Karnataka Times
Trending Stories, Viral News, Gossips & Everything in Kannada

Gold: ಇಂದಿನಿಂದ ಬಂಗಾರ ಖರೀದಿಸುವವರಿಗೆ ಮಹತ್ವದ ಸೂಚನೆ ಕೊಟ್ಟ ಕೇಂದ್ರ

Advertisement

ಚಿನ್ನ (Gold) ಖರೀದಿ ಮಾಡುವವರ ಸಂಖ್ಯೆ ಹೆಚ್ಚಾದಂತೆ ಮಾರಾಟಗಾರರು ಅಡ್ಡದಾರಿ ಹಿಡಿದು ಅಪ್ಪಟ ಚಿನ್ನ ಎಂದು ಹೇಳಿ ಲೋಹ ಮಿಶ್ರಿತ ಚಿನ್ನ ಮಾರಾಟಮಾಡುತ್ತಿದ್ದಾರೆ ಎಂಬ ಆಪಾದನೆಗಳ ಬಗ್ಗೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ , ಸರಕಾರ ಈ ನಕಲಿ ಯನ್ನು ತಡೆಯಲು ಅಸಲಿಗೆ ಹೆಗ್ಗುರುತಾಗಿರುವ ಹಾಲ್ ಮಾರ್ಕ್ ಇರುವ ಚಿನ್ನಕ್ಕೆ ಪ್ರಾತಿನಿಧ್ಯತೆ ದೊರಕಿಸಲು ಮುಂದಾಗಿದೆ. ಹಾಗಾಗಿ ಎಪ್ರಿಲ್ 1ರ (April1) ನಂತರದ ದಿನದಲ್ಲಿ ಚಿನ್ನ ಮಾರಾಟ ಮಾಡುವವರು ಚಿನ್ನದ ಮೇಲೆ ಹಾಲ್ ಮಾರ್ಕ್ ಹೊಂದಿರಲೇ ಬೇಕು ಎಂದು ನಿಯಮ ಜಾರಿಗೆ ತರಿಸಿದೆ.

ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದೇನು?

ಈ ಬಗ್ಗೆ ಮಾತಾಡಿದ್ದ ಬಿಐಎಸ್ ಮುಖ್ಯಸ್ಥ ಪ್ರಮೋದ್ ಕುಮಾರ್ ತಿವಾರಿ (Pramod Kumar Tiwari) ಅವರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮೂಲಕ ಇದೊಂದು ಸುಧಾರಿತ ಕ್ರಮ ಈ ಮೂಲಕ ನಕಲಿ ಚಿನ್ನದ ವ್ಯವಹಾರ ಮಟ್ಟಹಾಕಿ ಅಸಲಿ ವ್ಯವಹಾರ ಸಾಗುತ್ತದೆ. ಅಷ್ಟು ಮಾತ್ರವಲ್ಲದೆ ಆಡಳಿತ ವ್ಯವಸ್ಥೆಯಲ್ಲಿಯೇ ಏಕರೂಪತೆಯನ್ನು ಜಾರಿ ಗೊಳಿಸಬಹುದು. ಈ ಮೂಲಕ ರಾಷ್ಟ್ರೀಯ ಮಾನದಂಡಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮನಾಗಲು ಸಹ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಈ ಆರು ಅಂಕಿಯ ಹಾಲ್ ಮಾರ್ಕ್ (Hall Mark) ಹಳೆಯ ವ್ಯವಸ್ಥೆಯೆ ಆಗಿದ್ದು ಈಗಾಗಲೇ ಎರಡು ವರ್ಷದವರೆಗೆ ಈ ವ್ಯವಸ್ಥೆ ಜಾರಿಗೆ ತರಲು ಕಾಲಾವಕಾಶ ನೀಡಿದ್ದವು. ಎಪ್ರಿಲ್ 1 ಕೊನೆಯ ದಿನವಾಗಿ ನೀಡಲಾಗಿತ್ತು, ಅದೇ ರೀತಿ ಚಿನ್ನದ ತಯಾರಕರ ಸಲಹೆಯಂತೆ ಚಿನ್ನದ ಹಾಗೂ ಅವುಗಳ ವಿನ್ಯಾಸದ ಮೇಲೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ

ನಕಲಿ ಚಿನ್ನ ತಡೆಗಟ್ಟಲು ಸೂಕ್ತ ಪರಿಹಾರ:

ಈ ಮೂಲಕ ನಕಲಿ ಚಿನ್ನದ ವ್ಯಾಪಾರ ವ್ಯವಹಾರವನ್ನು ತಡೆಯಲು ಇದೊಂದು ಮಹತ್ತರ ನಿರ್ಣಯ ಎಂದರೂ ತಪ್ಪಾಗಲಾರದು. ಅದೇ ರೀತಿ ಚಿನ್ನವನ್ನು ಪರೀಕ್ಷೆ ಮಾಡಲು ದೇಶದಲ್ಲಿ 1400ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಿದ್ದು ಅವುಗಳು ಸಹ ನಕಲಿ ಜಾಲ ಪತ್ತೆ ಹಚ್ಚಲು ನಮಗೆ ನೆರವಾಗಲಿದೆ. ಈ ಮೂಲಕ ಆರು ಅಂಕಿಗಳನ್ನು ಹೊಂದಿರುವ ಎಚ್ಯುಐಡಿ ಹಾಲ್ ಮಾರ್ಕ್ ಲೇಸರ್ (Hall Mark Laser) ತಂತ್ರಾಶದಿಂದ ಮಾಡಲಾಗಿದ್ದು ಗ್ರಾಹಕರ ಬಳಿ ಈಗಾಗಲೇ ಹಾಲ್ ಮಾರ್ಕ್ ಹೊಂದಿರದ ಚಿನ್ನವಿದ್ದರೆ ಅದನ್ನು ವಾಪಾಸ್ಸು ಪಡೆಯುವಾಗ ರೂಲ್ಸ್ ನೋಡದೆ ತೂಕ ಹಾಗೂ ಶುದ್ಧತೆ ಮಾತ್ರ ಪರಿಶೀಲನೆ ಮಾಡಲಾಗುತ್ತದೆ. ಅದೇ ರೀತಿ ಗ್ರಾಹಕರ ಬಳಿ‌ ಹಾಲ್ ಮಾರ್ಕ್ ಇಲ್ಲದ ಚಿನ್ನ ಅಥವಾ ಇದ್ದ ಚಿನ್ನಕ್ಕೆ ಹಾಲ್ ಮಾರ್ಕ್ ಟ್ರೇಡ್ ಹಾಕುವ ನೂತನ ವ್ಯವಸ್ಥೆ ಬರ ಬಹುದೆಂಬ ಅಭಿಪ್ರಾಯ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

Leave A Reply

Your email address will not be published.