Dairy Farming: ಹೈನುಗಾರರಿಗೆ ಬಂಪರ್ ಗಿಫ್ಟ್ ಯೋಜನೆ,ಇಲ್ಲಿದೆ ಮಾಹಿತಿ

Advertisement
ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡುತ್ತಲೇ ಇದ್ದು , ಈ ಬಾರಿ ಕೋಲಾರ ಹಾಲು ಒಕ್ಕೂಟ (Kolara Milk Federation) ರೈತರಿಗೆ ಬಂಪರ್ ಗಿಫ್ಟ್ ನೀಡುತ್ತಿದೆ. ಈ ಮೂಲಕ ಈ ಒಕ್ಕೂಟದ ಅಡಿಯಲ್ಲಿ ಬರುವ ರೈತರಿಗಂತೂ ಸಿಹಿ ಸುದ್ದಿ ಸಿಕ್ಕಂತಾಗಿದೆ.
ರೈತಪರ ಯೋಜನೆ:
ಇಂದು ಹೊಟೇಲ್ ಉದ್ಯಮ, ಬೇಕರಿ, ತಿಂಡಿ ಖಾದ್ಯ , ಗೃಹ ಆಹಾರ ಪದಾರ್ಥಕ್ಕೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಹಾಲು ಒಂದು ಅಗತ್ಯ ಆಹಾರವೆನಿಸಿದೆ. ಅಷ್ಟು ಮಾತ್ರವಲ್ಲದೇ ಸರಕಾರದ ಒಂದು ಪ್ರಬಲ ಆದಾಯದ ಮೂಲ ಕೆಎಂಎಫ್ ಪ್ರಮುಖ ಸಂಸ್ಥೆ, ಈ ಸಂಸ್ಥೆ ಹಾಲಿನ ಉತ್ಪನ್ನ ಮತ್ತು ಮಾರಾಟದಲ್ಲೇ ರೈತ ಸುಧಾರಣಾ ಕ್ರಮವನ್ನು ಜಾರಿಗೆ ತರಲು ಆಗಾಗ ಪ್ರಯತ್ನ ಪಡುತ್ತಲೇ ಇರುತ್ತದೆ. ಈಗ ಕೋಲಾರ ಒಕ್ಕೂಟ ಕೂಡ ಇಂತಹದ್ದೆ ರೈತ ಪರ ಯೋಜನೆ ಕೈಗೊಂಡಿದೆ.
Advertisement
ಹಾಲಿನ ದರ ಹೆಚ್ಚಳ ಸಾಧ್ಯತೆ:
ಹಾಲಿನ ಉತ್ಪನ್ನ ಹಾಗೂ ಬಳಸುವವರ ಪ್ರಮಾಣ ಹೆಚ್ಚಾದಂತೆ ರೈತರಿಂದ ದರ ಏರಿಸಲು ಮನವಿಗಳು ಬರುತ್ತಲೇ ಇದೆ, ಹಾಗಾಗಿ ಕೋಲಾರ ಹಾಲು ಒಕ್ಕೂಟದಿಂದ ಲೀಟರ್ ಗೆ ಹಾಲಿನ ದರವನ್ನು 2 ರೂಪಾಯಿ 10 ಪೈಸೆ ಹೆಚ್ಚಳ ಮಾಡಿದೆ. ಈ ಮೂಲಕ 33ರೂ.90 ಪೈಸೆ ದರ ನಿಗದಿ ಮಾಡಲಾಗಿದೆ. ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದು ಮಾರ್ಚ್ 16ರಿಂದ ಹಾಲು ಉತ್ಪಾದಕರಿಗೆ ಈ ಪರಿಷ್ಕರಣೆ ದರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಕೆಎಂಎಫ್ ದರ ಹೆಚ್ಚಳ:
ಅದೇ ರೀತಿ ಕೆಎಂಎಫ್ ( KMF ) ಕೂಡ ಫೆಬ್ರವರಿ ತಿಂಗಳಲ್ಲಿ ರೈತರ ಅನುಕೂಲಕ್ಕಾಗಿ ಹಳೆ ದರಕ್ಕಿಂತ ಹಾಲಿನ ಲೀಟರ್ ದರವನ್ನು ಏರಿಕೆ ಮಾಡಿತ್ತು. ನೀಲಿ ಪ್ಯಾಕೆಟ್ ಬೆಲೆ 37 ರೂ, ಹಸಿರು ಪ್ಯಾಕೆಟ್ 42 ರೂ, ಸ್ಪೇಷಲ್ ಪ್ಯಾಕೆಟ್ 43 ರೂ, ಶುಭಂ ಪ್ಯಾಕೆಟ್ 43 ರೂ, ಎಂದು ಏರಿಕೆ ಮಾಡಿ ಅದರಲ್ಲಿ 2 ರೂ. ಏರಿಕೆಯಿಂದ ಬರುವ ಹಣದಲ್ಲಿ ಒಂದು ರೂಪಾಯಿ ರೈತರಿಗೆ ಉಳಿದ ಒಂದು ರೂಪಾಯಿ ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಿ, ಒಂದು ರೂಪಾಯಿಯಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್ ಗಳಿಗೆ ಕಮಿಷನ್ ನೀಡಿ, ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ (Secretory)ಕಮಿಷನ್ ನೀಡಲು ಕೆಎಂಎಫ್ ನಿರ್ಧಾರ ಮಾಡಿತ್ತು, ಈಗ ಕೋಲಾರ ಒಕ್ಕೂಟದ ಈ ನಿರ್ಣಯ ಬೇರೆ ಒಕ್ಕೂಟಕ್ಕೂ ಬಿಸಿ ತಟ್ಟಿದೆ. ಮುಂದೆ KMF ಕೂಡ ಬೇರೆ ನಿರ್ಣಯ ಕೈಗೊಳ್ಳಬಹುದೇ ಎಂದು ಕಾಯಬೇಕಿದೆ.
Advertisement