Indian Economy: ಈ 3 ಬ್ಯಾಂಕ್ ಮುಳುದರೆ ಇಡೀ ಭಾರತದ ಆರ್ಥಿಕತೆಯೇ ಕುಸಿದಂತೆ!

Advertisement
ದೇಶದ ಆರ್ಥಿಕ ವ್ಯವಸ್ಥೆಯ ಜೀವಾಳವಾಗಿರುವ ಬ್ಯಾಂಕಿನ ವ್ಯವಹಾರವು ಪರಸ್ಪರ ಅವಲಂಬಿ ಸಂಬಂಧವನ್ನು ಹೊಂದಿದೆ. ಅದೇ ರೀತಿ ದೇಶಿಯ ಬ್ಯಾಂಕ್ ಸಹ ವಿದೇಶಿ ವ್ಯವಹಾರದ ಆಧಾರದಲ್ಲಿ ಲಾಭ ಹಾಗೂ ನಷ್ಡ ಮಟ್ಟವನ್ನು ಕಂಡುಕೊಳ್ಳುತ್ತದೆ. ಆದರೂ ಕೆಲವು ಬ್ಯಾಂಕ್ ಮಾತ್ರ ಯಾವುದೆ ಬಾಹ್ಯ ಪರಿಣಾಮ ಬೀರಲಾರದು ಹಾಗಾದರೆ ಯಾವುದು ಆ ಬ್ಯಾಂಕ್ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ದೇಶಿಯ ಆ ಮೂರು ಬ್ಯಾಂಕನ್ನು ತಿಳಿಸುವ ಮೊದಲು ವಿದೇಶಿ ವ್ಯವಹಾರದ ಪ್ರಸ್ತುತ ಸ್ಥಿತಿ ತಿಳಿಯುವುದು ಅತ್ಯಗತ್ಯವಾಗಿದೆ. ವಿಶ್ವದ ದೊಡ್ಡಣ್ಣನಾದ ಅಮೇರಿಕಾ ಸದ್ಯ ಬ್ಯಾಂಕಿನ ವ್ಯವಹಾರದಲ್ಲಿ ಕುಸಿದಿದೆ. ಈಗಾಗಲೇ ಸಿಗ್ನೇಚರ್ ಬ್ಯಾಂಕ್ (Sjgnature Bank) ಮತ್ತು ಸಿಲಿಕಾನ್ ವ್ಯಾಲಿ ಬ್ಯಾಂಕ್ (Silikan vyali Bank) ತನ್ನ ಆರ್ಥಿಕ ವ್ಯವಹಾರದಲ್ಲಿ ಬಾರಿ ಹಿನ್ನಡೆಪಡೆದಿದ್ದು ಇದೇ ವ್ಯವಸ್ಥೆ ಭಾರತದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಭಾರತೀಯ ಬಹುತೇಕ ಸ್ಟಾರ್ಟ್ ಅಪ್ (Start up) ಕಂಪೆನಿಗಳು ಅಮೇರಿಕಾದ ಮೂಲದವುಗಳಾಗಿದ್ದು ಇದು ದೇಶಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಭಾರತೀಯ ಮೂರು ಬ್ಯಾಂಕ್ ಮೇಲೆ ಯಾವುದೇ ಪರಿಣಾಮ ಬೀರಲಾರರು. ಎಸ್ ಬಿ ಐ (SBI), ಎಚ್ ಡಿಎಫ್ ಸಿ (HDFC), ಐಸಿಐಸಿಐ (ICICI) ಬ್ಯಾಂಕಿನ ವ್ಯವಹಾರದಲ್ಲಿ ಯಾವುದೇ ರೀತಿಯ ಪರಿಣಾಮ ಬೀರಲಾರರು.
ಯಾಕೆ ಈ ಬ್ಯಾಂಕಿನ ಮೇಲೆ ಪರಿಣಾಮ ಬೀರೊಲ್ಲ:
ಬ್ಯಾಂಕಿನ ಎಲ್ಲ ವ್ಯವಸ್ಥೆಯ ದೇಶಿಯ ಮುಖ್ಯಸ್ಥನಾಗಿರುವ RBI ನಲ್ಲಿ ಈ ಮೂರು ಬ್ಯಾಂಕ್ ನ ಡಿ-ಎಸ್ಐಬಿ ವರ್ಗದ ಅಡಿಯಲ್ಲಿ ಬರುತ್ತದೆ. D-sib ಅಂದರೆ ದೊಡ್ಡ ಮಟ್ಟದ ಆರ್ಥಿಕ ವ್ಯವಹಾರ ಇರುವ ಬ್ಯಾಂಕ್ ಆಗಿದೆ. ಇದರಲ್ಲಿ ಮಾನ್ಯತೆ ಪಡೆಯಲು ದೇಶಿಯ ಆರ್ಥಿಕ ವ್ಯವಹಾರದಲ್ಲಿ ದೇಶಿಯ ಜಿಡಿಪಿ (GDP) ದರ 2%ಕ್ಕಿಂತ ಅಧಿಕ ಇರಬೇಕು. ಈ ಮೂಲಕ ಶ್ರೇಣಿಯ ಆಧಾರದಲ್ಲಿ ಡಿ- ಎಸ್ಐಬಿ (D-sib )ಅಡಿಯಲ್ಲಿ ಬರುವ ಈ ಮೂರು ಬ್ಯಾಂಕ್ ನಲ್ಲಿ ಶ್ರೇಣಿಯನ್ನು ಸಹ ನೀಡಲಾಗಿದೆ. ಈ ಮೂರು ಬ್ಯಾಂಕ್ ದೇಶಿಯ ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಬೀರಿದರು ಇವುಗಳು ಸಂಪೂರ್ಣ ಸ್ವಾಯತ್ತತೆಯ ಬ್ಯಾಂಕ್ ಆಗಿದೆ. ಇದರ ಲಾಭ ಅಥವಾ ನಷ್ಟದಲ್ಲಿ ಸರಕಾರ ಎಂದಿಗೂ ಮುಂದಾಳತ್ವ ವಹಿಸಲಾರದು. ಅದೆ ರೀತಿ ಇವುಗಳು ಆರ್ ಬಿಐ ಅಡಿಯಲ್ಲಿದ್ದರೂ ಸರಕಾರಿ ಬ್ಯಾಂಕಿಗೆ ವಿದೇಶಿ ವ್ಯವಸ್ಥೆ ಪರಿಣಾಮ ಬಿದ್ದಂತೆ ಇವುಗಳ ಮೇಲೆ ಪರಿಣಾಮ ಬೀರಲಾರದು ಎನ್ನಬಹುದು.