Insurance: ದಿನಕ್ಕೆ 1 ರೂಪಾಯಿ ಕಟ್ಟಿದರೆ ಸಾಕು 10 ಲಕ್ಷ ವಿಮೆ ಪಡೆಯಿರಿ! ಮುಗಿಬಿದ್ದ ಜನ

Advertisement
ಜೀವನ ಹೇಗೆ ಸಾಗುತ್ತದೆ ಎಂಬುದನ್ನೂ ಎಂದಿಗೂ ಕೂಡ ನಿರೀಕ್ಷಿಸಲು ಸಾಧ್ಯವಿಲ್ಲ, ಯಾವಾಗ ಏನು ಬೇಕಾದ್ರೂ ಆಗಬಹುದು . ಅದಕ್ಕಾಗಿಯೇ ಇಂದಿನ ಜನಾಂಗ ತಮ್ಮ ಹಾಗೂ ತಮ್ಮ ಕುಟುಂಬದವರ ಆರ್ಥಿಕ ಭದ್ರತೆಗಾಗಿ ವಿಮೆ ಮಾಡಿಸುತ್ತಾರೆ, ವಿಮೆ (Insurance) ಮತ್ತು ಬ್ಯಾಂಕ್ ಠೇವಣಿಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚಾಗಿದೆ. ಜೀವ ವಿಮೆ, ಆರೋಗ್ಯ ವಿಮೆ, ಅಪಘಾತ ವಿಮೆ ತೆಗೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಇದಲ್ಲದೆ ಅಂಚೆ ಇಲಾಖೆಯು ಇತ್ತೀಚೆಗೆ ಅಪಘಾತ ವಿಮಾ ಯೋಜನೆಯನ್ನೂ ಪರಿಚಯಿಸಲಾಗಿದೆ.
ಹೌದು, ಅಂಚೆ ಇಲಾಖೆಯು ತನ್ನ ಗ್ರಾಹಕರಿಗೆ ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಹೆಸರಿನಲ್ಲಿ ಅಪಘಾತ ವಿಮೆಯನ್ನ ಪರಿಚಯಿಸಿದೆ. ಈ ಯೋಜನೆಯನ್ನ ತೆಗೆದುಕೊಳ್ಳುವವರು ವರ್ಷಕ್ಕೆ ಕೇವಲ 399 ರೂಪಾಯಿಗಳನ್ನ ಪಾವತಿಸಿ 10 ಲಕ್ಷ ರೂಪಾಯಿಗಳ ಅಪಘಾತ ವಿಮೆ ಸೌಲಭ್ಯವನ್ನು ಪಡೆಯಬಹುದು. ಅಂದರೆ ದಿನಕ್ಕೆ ಒಂದು ರೂಪಾಯಿಗಿಂತ ಸ್ವಲ್ಪ ಹೆಚ್ಚು ವೆಚ್ಚದಲ್ಲಿ ಭಾರೀ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಬಹುದು.
ಈ ವಿಮೆಗೆ ಯಾರು ಅರ್ಜಿ ಹಾಕಬಹುದು:
18 ರಿಂದ 65 ವರ್ಷದೊಳಗಿನ ಯಾರಾದರೂ ಈ ಅಪಘಾತ ವಿಮೆ (Insurance) ಯನ್ನ ತೆಗೆದುಕೊಳ್ಳಬಹುದು. ಪ್ರೀಮಿಯಂನ್ನ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಮಾತ್ರ ಪಾವತಿಸಬೇಕು.
ಈ ವಿಮೆ (Insurance) ಯನ್ನ ತೆಗೆದುಕೊಳ್ಳಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿರಬೇಕು, ಅಪಘಾತದ ಸಾವು, ಶಾಶ್ವತ ಅಂಗವೈಕಲ್ಯ, ಯಾವುದೇ ಕೈಕಾಲು ಕಳೆದುಕೊಂಡರೆ ಅಥವಾ ಪಾರ್ಶ್ವವಾಯು ಉಂಟಾದರೆ ಅಂಚೆ ಇಲಾಖೆ ವಿಮಾದಾರರಿಗೆ 10 ಲಕ್ಷ ರೂಪಾಯಿ. ಪಾಲಿಸಿದಾರ ಯಾವುದೇ ಅಪಘಾತ ಮತ್ತು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಐಪಿಡಿ ಅಡಿಯಲ್ಲಿ 60 ಸಾವಿರ ರೂಪಾಯಿ ಅಥವಾ ಕ್ಲೈಮ್ ಮಾಡಿದ ಮೊತ್ತ ಯಾವುದು ಕಡಿಮೆಯೋ ಅದನ್ನ ಪಾವತಿಸಲಾಗುತ್ತದೆ. ಹೊರರೋಗಿಗಳಾಗಿದ್ದರೆ, 30 ಸಾವಿರ ರೂಪಾಯಿ ಅಥವಾ ಕ್ಲೈಮ್ ಮಾಡಿದ ಮೊತ್ತ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುವುದು.
ಇದೇ ಯೋಜನೆಯನ್ನ ಅಂಚೆ ಇಲಾಖೆಯು 299 ರೂಪಾಯಿ. ನೀವು ಈ ಆಯ್ಕೆಯನ್ನು ಆರಿಸಿಕೊಂಡರೆ, ನೀವು ವಾರ್ಷಿಕ 299 ರೂಪಾಯಿ ವೆಚ್ಚದಲ್ಲಿ 10 ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನ ಪಡೆಯುತ್ತೀರಿ. ರಸ್ತೆ ಅಪಘಾತದ ಸಾವು, ಅಂಗವೈಕಲ್ಯ, ಪಾರ್ಶ್ವವಾಯು ಮತ್ತು ವೈದ್ಯಕೀಯ ವೆಚ್ಚಗಳನ್ನು ಈ ಆಯ್ಕೆಯ ಅಡಿಯಲ್ಲಿ ಒಳಗೊಂಡಿದೆ. ಆದರೆ ರೂ 399 ಅಪಘಾತ ವಿಮೆಯಿಂದ ಒದಗಿಸಲಾದ ಹೆಚ್ಚುವರಿ ಪ್ರಯೋಜನಗಳು ಇದರಲ್ಲಿ ಸಿಗುವುದಿಲ್ಲ.