಕೆಲವು ಬ್ಯಾಂಕುಗಳು ನೂರು ರೂಪಾಯಿಗಳ ಸ್ಟ್ಯಾಂಪ್ ಪೇಪರ್(Stamp Paper) ಅನ್ನು ತರಲು ಹೇಳುತ್ತಿವೆ ಆದರೆ ಈ ಸ್ಟ್ಯಾಂಪ್ ಪೇಪರ್ ಗಳ ಖರ್ಚನ್ನು ಯಾರು ನೀಡಬೇಕು ಎನ್ನುವುದರ ಬಗ್ಗೆ ಇನ್ನೂ ಕೂಡ ಗೊಂದಲವಿದೆ. ಕೆಲವೊಂದು ಬ್ಯಾಂಕುಗಳು ಛಾವೇ ಸ್ಟಾಂಪ್ ಪೇಪರ್ ಅನ್ನು ನೀಡುತ್ತಿದ್ದರೆ ಇನ್ನು ಕೆಲವು ಬ್ಯಾಂಕುಗಳು ಗ್ರಾಹಕರಿಗೆ ತರಲು ಹೇಳುತ್ತಿದ್ದು ಇನ್ನೂ ಕೆಲವರು ಹೇಳುವ ಪ್ರಕಾರ ಈ ವಿಚಾರದ ಬಗ್ಗೆ ತಮ್ಮ ಬ್ಯಾಂಕಿನ ಬ್ರಾಂಚ್ ಗಳು ಇದುವರೆಗೂ ಕೂಡ ಯಾವುದೇ ಸೂಚನೆಯನ್ನು ನೀಡಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ.

ಈಗಾಗಲೇ ಬ್ಯಾಂಕುಗಳ ಲಾಕರ್ ಸೇವೆಯ ವಾರ್ಷಿಕ ಶುಲ್ಕವನ್ನು ಕೂಡ ಹೆಚ್ಚಿಸಲಾಗಿದ್ದು SBI ಬ್ಯಾಂಕ್ 1500 ರೂಪಾಯಿಯಿಂದ ಹನ್ನೆರಡು ಸಾವಿರ ರೂಪಾಯಿಗೆ ಹೆಚ್ಚಿಸಿದ್ದು ಇದರಲ್ಲಿ 500 ರೂಪಾಯಿಗಳಿಂದ 3000 ವರೆಗೆ GST ಶುಲ್ಕವನ್ನು ಕೂಡ ಅಳವಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. HDFC ಬ್ಯಾಂಕ್ 1950 ರೂಪಾಯಿಗಳಿಂದ 20,000 ಗಳ ವರೆಗೆ ಶುಲ್ಕವನ್ನು ಹೆಚ್ಚಿಸಲಾಗಿದೆ. ಆರ್‌ಬಿಐ ಹೇಳಿರುವ ಪ್ರಕಾರ ಪ್ರತಿಯೊಬ್ಬರು ಕೂಡ ತಮ್ಮ ಹೊಸ ಬ್ಯಾಂಕ್ ಲಾಕರ್ ಕಾಂಟ್ರಾಕ್ಟ್ ರಿನಿವಲ್(Bank Locker Contract Renewal) ಅನ್ನು ಮಾಡಿಸಿಕೊಳ್ಳಬೇಕು ಎಂಬುದಾಗಿ ಹೇಳಿದೆ. ಇದಕ್ಕಾಗಿ ಕೊನೆಯ ದಿನಾಂಕ ಎಂಬುದಾಗಿ ಡಿಸೆಂಬರ್ 31ನ್ನು ನಿಗದಿಪಡಿಸಲಾಗಿದೆ.

RBI ಹೇಳಿರುವ ಪ್ರಕಾರ ಅಗ್ರಿಮೆಂಟ್ ಮಾಡಿದ ನಂತರ ಒಂದು ಪ್ರತಿ ಬ್ಯಾಂಕಿನ ಪ್ರತಿನಿಧಿಯ ಬಳಿ ಹಾಗೂ ಇನ್ನೊಂದು ಪ್ರತಿ ಗ್ರಾಹಕರ ಬಳಿ ಇರಬೇಕು ಎಂಬುದಾಗಿ ಹೇಳಿದೆ. ಈ ನಿಯಮಗಳಿಗೆ ಸಹಿ ಹಾಕಿದ ನಂತರ ಗ್ರಾಹಕರ ವಸ್ತುವಿಗೆ ಸಂಪೂರ್ಣವಾಗಿ ಬ್ಯಾಂಕಿನವರು ಜವಾಬ್ದಾರಿ ಆಗಿರುತ್ತಾರೆ ಹಾಗೂ ಒಂದು ವೇಳೆ ಏನಾದರೂ ಆದರೆ ನಿಮ್ಮ ವಾರ್ಷಿಕ ಶುಲ್ಕದ 100 ಪಟ್ಟು ಹಣವನ್ನು ಬ್ಯಾಂಕಿನವರು ನಿಮಗೆ ನೀಡಬೇಕಾಗಿರುತ್ತದೆ. ಹೀಗಾಗಿ ರಿಸರ್ವ್ ಬ್ಯಾಂಕಿನ ಹೊಸ ಲಾಕರ್ ನಿಯಮ ಕೊನೆಯಲ್ಲಿ ನಿಮಗೆ ಒಂದು ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದಾಗಿದೆ.

Leave A Reply

Your email address will not be published.