Post Office Updates: ಏಪ್ರಿಲ್ 1ರಿಂದ ಅಂಚೆ ಕಚೇರಿಯ ಯೋಜನೆಗಳಲ್ಲಿ ಆಗಲಿವೆ 3 ಬದಲಾವಣೆಗಳು.

Advertisement
ಏಪ್ರಿಲ್ 1 ರಿಂದ 2023-24ರ ವರ್ಷ ಪ್ರಾರಂಭವಾಗುತ್ತಿದ್ದು ಇದೇ ಹಿನ್ನೆಲೆಯಲ್ಲಿ ಅಂಚೆ ಕಚೇರಿಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಒಂದು ವೇಳೆ ನೀವು ಅಂಚೆ ಕಚೇರಿಯಲ್ಲಿ(Post Office) ಖಾತೆಯನ್ನು ತೆರೆಯಬೇಕು ಅಥವಾ ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎನ್ನುವ ಪ್ಲಾನ್ ಅನ್ನು ಹೊಂದಿದ್ದರೆ ಆಗುತ್ತಿರುವ ಈ ಮೂರು ಬದಲಾವಣೆಗಳನ್ನು ತಿಳಿದುಕೊಂಡು ನಿಮ್ಮ ಲಾಭಕ್ಕೆ ಬಳಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಆ ಮೂರು ಬದಲಾವಣೆಗಳು ಯಾವುವು ಎಂಬುದನ್ನು ತಿಳಿಯೋಣ.
ನಿಮ್ಮ ಖಾತೆಗೆ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡುವುದು ಅನಿವಾರ್ಯ;
ಪೋಸ್ಟ್ ಆಫೀಸ್ನಲ್ಲಿರುವಂತಹ ಎಲ್ಲಾ ಖಾತೆಗಳಿಗೂ ಕೂಡ ಆ ಖಾತೆಗಾರರ ನಂಬರ್ ಲಿಂಕ್ ಆಗೋದು ಅನಿವಾರ್ಯವಾಗಿದೆ. ಈಗಾಗಲೇ ಏಪ್ರಿಲ್ 1ರ ಒಳಗೆ ಖಾತೆಗೆ ನಂಬರ್ ಅನ್ನು ಲಿಂಕ್ ಮಾಡುವಂತೆ ಇಂಡಿಯಾ ಪೋಸ್ಟ್(India Post) ನಿಂದ ಅಧಿಕೃತವಾದ ಪ್ರಕಟಣೆ ಕೂಡ ಹೊರಬಂದಿದೆ. ಏಪ್ರಿಲ್ 1ರಿಂದ ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಯಾವುದೇ ಖಾತೆಯಿಂದ ಹಣದ ಟ್ರಾನ್ಸ್ಯಾಕ್ಷನ್ ಮಾಡಲು ನಂಬರ್ ಲಿಂಕ್ ಆಗಿರಲೇಬೇಕು ಎನ್ನುವುದು ಕಡ್ಡಾಯವಾಗಿದೆ. ಸುರಕ್ಷತೆಯ ದೃಷ್ಟಿಕೋನದಿಂದ ಇದು ಕಡ್ಡಾಯವಾಗಿದೆ.
ತಿಂಗಳ ಆದಾಯ ಸ್ಕೀಮ್ ನ ಡೆಪಾಸಿಟ್ ಹಣವನ್ನು ದ್ವಿಗುಣಗೊಳಿಸಲಾಗಿದೆ;
ಏಪ್ರಿಲ್ ಮೊದಲನೇ ತಾರೀಖಿನಿಂದ ಮಂತ್ಲಿ ಇನ್ಕಮ್ ಸ್ಕೀಮ್(MIS) ಡಿಪೋಸಿಟ್ ಲಿಮಿಟ್ ಜಾಸ್ತಿಯಾಗಿ 9 ಲಕ್ಷ ಆಗಲಿದೆ. ಮೊದಲಿಗೆ ಇದ್ದಂತಹ ನಿಯಮದ ಪ್ರಕಾರ ಸಿಂಗಲ್ ಅಕೌಂಟ್ ನಲ್ಲಿ ಕೇವಲ 4.5 ಲಕ್ಷ ಮಾತ್ರ ಡಿಪೋಸಿಟ್ ಮಾಡುವಂತಹ ಅವಕಾಶವಿತ್ತು. ಅದೇ ಜಾಯಿಂಟ್ ಅಕೌಂಟ್ ನಲ್ಲಿ 9 ಲಕ್ಷ ರೂಪಾಯಿ ಇಡುವಂತಹ ಅವಕಾಶವಿತ್ತು. 2023 -24 ಹಾರ್ದಿಕ ವರ್ಷದ ಪ್ರಕಾರ ಸಿಂಗಲ್ ಖಾತೆಯಲ್ಲಿ 9 ಲಕ್ಷ ಹಾಗೂ ಜಾಯಿಂಟ್ ಖಾತೆಯಲ್ಲಿ 15 ಲಕ್ಷ ರೂಪಾಯಿಗಳವರೆಗೆ ಹಣವನ್ನು ಡೆಪಾಸಿಟ್ ಮಾಡಬಹುದು ಹಾಗೂ ಇದರ ಮೇಲೆ 7.1% ಬಡ್ಡಿದರ ಸಿಗಲಿದೆ.
SCSS ನ ಡೆಪಾಸಿಟ್ ಹಣವೂ ಕೂಡ ಆಗಲಿದೆ ದ್ವಿಗುಣ;
ಹಿರಿಯ ನಾಗರಿಕರ ಉಳಿತಾಯ ಯೋಜನೆ(SCSS) ನ ಡಿಪೋಸಿಟ್ ಹಣದ ಮೊತ್ತವು ಕೂಡ ಹೆಚ್ಚಾಗಿದೆ. ಇಂದಿನ ಲಿಮಿಟ್ ಗಿಂತ ಹೆಚ್ಚಾಗಿ ಈಗ 30 ಲಕ್ಷ ಆಗಲಿದೆ. ಈಗ 15 ಲಕ್ಷ ಇರುವಂತಹ ಈ ಸ್ಕೀಮ್ ಈಗ ಏಪ್ರಿಲ್ ಮೊದಲನೇ ತಾರೀಖಿನ ನಂತರ 30 ಲಕ್ಷ ಆಗಲಿದೆ. ಇದರ ಕಂತು ತಿಂಗಳಿಗೆ ಒಂದು ಸಾವಿರ ರೂಪಾಯಿ ಇಂದ ಪ್ರಾರಂಭವಾಗುತ್ತದೆ ಹಾಗೂ ಇದನ್ನು ಸ್ವಂತ ತಮ್ಮ ಹೆಸರಿಗೆ ಅಥವಾ ತಮ್ಮ ಪತಿ ಅಥವಾ ಪತ್ನಿಯ ಹೆಸರಿನಲ್ಲಿ ಕೂಡ ತೆರೆಯಬಹುದಾಗಿದೆ. ವರ್ಷಕ್ಕೆ 8% ಬಡ್ಡಿದರ ಕೂಡ ಹೂಡಿಕೆ ಮೇಲೆ ಸಿಗುತ್ತದೆ.