Karnataka Times
Trending Stories, Viral News, Gossips & Everything in Kannada

Bank Loan: ಇನ್ಮೇಲೆ ಬ್ಯಾಂಕ್ ಲೋನ್ ಕಟ್ಟದಿದ್ದರೆ ಏನಾಗಲಿದೆ ಗೊತ್ತಾ?

Advertisement

ಎಷ್ಟೋ ಸಲ, ಅನಿವಾರ್ಯ ಸಂದರ್ಭದಲ್ಲಿ ಬ್ಯಾಂಕ್ ನಿಂದ ಸಾಲ ತೆಗೆದುಕೊಳ್ಳಬೇಕಾಗುತ್ತದೆ ಅದರಲ್ಲೂ ಇತ್ತೀಚಿಗೆ ಹಣದುಬ್ಬರದಿಂದ ಜನ ತತ್ತರಿಸಿ ಹೋಗುತ್ತಿದ್ದಾರೆ. ಸ್ವಂತ ಉದ್ಯೋಗ ಮಾಡಿದವರಿಗೂ ಅಥವಾ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುವವರೆಗೂ ಕೊಡುತ್ತಿರುವ ಸಂಬಳ ಸಾಕಾಗುವುದಿಲ್ಲ. ಹಾಗಾಗಿ ಸಾಕಷ್ಟು ಬಾರಿ ವಯಕ್ತಿಕ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ ಜೊತೆಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಗೃಹ ಸಾಲವನ್ನು ತೆಗೆದುಕೊಂಡು ಮನೆ ನಿರ್ಮಾಣವನ್ನು ಕೂಡ ಹಲವರು ಮಾಡುತ್ತಾರೆ. ಇನ್ನು ನೀವು ಯಾವುದೇ ಬ್ಯಾಂಕ್ ನಲ್ಲಿ ಸಾಲವನ್ನು ತೆಗೆದುಕೊಳ್ಳಿ ಆದರೆ ಅದನ್ನ ನಿಯಮಿತವಾಗಿ ಪಾವತಿಸುತ್ತಾ ಬರಬೇಕು ತಿಂಗಳ ಇಎಂಐ ಕಟ್ಟಬೇಕು. ಒಂದು ವೇಳೆ ನೀವು ಸಾಲ ತೆಗೆದುಕೊಂಡು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಏನೆಲ್ಲಾ ಸಮಸ್ಯೆಗಳು ಆಗಬಹುದು ಗೊತ್ತಾ.

ಮಾಸಿಕ ಕಂತು ಪಾವತಿಸಬೇಕು
ಹೌದು, ಸಾಲ ತೆಗೆದುಕೊಂಡು ನೀವು ಮಾಸಿಕ ಕಂತನ್ನು ಪಾವತಿಸಬೇಕು ಒಂದು ವೇಳೆ ಎರಡು ಕಂತು ಪಾವತಿ ಮಾಡದೆ ಇದ್ದಲ್ಲಿ ಬ್ಯಾಂಕ್ ನಿಮಗೆ ಜ್ಞಾಪನ ಸಂದೇಶವನ್ನು ಕಳುಹಿಸಬಹುದು ನಂತರ ಮೂರನೇ ಕಂತನೂ ಪಾವತಿ ಮಾಡದೇ ಇದ್ದಾಗ ಸಾಲ ಮರು ಪಾವತಿ ಮಾಡುವಂತೆ ಕಾನೂನು ನೋಟಿಸ್ ಜಾರಿಗೆ ಬರುತ್ತದೆ ಎಚ್ಚರಿಕೆಯ ನಂತರ ಪಾವತಿಸದೆ ಇದ್ದಲ್ಲಿ ಬ್ಯಾಂಕ ನಿಮ್ಮನ್ನು ಡೀಫಾಲ್ಟರ್ ಎಂದು ಘೋಷಿಸಬಹುದು.

ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು:
ನೀವು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡದೇ ಇದ್ದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆಯೂ ಕೂಡ ಪರಿಣಾಮ ಬೀರಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲ ಇದ್ದಲ್ಲಿ ನೀವು ಬೇರೆ ಬ್ಯಾಂಕಿನಿಂದ ಸಾಲವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಬ್ಯಾಂಕ್ ನಲ್ಲಿ ನೀವು ವೈಯಕ್ತಿಕ ಸಾಲ ಅಥವಾ ಇತರ ಸಾಲ ತೆಗೆದುಕೊಳ್ಳಬೇಕಿದ್ದರೆ ನಿಮ್ಮ ಕ್ರೆಡಿಟ್ ಕಾರ್ಡ್ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.

ಅಡವಿಟ್ಟ ಆಸ್ತಿ ಸಿಗುವುದಿಲ್ಲ
ಸಾಮಾನ್ಯವಾಗಿ ಗೃಹ ಸಾಲ ಅಥವಾ ಯಾವುದೇ ಸಾಲವನ್ನು ತೆಗೆದುಕೊಳ್ಳುವುದಿದ್ದರೆ ನೀವು ಅದಕ್ಕೆ ಭದ್ರತೆಗಾಗಿ ನಿಮ್ಮ ಬಳಿ ಇರುವ ಯಾವುದೇ ಆಸ್ತಿ ಪತ್ರವನ್ನು ಠೇವಣಿ ಇಡಬೇಕಾಗುತ್ತದೆ ಒಂದುವೇಳೆ ನೀವು ನಿಮ್ಮ ಸಾಲವನ್ನು ಮರುಪಾವತಿ ಮಾಡದೆ ಇದ್ದಲ್ಲಿ ಆಸ್ತಿ ದಾಖಲೆಗಳು ಬ್ಯಾಂಕ್ ನಲ್ಲಿಯೇ ಇರುತ್ತದೆ ಅದನ್ನು ನೀವು ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡುವವರೆಗೂ ಬ್ಯಾಂಕ್ ನಿಮಗೆ ಹಿಂತಿರುಗಿಸಿ ಕೊಡುವುದಿಲ್ಲ.

ಹರಾಜು ಹಾಕುವುದು
ದೀರ್ಘಾವಧಿಯ ಸಾಲವನ್ನು ತೆಗೆದುಕೊಂಡಿದ್ದರೆ ಅದರ ಮರುಪಾವತಿಗಾಗಿ ಬ್ಯಾಂಕ್ ಸಾಲಗಾರನಿಗೆ ಸಾಕಷ್ಟು ಸಮಯವನ್ನು ನೀಡುತ್ತದೆ ಮರುಪಾವತಿ ಮಾಡುವಂತೆ ಸಾಲಗಾರನಿಗೆ ನೋಟಿಸ್ ಕೂಡ ಕಳುಹಿಸಲಾಗುತ್ತದೆ ಇಷ್ಟೆಲ್ಲ ಮಾಡಿದರು ಸಾಲ ಮರುಪಾವತಿ ಮಾಡದೇ ಇದ್ದಲ್ಲಿ ಅಥವಾ ಬ್ಯಾಂಕ್ ಗೆ ಉತ್ತರ ನೀಡದೇ ಇದ್ದಲ್ಲಿ ಆಗ ಆತನ ಆಸ್ತಿಯನ್ನು ಬ್ಯಾಂಕ್ ಸ್ವಾಧೀನಪಡಿಸಿಕೊಳ್ಳುತ್ತದೆ ಜೊತೆಗೆ ಅದನ್ನು ಹರಾಜು ಹಾಕುತ್ತದೆ ಒಮ್ಮೆ ನಿಮ್ಮ ಆಸ್ತಿ ಹರಾಜು ಹಾಕಿದರೆ ಮತ್ತೆ ಅದು ನಿಮ್ಮ ಕೈ ಸೇರುವುದಿಲ್ಲ.
ಹಾಗಾಗಿ ಬ್ಯಾಂಕ್ ನಿಂದ ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ನೂರು ಬಾರಿ ಯೋಚಿಸಬೇಕು ಒಂದು ವೇಳೆ ನೀವು ಹಿಂತಿರುಗಿ ಸಾಲ ತೀರಿಸದೇ ಇದ್ದರೆ ನಿಮಗೆ ಭವಿಷ್ಯದಲ್ಲಿ ಸಮಸ್ಯೆ ಆಗುವುದು ಗ್ಯಾರಂಟಿ.

Leave A Reply

Your email address will not be published.