Karnataka Times
Trending Stories, Viral News, Gossips & Everything in Kannada

Private Banks: ಭಾರತದ ಈ 10 ಖಾಸಗಿ ಬ್ಯಾಂಕುಗಳು ಅತ್ಯಂತ ಬೆಸ್ಟ್ ಹಾಗೂ ಸೇಫ್!

ದೇಶದ ಆರ್ಥಿಕ ವ್ಯವಹಾರಗಳ ಭದ್ರಬುನಾದಿ ಎಂದರೆ ಅದು ಬ್ಯಾಂಕುಗಳು. ದೇಶದೆಲ್ಲೆಡೆ ಇರುವ ಬ್ಯಾಂಕುಗಳು RBI ನ ನೀತಿ ನಿರ್ಬಂಧನೆಗೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಗ್ರಾಹಕರ ಆರ್ಥಿಕ ಚಟುವಟಿಕೆ ಕಾಯ್ದುಕೊಂಡು ದೇಶದ ಆರ್ಥಿಕ ವ್ಯವಸ್ಥೆ ಉನ್ನತ ಆಗಿರಬೇಕೆಂಬ ಕಾರಣಕ್ಕೆ ಉತ್ತಮ ಆಡಳಿತ ವ್ಯವಸ್ಥೆಯನ್ನೇ ನೀಡಿರುತ್ತಾರೆ ಈ ಮೂಲಕ ಗ್ರಾಹಕರ ಹಿತರಕ್ಷಣೆ ಸಹ ಕಾಯ್ದುಕೊಳ್ಳಲಾಗುತ್ತದೆ. ಇಂದು ಸರಕಾರದ ನೀತಿ ಕ್ರಮ ಮುಂದುವರೆಸಿಕೊಂಡು ಹೋಗುವ ಅನೇಕ ಖಾಸಗಿ ಬ್ಯಾಂಕಿನಿಂದ ಕೂಡ ದೇಶದ ಆರ್ಥಿಕ ವ್ಯವಸ್ಥೆ ಸಾಗುತ್ತಿದ್ದು ಈ ಬಗ್ಗೆ ವಿಶೇಷ ಲೇಖನ ಇಲ್ಲಿದೆ.

Advertisement

ಯಾವುದು ಬೆಸ್ಟ್ ಬ್ಯಾಂಕ್ ಗಳು?

Advertisement

ಬ್ಯಾಂಕ್ ವ್ಯವಹಾರಗಳ ಸಾಲಿನಲ್ಲಿ ಅಧಿಕ ಮಾನ್ಯತೆ ಪಡೆದ ಬಹುತೇಕ ಬ್ಯಾಂಕ್ ಗಳಲ್ಲಿ ಖಾಸಗಿ ಪಾಲು ಕೂಡಾ ಅಷ್ಟೇ ಇದೆ. ಹಾಗಾದರೆ ದೇಶದ ಆರ್ಥಿಕ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಿದ್ದ ಖಾಸಗಿ ಬ್ಯಾಂಕಿನ (Private Banks) ಸಾಲಿನಲ್ಲಿ ಈ ಕೆಳಗಿನವು ದೇಶದಲ್ಲೆ ಅಗ್ರಗಣ್ಯ ಎನ್ನಬಹುದು.

Advertisement

HDFC:

Advertisement

ಇದು ಭಾರತದ ಅತ್ಯುತ್ತಮ ಖಾಸಗಿ ಬ್ಯಾಂಕಿನಲ್ಲಿ ಒಂದಾಗಿದ್ದು ಡಿಜಿಟಲ್ ಹಾಗೂ ಬ್ಯಾಂಕಿಂಗ್ ಸೇವೆಯನ್ನು ಉತ್ತಮ ಮಟ್ಟದಲ್ಲಿ ನೀಡುತ್ತಿದೆ. 6342ಬ್ರ್ಯಾಂಚ್ ಹಾಗೂ 18,130ATM ಅನ್ನು ಹೊಂದಿದೆ. 98,061ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 105,161ಕೋಟಿ ರೂ., ನಿವ್ವಳ ಆದಾಯ 38,151ಕೋಟಿ ರೂ. ವ್ಯವಹಾರ ಇದೆ. ಶಿಕ್ಷಣ, ವಿಮೆ,ಮ್ಯೂಚುವಲ್ ಫಂಡ್, ಇತರ ಸಾಲ ಹಾಗೂ ಆನ್ಲೈನ್ ಬ್ಯಾಂಕಿಂಗ್ ಸೇವೆ ಸಹ ಇದೆ.

Axis Bank:

ದೇಶಿಯ ಮತ್ತು ಅಂತರಾಷ್ಟ್ರೀಯ ಬ್ಯಾಂಕ್ ಸೇವೆ ನೀಡಲು ಈ ವ್ಯವಹಾರ ನೆಲೆಯಲ್ಲಿ ಉತ್ತಮವಾಗಿದೆ. ಕ್ರೆಡಿಟ್ ಕಾರ್ಡ್, ಸಾಲಗಳು, ಉಳಿತಾಯಗಳು, ಹೂಡಿಕೆ ಅವಕಾಶ ಇತ್ಯಾದಿ ಇರುವುದು. 4,758ಬ್ರ್ಯಾಂಚ್ ಹಾಗೂ 10,990ATM ಅನ್ನು ಹೊಂದಿದೆ. 85,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 56,044ಕೋಟಿ ರೂ., ನಿವ್ವಳ ಆದಾಯ 14, 162 ಕೋಟಿ ರೂ. ವ್ಯವಹಾರ ಇದೆ. ಶಿಕ್ಷಣ, ತೆರಿಗೆ ಪರಿಹಾರ, ಕೃಷಿ ಮತ್ತು ಗ್ರಾಮೀಣ ಹಣಕಾಸು, ಆನ್ಲೈನ್ ಬ್ಯಾಂಕಿಂಗ್ ಸೇವೆ ಸಹ ಇದೆ.

ICICI Bank:

ಅತ್ಯಾಧುನಿಕ ಡಿಜಿಟಲ್ ಸೌಲಭ್ಯ ಈ ಬ್ಯಾಂಕಿನಲ್ಲಿ ಇದೆ. ಚಿಲ್ಲರೆ, ಕಾಪೋರೇಟ್ ಬ್ಯಾಂಕಿಂಗ್ ಹಾಗೂ ಸಾಲ ವ್ಯವಹಾರದಲ್ಲಿ ಹೆಸರುವಾಸಿಯಾಗಿದೆ. 5275ಬ್ರ್ಯಾಂಚ್ ಹಾಗೂ 15,589ATM ಅನ್ನು ಹೊಂದಿದೆ. 85,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 84,353ಕೋಟಿ ರೂ., ನಿವ್ವಳ ಆದಾಯ 25,783ಕೋಟಿ ರೂ. ವ್ಯವಹಾರ ಇದೆ. ಉಳಿತಾಯ , ಚಾಲ್ತಿ ಖಾತೆ ತೆರೆಯುವುದು, ಫಾಸ್ಟ್ಯಾಗ್, ಠೇವಣಿ ಬ್ಯಾಂಕಿಂಗ್ ಸೇವೆ ಸಹ ಇದೆ.

Indusind Bank:

ದೇಶದಲ್ಲಿ ಸಣ್ಣ ವ್ಯಾಪಾರ ವ್ಯವಹಾರ ಉತ್ತೇಜಿಸುವ ಪ್ರಮುಖ ಬ್ಯಾಂಕ್ ಸಾಲಿನಲ್ಲಿ ಇದು ಒಂದು. 2,015 ಬ್ರ್ಯಾಂಚ್ ಹಾಗೂ 2,886ATM ಅನ್ನು ಹೊಂದಿದೆ. 25,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 24,154ಕೋಟಿ ರೂ., ನಿವ್ವಳ ಆದಾಯ ವ್ಯವಹಾರ ಇದೆ. ಶಿಕ್ಷಣ, ತೆರಿಗೆ ಪರಿಹಾರ, ಕೃಷಿ ಮತ್ತು ಗ್ರಾಮೀಣ ಹಣಕಾಸು, ಆನ್ಲೈನ್ ಬ್ಯಾಂಕಿಂಗ್ ಸೇವೆ ಸಹ ಇದೆ.

Kotak Mahindra Bank:

ದೇಶಿಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಇದೊಂದು ಅತ್ಯುತ್ತಮ ಬ್ಯಾಂಕ್ ಆಗಿದೆ. ಕ್ರೆಡಿಟ್ ಕಾರ್ಡ್, ಸಾಲ ಮತ್ತು ಉಳಿತಾಯ ಖಾತೆ ವಿಚಾರದಿಂದ ಈ ಬ್ಯಾಂಕ್ ಮಾನ್ಯತೆ ಪಡೆದಿದೆ. 1,600 ಬ್ರ್ಯಾಂಚ್ ಹಾಗೂ 2,519 ATM ಅನ್ನು ಹೊಂದಿದೆ. 71,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 31,346ಕೋಟಿ ರೂ., ನಿವ್ವಳ ಆದಾಯ ವ್ಯವಹಾರ ಇದೆ.

ಇತರ ಬ್ಯಾಂಕ್ ಗಳು:

ಎಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, RBL Bank, j&k Bank, South Indian Bank ಇವುಗಳು ಸಹ ಖಾಸಗಿ ಮಟ್ಟದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ವಾಗಿ ಸೇವೆ ನೀಡುವ ಬ್ಯಾಂಕ್ ಆಗಿದೆ. ಹಾಗಾಗಿ ಉತ್ತಮ ವ್ಯವಹಾರ ಆಧರಿಸಿ ಈ ಬ್ಯಾಂಕಿನ ವ್ಯವಹಾರ ಕೂಡ ಉತ್ತಮವಾಗೆ ಇದೆ.

Leave A Reply

Your email address will not be published.