Bank Loan: ಬ್ಯಾಂಕಿನಲ್ಲಿ ಸಾಲ ಮಾಡಿದವರಿಗೆ ಇದೀಗ ಮತ್ತೊಂದು ಸಂಕಷ್ಟ

Advertisement
ಭಾರತೀಯ ಆರ್ಥಿಕ ಹಾಗೂ ಹಣಕಾಸಿನ ವ್ಯವಹಾರದ ದೊಡ್ಡಣ್ಣ ನೆನೆಸಿದ RBI ಆಗಾಗ ತನ್ನ ಹೊಸ ನೀತಿ ನಿಯಮಾವಳಿಯನ್ನು ಪ್ರಸ್ತುತಿ ಪಡಿಸುತ್ತಲೇ ಇರುತ್ತದೆ. ಹಣಕಾಸಿನ ವರ್ಷದಲ್ಲಿ ಇದೀಗ ಹೊಸ ನೀತಿಯನ್ನು ಜಾರಿಗೆ ತರಲು ಆರ್ ಬಿಐ ಮುಂದಾಗಿದೆ.
ಏನು ಆ ಹೊಸ ನೀತಿ:
ಪ್ರತೀ ಹಣಕಾಸಿನ ವರ್ಷದಂತೆ ಈ ವರ್ಷದಂದು ಎಪ್ರಿಲ್ ನಲ್ಲೇ ಈ ಸುಧಾರಣಾ ಕ್ರಮ ಜಾರಿಗೆ ಬರಲಿದೆ ಎನ್ನಬಹುದು. ಹಣಕಾಸು ಅಂತಿಯಲ್ಲಿ ರೆಪೊ ದರ (Repo Rate) ವನ್ನು ಶೇಕಡ 0.25 ರಷ್ಟು ಹೆಚ್ಚಳ ಮಾಡುವ ನಿರ್ಧಾರಕ್ಕೆ ಆರ್ ಬಿಐ (RBI) ಬಂದಿದ್ದು ಏಪ್ರಿಲ್ 6 ರಂದು ಈ ಬಗ್ಗೆ ಕರಡು ಸಹ ಬಿಡುಗಡೆಯಾಗಲಿದೆ. ಪ್ರತಿ ಸಲದಂತೆ ಈ ಬಾರಿ ಎಪ್ರಿಲ್ ನಲ್ಲೇ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸಭೆ ಸೇರಲಿದ್ದು ಇಲ್ಲಿ ರೇಪೋ ದರದ ವಿಚಾರವು ಮುನ್ನಲೆಗೆ ಬರಲಿದೆ.
ವಿದೇಶಿ ಹಣಕಾಸಿನ ವ್ಯವಹಾರದಲ್ಲಿ ದೇಶಿಯ ಕರೆನ್ಸಿ ಮೌಲ್ಯ ಕುಗ್ಗುತಿದ್ದು ಆರ್ಥಿಕ ವ್ಯವಸ್ಥೆಯ ಹಣದುಬ್ಬರದ ಸ್ಥಿತಿಯನ್ನು ಹತೋಟಿಯಲ್ಲಿಡಲು ಆರ್ ಬಿಐ (RBI) ಈ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 2022ರಲ್ಲಿಯೂ ಇದೇ ರೀತಿ ಹಣದುಬ್ಬರದ ಸ್ಥಿತಿ ಬಂದಾಗ ಫೆಬ್ರವರಿಯಲ್ಲಿ ಶೇಕಡ 0.25 ರಷ್ಟು ರೆಪೋ ದರ ಏರಿಕೆ ಮಾಡಲಾಗಿತ್ತು ಎನ್ನಬಹುದು.
ಈ ಬಾರಿ ಶೇಕಡ 0.25 ರಷ್ಟು ರೇಪೋ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಒಟ್ಟಾರೆಯಾಗಿ ಆರ್ಥಿಕ ವ್ಯವಸ್ಥೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು RBI ನೀತಿ ನಿಯಮ ರೂಪಣೆ ಸಾಮಾನ್ಯವಾಗಿದ್ದು ಇದು ಯಾವರೀತಿ ಪರಿಣಾಮ ಬೀರಬಹುದೆಂದು ಕಾದು ನೋಡಬೇಕು.