Karnataka Times
Trending Stories, Viral News, Gossips & Everything in Kannada

Cholesterol: ಯಾವ ಆಹಾರದಲ್ಲಿ ಒಳ್ಳೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ? ಇಲ್ಲಿದೆ ಮಾಹಿತಿ

Advertisement

ಕೊಲೆಸ್ಟ್ರಾಲ್ ಎನ್ನುವುದು ಪಿತ್ತಕೋಶದಲ್ಲಿ ಉತ್ಪತ್ತಿಯಾಗುವಂಥ ಮೇಣದಂಥ ಪದರ ಎನ್ನಬಹುದು, ಕೆಲವು ಆಹಾರಗಳಲ್ಲಿಯೂ ಈ ಪದರ ಬರುತ್ತದೆ. ಜೀವಕೋಶಗಳನ್ನು ರಚಿಸಲು ನಿಮ್ಮ ದೇಹಕ್ಕೆ ಕೊಂಚ ಮಟ್ಟಿಗಿನ ಕೊಲೆಸ್ಟ್ರಾಲ್ ಅಗತ್ಯವಿರುತ್ತದೆ, ಆದರೆ ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಕೊಲೆಸ್ಟ್ರಾಲ್ ಸಂಗ್ರಹವಾದರೆ ನಿಮ್ಮ ದೇಹಕ್ಕೆ ಸಮಸ್ಯೆ ಆಗುತ್ತದೆ ಆದ್ದರಿಂದ ನಿಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟಗಳು ಸಮತೋಲದಲ್ಲಿ ಇವೆಯೇ ಎಂದು ಪರಿಶೀಲಿಸುವುದು ಕೂಡ ಅಗತ್ಯ, ಆರೋಗ್ಯ ಕಪಾಡಿಕೊಳ್ಳುವ ನಿಟ್ಟಿನಲ್ಲಿ ಕೊಲೆಸ್ಟರಾಲ್‌ ಪರೀಕ್ಷೆ ಮಾಡಿಸುವುದು ಬಹಳ ಮುಖ್ಯ.

ಕೊಲೆಸ್ಟ್ರಾಲ್ ವಿಧಗಳು:

ಕೊಲೆಸ್ಟ್ರಾಲ್‌ನಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. LDL, HDL ಮತ್ತು VLDL. ದೇಹದಲ್ಲಿ (Body) ಅಧಿಕ ಕೊಲೆಸ್ಟ್ರಾಲ್ (High Cholesterol) ಮಟ್ಟವು ವಿವಿಧ ಕಾಯಿಲೆಗಳಿಗೆ (Different Disease) ಕಾರಣ ಎನ್ನಬಹುದು, ಕಡಿಮೆ ಸಾಂದ್ರತೆಯ ಲಿಪೊ ಪ್ರೊಟಿನ್ ಕೆಟ್ಟ ಕೊಲೆಸ್ಟ್ರಾಲ್ ಆಗಿದ್ದು ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಇದರಿಂದಾಗಿ ನೀವು ಹೆಚ್ಚಿನ ಜಾಗರೂಕತೆ ವಹಿಸಬೇಕು, ಅತಿ ಕಡಿಮೆ ಸಾಂದ್ರತೆಯ ಲಿಪೊಪ್ರೊಟಿನ್ ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್ ಆಗಿದೆ. ಇವು ದೇಹದ ತೂಕ ಹಾಗೂ ದೇಹದ ರಚನೆಯಲ್ಲಿ ವ್ಯತ್ಯಾಸ ಕಂಡು ಬರುವಂತೆ ಮಾಡುತ್ತದೆ. ಹೆಚ್ಚಿನ ಸಾಂದ್ರತೆಯ ಲಿಪೊಪ್ರೊಟಿನ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತವೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಪರಿಹಾರ:

ಜೀವನ ಶೈಲಿಯ ಬದಲಾವಣೆ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಸೇವಿಸುವ ಮೂಲಕ ಆರೋಗ್ಯದ ಅಪಾಯವನ್ನು ತಪ್ಪಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು, ನಿಯಮಿತ ವ್ಯಾಯಾಮ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು, ದಿನನಿತ್ಯವು ಸಂಸ್ಕರಿಸಿದ, ಪ್ಯಾಕೇಜ್ ಮಾಡಿದ, ಆಹಾರವನ್ನು ತಿನ್ನಬಾರದು , ಹಸಿ ತರಕಾರಿ ಹಣ್ಣುಗಳನ್ನು ಸೇವನೆ ಮಾಡಬೇಕು , ‌ ಆಹಾರವು ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ ಹಾಗಾಗಿ ನೀವು ಸೇವಿಸುವ ಆಹಾರದಲ್ಲಿ ಕ್ರಮ ವಹಿಸಿ.

Leave A Reply

Your email address will not be published.