Investment Plan: ಮಕ್ಕಳ ಹೆಸರಲ್ಲಿ 5000 ಸಾವಿರ ಕಟ್ಟಿ 50 ಲಕ್ಷ ಪಡೆಯಿರಿ! ಹೊಸ ಯೋಜನೆ
ತಂದೆ ತಾಯಿಗಳಿಗೆ ಸದಾ ತಮ್ಮ ಮಕ್ಕಳ ಭವಿಷ್ಯದ್ದೇ ಚಿಂತೆ. ಅದರಲ್ಲೂ ಈಗಿನ ದುಬಾರಿ ದುನಿಯಾದಲ್ಲಿ ನೀವು ಎಷ್ಟು ಉತ್ತಮವಾಗಿ ಪ್ಲಾನಿಂಗ್ ಮಾಡಿ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಿರು ಅಷ್ಟು ಒಳ್ಳೆಯದು ಹಾಗಾದರೆ ಮಕ್ಕಳಿಗೋಸ್ಕರ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಎನ್ನುವ ಗೊಂದಲ ಹಲವರಲ್ಲಿ ಇರಬಹುದು ಅದಕ್ಕೆ ಉತ್ತಮವಾಗಿರುವ ಆಯ್ಕೆ ಅಂದರೆ ತಿಂಗಳಿಗೆ ಕೇವಲ ಐದು ಸಾವಿರ ಹೂಡಿಕೆ ಮಾಡಿ 20 ವರ್ಷಗಳಲ್ಲಿ 50 ಲಕ್ಷಕ್ಕಿಂತ ಅಧಿಕ ಲಾಭವನ್ನು ಪಡೆಯುವ ಎಸ್ಐಪಿ (Systematic Investment Plan) .
SIP ಯಲ್ಲಿ ಹೂಡಿಕೆ ಮಾಡಿ:
ಇಂದು ಜನ ಹೆಚ್ಚು ಲಾಭವನ್ನು ಗಳಿಸುವ ಸಲುವಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ ಅದರಲ್ಲಿ ಎಸ್ ಐ ಪಿ ಮಾಡಿಕೊಳ್ಳುವುದು ಒಳ್ಳೆಯದು. ಇದು ಸ್ಥಿರ ಮಾರುಕಟ್ಟೆ ಆಗಿರುವುದಿಲ್ಲ ಹಾಗಾಗಿ ಮಾರುಕಟ್ಟೆಯ ಏರುಳಿತದ ಆಧಾರದ ಮೇಲೆ ನಿಮಗೆ ಬರುವ ಆದಾಯ ನಿರ್ಧಾರಿತವಾಗುತ್ತದೆ. ಎಸ್ ಐ ಪಿ (Systematic Investment Plan) ಭವಿಷ್ಯಕ್ಕಾಗಿ ಹೋಡಿಕೆ ಮಾಡಲು ಆಯ್ದುಕೊಳ್ಳಬಹುದಾದ ಉತ್ತಮ ಯೋಜನೆಯಾಗಿದೆ. ಇದರಲ್ಲಿ ಬರುವ ಆದಾಯ, ಸ್ಥಿರ ಮಾರುಕಟ್ಟೆಯನ್ನು ಅವಲಂಬಿಸಿ ಇರುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಆದರೆ ದೀರ್ಘಕಾಲದ ಹೂಡಿಕೆಗೆ ಒಳ್ಳೆಯ ಆಯ್ಕೆಯಾಗಿದೆ.
ಎಷ್ಟು ಸಮಯ ಹೂಡಿಕೆ ಮಾಡಬೇಕು:
ಎಸ್ ಐ ಪಿ (Systematic Investment Plan) ಯಲ್ಲಿ ನೀವು ದೀರ್ಘಕಾಲದವರೆಗೆ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯವನ್ನು ಪಡೆಯಬಹುದು. ಉದಾಹರಣೆಗೆ ನೀವು 5,000 ರೂ. ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ. ಇದನ್ನು 20 ವರ್ಷಗಳವರೆಗೆ ಮುಂದುವರೆಸಿದರೆ ಒಟ್ಟು ಆಗುವ ಮೊತ್ತ ಹನ್ನೆರಡು ಲಕ್ಷಗಳು. ನಿಮ್ಮ ಈ ಠೇವಣಿಯ ಮೇಲೆ 12% ವರೆಗೆ ಬಡ್ಡಿ ಪಡೆಯಬಹುದು.
ಆಗ ನಿಮಗೆ ಸಿಗುವ ಹಣ 37,95,740 ರೂ. ಬಡ್ಡಿ. 20 ವರ್ಷಗಳ ನಂತರ 49,95,740 ರೂ. ಅಂದರೆ 50 ಲಕ್ಷ ರೂಪಾಯಿಗಳಷ್ಟು ಹಣ ನಿಮ್ಮ ಕೈ ಸೇರುತ್ತದೆ. ಹಾಗಾಗಿ ಮಕ್ಕಳ ಭವಿಷ್ಯಕ್ಕಾಗಿ ನೀವು ಹೂಡಿಕೆ ಮಾಡಲು ಬಯಸಿದರೆ ಇದು ಅತ್ಯುತ್ತಮ ಆಯ್ಕೆ ಎನ್ನಬಹುದು.