ಆ್ಯಪಲ್ ಐಫೋನ್ 16 ಸೀರೀಸ್ ಸೆಪ್ಟಂಬರ್ 09 ರ ಸೋಮವಾರದಂದು ಬಿಡುಗಡೆಯಾಗಿದ್ದು, ತನ್ನ ಉತ್ಕೃಷ್ಠ ಬ್ರಾಂಡ್ ಮೌಲ್ಯ ಹಾಗೂ ವಿನೂತನ ಫೀಚರ್‌ಗಳಿಂದಾಗಿ (iPhone 16 Features) ಮೊಬೈಲ್ ಬಳಕೆದಾರರ ಗಮನವನ್ನು ತನ್ನತ್ತ ಸೆಳೆದಿದೆ. ಆ್ಯಪಲ್ ಸಂಸ್ಥೆ ಕಳೆದ ವರ್ಷದ ಸೆಪ್ಟಂಬರ್ 22 ರಂದು ಈ ಹಿಂದಿನ 15 ಸೀರಿಸ್ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ, ಒಂದು ವರ್ಷದ ನಂತರ ಐಫೋನ್ 16 ಸೀರಿಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಐಫೋನ್ 16, 16 ಪ್ಲಸ್, 16 ಪ್ರೋ ಹಾಗೂ 16 ಪ್ರೋ ಮ್ಯಾಕ್ಸ್ ಎನ್ನುವ 4 ಬಗೆಯ ಫೋನ್ ಗಳನ್ನು ಬಿಡುಗಡೆ ಮಾಡಲಾಗಿದೆ.
ಆ್ಯಪಲ್ ಸಂಸ್ಥೆ ತನ್ನ ನೂತನ ಸೀರಿಸ್‌ನ ಬೆಲೆ ಹಾಗೂ ವೈಶಿಷ್ಟ್ಯತೆಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಸೆಪ್ಟೆಂಬರ್ 13ರ ಸಂಜೆ 5.30ರ ರಿಂದಲೇ ಪ್ರೀ ಆರ್ಡರ್ ಮಾಡಲು ಅವಕಾಶ ನೀಡಲಾಗಿದ್ದು, ಮೊದಲ (First Sale) ಮಾರಾಟ ಸೆಪ್ಟೆಂಬರ್ 20 ರಿಂದ ಆರಂಭಗೊಳ್ಳಲಿದೆ. ಈ ಮೊಬೈಲ್‌ಗಳು ಶೀಘ್ರವೇ ಫ್ಲಿಪ್‌ಕಾರ್ಟ್, ಅಮೆಜಾನ್, ಆ್ಯಪಲ್ ಇ-ಕಾಮರ್ಸ್ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆ್ಯಪಲ್ ಐಫೋನ್ 16 ವಿಧದ ಮೊಬೈಲ್ ಗಳಿಗೆ 67,000 ರೂ. ನಿಗದಿಯಾಗಿದ್ದಾರೆ, ಆ್ಯಪಲ್ ಐಫೋನ್ 16 ಫ್ರೋ ಮ್ಯಾಕ್ಸ್ ಬೆಲೆ 1,44,900 ರೂ.ಗಳಷ್ಟು ನಿಗದಿಯಾಗಿದೆ. ಇನ್ನು, ಭಾರತದಲ್ಲಿ ಈ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
iPhone 16 Series ನ ಭಾರತದಲ್ಲಿನ ಬೆಲೆ ಹೀಗಿದೆ!
- ಐಫೋನ್ 16 – 79,900 ರೂ.ಗಳು
- ಐಫೋನ್ 16 ಫ್ಲಸ್ – 89,900 ರೂ.ಗಳು
- ಐಫೋನ್ 16 ಪ್ರೋ (128 ಜಿಬಿ) – 1,19,900 ರೂ.ಗಳು
- ಐಫೋನ್ 16 ಪ್ರೋ ಮ್ಯಾಕ್ಸ್ (256 ಜಿಬಿ) – 1,44,900 ರೂ.ಗಳು
ಐಫೋನ್ 16 ಕಂಪ್ಲೀಟ್ Features ವಿವರ ಇಲ್ಲಿದೆ!
ಈ ಹಿಂದಿನ ಸೀರಿಸ್‌ಗಳಿಗಿಂತ ಐಫೋನ್ 16 ವಿಶಿಷ್ಟ ಅಪ್‌ಡೇಟ್‌ಗಳನ್ನು (iPhone 16 Features) ಪಡೆದುಕೊಂಡಿದೆ. ಎರಡನೇ ಜನರೇಶನ್‌ನ 3nm ತಂತ್ರಜ್ಞಾನದ ಆ್ಯಪಲ್ ಎ18 ಚಿಪ್‌ಸೆಟ್ ಅನ್ನು ಈ ಮೊಬೈಲ್‌ಗಳಲ್ಲಿ ಬಳಕೆ ಮಾಡಲಾಗಿದೆ. ಈ ಹಿಂದಿನ ಸೀರಿಸ್‌ಗಳಿಗಿಂತ ಐಫೋನ್ 16 ಶೇಕಡಾ 30 ರಷ್ಟು ವೇಗದ ಕಾರ್ಯಕ್ಷಮತೆ ಹೊಂದಿದೆ
ಐಫೋನ್ 16 ಮತ್ತು 16 ಪ್ಲಸ್ ಮೊಬೈಲ್ಗಳು ಏರೋಸ್ಪೇಸ್ ಗ್ರೇಡ್ ಅಲ್ಯೂಮಿನಿಯಂ ನೊಂದಿಗೆ ತಯಾರಿಸಲಾಗುತ್ತಿದ್ದು, ಅಲ್ಟ್ರಾಮರೀನ್, ಟೀಲ್, ಗುಲಾಬಿ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದರೆ, ಐಫೋನ್ 16 ಪ್ಲಸ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಬಿಸಿಲಿನ ವಾತಾವರಣದಲ್ಲಿ 2000 ನಿಟ್ಸ್ ಹಾಗೂ ಕತ್ತಲಿನ ವಾತಾವರಣದಲ್ಲಿ ಕೇವಲ 1 nit ವರೆಗೂ ಡಿಸ್ಪ್ಲೇ ಮಂದವಾಗುತ್ತದೆ.
ಈ ಮೊಬೈಲ್‌ನಲ್ಲಿ ಆ್ಯಪಲ್ ಆಕ್ಷನ್ ಬಟನ್ ಅನ್ನು ಕೆಲವು ಪ್ರಮಾಣಿತ ಮಾದರಿಗಳಿಗೆ ಪರಿಚಯಿಸಿರುವುದು ವಿಶೇಷವಾಗಿದೆ. ಅಲ್ಲದೇ, ಕ್ಯಾಮೆರಾ ಕಂಟ್ರೋಲ್ ಬಟನ್ ಅನ್ನೂ ಒದಗಿಸಲಾಗಿದೆ. ಈ ಬಟನ್ ಮೊಬೈಲ್ ನ ಬಲಭಾಗದಲ್ಲಿ ಇರಲಿದೆ. ಈ ಸ್ವಿಚ್ ಬಳಸಿ ನೀವು ಕ್ಯಾಮೆರಾವನ್ನು ಜೂಮ್ ಔಟ್, ಜೂಮ್ ಇನ್ ಮಾಡಲು ಹಾಗೂ ಸಿಂಗಲ್ ಕ್ಲಿಕ್ ಒಪನ್ ಕ್ಯಾಮೆರಾ ಹಾಗೂ 2ನೇ ಕ್ಲಿಕ್‌ನಲ್ಲಿ ಫೋಟೋ ತೆಗೆಯಲು ಸಾಧ್ಯವಾಗಲಿದೆ.
iPhone 16 Series ಮೊಬೈಲ್‌ನ ಕ್ಯಾಮೆರಾ ವಿಶೇಷತೆಗಳು :
ಐಫೋನ್ 16 ಈಗ 48 ಮೆಗಾಪಿಕ್ಸೆಲ್ ಪ್ಲಸ್ 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರಲಿದೆ. ನೀವು ಈ ಕ್ಯಾಮೆರಾದ ಮೂಲಕ 4K ವೀಡಿಯೊವನ್ನು ಶೂಟ್ ಮಾಡಬಹುದು.
ಆ್ಯಪಲ್ ಐಫೋನ್ ಭಾರತದಲ್ಲಿ ಈಗಾಗಲೇ ತನ್ನ ಬೃಹತ್ ಮಾರುಕಟ್ಟೆಯನ್ನು ಹೊಂದಿದೆ. ಗ್ರಾಹಕರೂ ಸಹಿತ 16 ಸೀರಿಸ್ ಬಿಡುಗಡೆಗಾಗಿ ಕಾದು ಕುಳಿತಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀರಿಸ್ ಮೊಬೈಲ್ ಭಾರತಕ್ಕೆ ದಾಂಗುಡಿ ಇಡಲಿದ್ದು, ಯಾವ ಪ್ರಮಾಣದಲ್ಲಿ ಮಾರಾಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.