Karnataka Times
Trending Stories, Viral News, Gossips & Everything in Kannada

Lakshmi Hebbalkar: ಗೃಹಲಕ್ಷ್ಮಿ ಹಣ ಬಾರದಿದ್ದರೂ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

advertisement

Lakshmi Hebbalkar: ರಾಜ್ಯದಲ್ಲಿ ಇಂದು ಮಹಿಳಾ ಪರವಾದ ಯೋಜನೆಗಳು ಹೆಚ್ಚು ಪ್ರಚಲಿತ ದಲ್ಲಿದೆ ಹೌದು.‌ಈ ಭಾರಿ‌ ರಾಜ್ಯ ಸರಕಾರವು ಮಹಿಳಾ ಪರವಾದ ಮನ್ನಣೆಗೆ ಹೆಚ್ಚು‌ಒತ್ತು‌ ನೀಡಿದೆ.ಮಹಿಳಾ ಪರವಾದ ಎರಡು ಯೋಜನೆಯಾದ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಯನ್ನು‌ ಜಾರಿಗೆ ತರುವ ಮೂಲಕ ಹೆಚ್ಚು ನೆರವಾಗುತ್ತಿದೆ.ಹೌದು ಮಹಿಳೆಯರು ಗೃಹಲಕ್ಷ್ಮಿ ‌ಮೂಲಕ ಎರಡು ಸಾವಿರ ಮೊತ್ತ ಪಡೆಯುತ್ತಿದ್ದಾರೆ.ಅದೇ ರೀತಿ ಶಕ್ತಿ ‌‌ಯೋಜನೆಯನ್ನ ಸೌಲಭ್ಯ ವನ್ನು‌ಕೂಡ ಪಡೆಯುತ್ತಿದ್ದಾರೆ. ಆದರೆ‌ ಕೆಲವು ಮಹಿಳೆಯರು ನೋಂದಣಿ ಮಾಡಿದ್ದರೂ ಕೂಡ ಈ ಗೃಹಲಕ್ಷ್ಮಿ ಹಣ ಬಂದಿಲ್ಲ.‌ ಕೆಲವರಿಗೆ ಎರಡು ತಿಂಗಳಿನಿಂದ ಹಣವೇ ಜಮೆ ಯಾಗಿಲ್ಲ. ಇದೀಗ ಹಣ ಬಾರದೇ ಇದ್ದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ‌ಇಲಾಖೆಯ ಸಚಿವೆ ಮತ್ತೊಂದು‌ ಗುಡ್ ನ್ಯೂಸ್ ಅನ್ನು ನೀಡಿದ್ದು ಈ ಬಗ್ಗೆ ತಿಳಿಯಲು ಈ‌ ಲೇಖನ ಪೂರ್ತಿಯಾಗಿ‌ಓದಿರಿ.

ಹೌದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಹಣ ಬಾರದೇ ಇದ್ದವರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅಂಗನವಾಡಿ ಸಿಬ್ಬಂದಿ ಗಳಿಗೆ ನೀಡಿರುವಂತಹ ಗುಡ್ ನ್ಯೂಸ್ ಇದಾಗಿದ್ದು ಅಂಗನವಾಡಿ ಕೇಂದ್ರಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲಾಗುವುದು ಎಂದಿದ್ದಾರೆ. ಹೌದು ಈಗಾಗಲೇ ಅಂಗನವಾಡಿ ಸಿಬ್ಬಂದಿ ಗಳು ಕೆಲವು ರಾಜ್ಯದಲ್ಲಿ‌ ಪ್ರತಿಭಟನೆ ಮಾಡ್ತಾ ಇದ್ದು ಕೆಲವು ವಿಚಾರಗಳ ಬಗ್ಗೆ ಮನವಿ ಯನ್ನು ಸಹ ಮಾಡಿದ್ದಾರೆ. ಇದೀಗ 10,000 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.Procedure to check Gruha Lakshmi Money

advertisement

ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇನ್ನು ಹೆಚ್ಚಿನ ಸ್ಮಾರ್ಟ್ ಆಗಬೇಕೆಂದು ಅವರಿಗೆ ಮೊಬೈಲ್ ವಿತರಣೆ ಮಾಡ್ತಾ ಇದ್ದೇವೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ 20 ಸಾವಿರ ಅಂಗನವಾಡಿಗಳಿಗೆ ಸ್ಮಾರ್ಟ್ ಕ್ಲಾಸ್ ನೀಡಲು ಆಯೋಜನೆ ಮಾಡಲಾಗಿದೆ. ಈಗಾಗಲೇ ಮಹಿಳೆಯರು ಮೊಬೈಲ್ ಮೂಲಕ ದಾಖಲಾತಿ ಕಳುಹಿಸು ತ್ತಿದ್ದರು. ಮೊಬೈಲ್‌ನಲ್ಲಿ ಪೋಷನ್ ಅಭಿಯಾನ, ಪಲ್ಸ್ ಪೋಲಿಯೋ ಅಭಿಯಾನ ಮಾಡಲು ಆಗುತ್ತಿಲ್ಲ ನೆಟ್ ವರ್ಕ್ ಸಮಸ್ಯೆ ಎನ್ನುತ್ತಿದ್ದರು. ಹಾಗಾಗಿ, 13 ಸಾವಿರ ಮೌಲ್ಯದ ಉತ್ತಮ ಗುಣಮಟ್ಟದ ಸ್ಯಾಮಸಂಗ್ ಮೊಬೈಲ್ ವಿತರಿಸಲಾಗುತ್ತಿದೆ ಎಂದರು.

ಗೌರವಧನ ಹೆಚ್ಚಳಕ್ಕೂ ಮನವಿ
ಬೆಳಗಾವಿಯಲ್ಲಿ ಸಚಿವೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್, ಸೀರೆ, ಔಷಧ ಕಿಟ್, ತೂಕದ ಯಂತ್ರಗಳನ್ನು ವಿತರಿಸಿ ಮಾತನಾಡಿದರು.ಅದೇ ರೀತಿ ರಾಜ್ಯದ 20 ಲಕ್ಷ ರೂಪಾಯಿ ವೆಚ್ಚದಲ್ಲಿ 1000 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಗುಡ್ ನ್ಯೂಸ್ ನೀಡಿದರು.ಇನ್ನು ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರುಅಂಗನವಾಡಿ ಕಾರ್ಯ ಕರ್ತರ ಪ್ರತಿಭಟನೆ
ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು.ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಶಿಕ್ಷಣ ಮಾಡಲು ಆದ್ಯತೆ ಕೊಡಬೇಕು. 3 ರಿಂದ 6 ವರ್ಷದ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಉತ್ತಮ ಆಟೋಪಕರಣಗಳನ್ನು ಒದಗಿಸಬೇಕು ಎಂದು ಅಂಗನವಾಡಿ ಸಿಬ್ಬಂದಿ ಗಳು ಪ್ರತಿಭಟನೆ ಮಾಡ್ತಾ ಇದ್ದು ಅಂಗನವಾಡಿ ಕಾರ್ಯಕರ್ತರನ್ನು ಯಾರನ್ನೂ ಕೆಲಸದಿಂದ ತೆಗೆಯೋದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

Procedure to check Gruha Lakshmi Money

advertisement

Leave A Reply

Your email address will not be published.