Karnataka Times
Trending Stories, Viral News, Gossips & Everything in Kannada

Government New Updates: 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದ ಸಿಹಿಸುದ್ದಿ

Advertisement

ಸದ್ಯ ಇದೀಗ ಕೇಂದ್ರ ಸರ್ಕಾರ (Central Govt)ಹಿರಿಯ ನಾಗರಿಕರ ಠೇವಣಿಗಳಿಗೆ(Senior Citizens Deposit)ಮತ್ತಷ್ಟು ಪ್ರೋತ್ಸಾಹ ನೀಡಲು ಈಗಾಗಲೇ ನಿರ್ಧರಿಸಿದೆ. ಹೌದು ಇಲ್ಲಿಯ ತನಕ ಕೂಡ ಉಳಿತಾಯ ಖಾತೆಗಳಿಗೆ (Saving Account) ಇದ್ದಂತಹ ಗರಿಷ್ಠ ಠೇವಣಿ ಮಿತಿಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲಾಗಿದ್ದು ಇದರ ಜೊತೆಗೆ ಅವರಿಗೆ ನೀಡಲಾಗುತ್ತಿದ್ದ ಬಡ್ಡಿ (Intrest) ದರಗಳನ್ನು ಕೂಡ ಇದ್ದಕಿದ್ದಂತೆ ಹೆಚ್ಚಿಸಲಾಗಿದೆ.

ಗರಿಷ್ಠ ಠೇವಣಿ ಮಿತಿಯ ಹೆಚ್ಚಳ ಎಷ್ಟು?

ಇಲ್ಲಿಯ ವರೆಗೂ ಕೂಡ ಹಿರಿಯ ನಾಗರಿಕರು ತಮ್ಮ ಉಳಿತಾಯ ಖಾತೆಗಳಲ್ಲಿ ಗರಿಷ್ಠ ಅಂದರೆ 15 ಲಕ್ಷಗಳನ್ನು ಇಡಲು ಮಾತ್ರ ಅವಕಾಶವಿತ್ತು. ಆದರೆ ಇದೀ ಮಿತಿಯನ್ನು ಹೆಚ್ಚಿಸಲಾಗಿದ್ದು ಇನ್ನು 30 ಲಕ್ಷ ರೂ.ಗಳವರೆಗೆ ಹಿರಿಯ ನಾಗರಿಕರು ತಮ್ಮ ಖಾತೆಯಲ್ಲಿ
ಠೇವಣಿ ಇಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.

ಬಡ್ಡಿ ದರ ಎಷ್ಟು ಹೆಚ್ಚಳವಾಗಿದೆ?

ಸದ್ಯ ಹಿರಿಯ ನಾಗರಿಕರ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಸುಮಾರು 20 ಅಂಶಗಳನ್ನು ಏರಿಸಲು ನಿರ್ಧರಿಸಲಾಗಿದ್ದು ಇದರಿಂದಾಗಿ ಹಿರಿಯ ನಾಗರಿಕರ ಉಳಿತಾಯ ಖಾತೆಗಳ ಮೇಲಿನ ವಾರ್ಷಿಕ ಬಡ್ಡಿ ದರ ಕೂಡ ಶೇ. 7.4ರಿಂದ ಶೇ. 7.6ರವರೆಗೆ ಹೆಚ್ಚಾಗಲಿದೆ.

ಇನ್ನು ಮಾಸಿಕ ಆದಾಯ ಮಾದರಿಯ ಠೇವಣಿಗಳ ಗರಿಷ್ಠ ಮಿತಿ ಹೆಚ್ಚಳ ..

ಇನ್ನು ಸಾರ್ವಜನಿಕರಿಗೆ ಮತ್ತೊಂದು ಕೊಡುಗೆಯನ್ನು ನೀಡಿರುವ ಕೇಂದ್ರ ಸರ್ಕಾರವೂ ಮಾಸಿಕ ಆದಾಯ ಮಾದರಿಯ ಠೇವಣಿಗಳ ಗರಿಷ್ಠ ಮಿತಿಯನ್ನು ಇದೀಗ ದುಪ್ಪಟ್ಟುಗೊಳಿಸಲಾಗಿದೆ ಎನ್ನಬಹುದು. ಇನ್ನು ಈವರಗೆ ಇದರ ಮಿತಿ ಸುಮಾರು 4.5 ಲಕ್ಷ ರೂ.ಇತ್ತು. ಆದರೆ ಈಗ ಅದನ್ನು 9 ಲಕ್ಷ ರೂ.ಗಳಿಗೆ ಏರಿಸಲಾಗಿದೆ…

ಯಾವಗಿಂದ ಅನ್ವಯಿಸುತ್ತದೆ?

ಇನ್ನು ಹೆಚ್ಚಿದ ಮಿತಿಯು ಏಪ್ರಿಲ್ 1 2023 ರಿಂದ ಅನ್ವಯವಾಗುತ್ತದೆ. ಹೌದಯ ಇದರರ್ಥ ಏಪ್ರಿಲ್ 1, 2023 ರಂದು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಗರಿಷ್ಠ ರೂ.30 ಲಕ್ಷವನ್ನ ಹೂಡಿಕೆ ಮಾಡಬಹುದು. ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ವೃದ್ಧರಿಗೆ ಹೆಚ್ಚಿನ ಅನುಕೂಲವಾಗಲಿದ್ದು ನಿವೃತ್ತಿಯ ಸಮಯದಲ್ಲಿ ನೀವು ಪಡೆಯುವ ಹಣವನ್ನ ಪ್ರತಿ ತಿಂಗಳು ನೀವು ಹೂಡಿಕೆ ಮಾಡುತ್ತೀರಿ.. ನಿಮಗೆ ಸ್ವಲ್ಪ ಪಿಂಚಣಿ ಪಡೆಯುವ ಅವಕಾಶ ಕೂಡ ಸಿಗುತ್ತದೆ.

Leave A Reply

Your email address will not be published.