Karnataka Times
Trending Stories, Viral News, Gossips & Everything in Kannada

Electoral Roll 2023: 2023 ರ ಮತದಾರ ಪಟ್ಟಿ ಯಲ್ಲಿ ನಿಮ್ಮ ಹೆಸರು ಇದೆಯೇ? ಮೊಬೈಲ್ ನಲ್ಲಿ ಚೆಕ್‌ ಮಾಡಿ

Advertisement

ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮ್ಮೆಲ್ಲರ ಹಕ್ಕು (Right) ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ. ಪ್ರಸ್ತುತ ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆಯ ತಯಾರಿ ಜೋರಾಗಿದೆ. ಮೇ ನಲ್ಲಿ ನಡೆಯ ಬೇಕಾಗಿರುವ ಚುನಾವಣೆಗಾಗಿ ರಾಜ್ಯವು ಸಜ್ಜಾಗುತ್ತಿದೆ ಎನ್ನಬಹುದು. ‌ಚುನಾವಣೆಗೆ ಈಗಾಗಲೇ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಪ್ರಕಟಿಸಿದೆ, ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಮತದಾನದ ದಿನಾಂಕ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಇದೇ ಮೊದಲ ಬಾರಿಗೆ 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡುವ ಅವಕಾಶ ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನೋಡಿ:

  • ನಿಮ್ಮ ಹೆಸರು ಮತದಾನ ಲಿಸ್ಟ್ ನಲ್ಲಿ ಇದೆಯೇ? ಎಂದು ನೋಡಲು ಮೊದಲಿಗೆ (Ceo) karnataka chief electoral officer karnataka ವೆಬ್ಸೈಟ್‌ ಮೇಲೆ ಕ್ಲಿಕ್‌ ಮಾಡಿ.
  • ನಿಮ್ಮ ಆಯ್ಕೆಯ ಭಾಷೆಯನ್ನು ನೀವೇ ಆಯ್ಕೆ ಮಾಡಿಕೊಳ್ಳಿ, ತದನಂತರ ಮತದಾನ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಯಲ್ಲಿ 2023 ರ ಅಂತಿಮ ಮತದಾರರ ಪಟ್ಟಿ ಆಪ್ಷನ್ ಸಿಗುತ್ತದೆ.
  • ಆ Option ಮೇಲೆ ಕ್ಲಿಕ್‌ ಮಾಡಿದಾಗ , ಜಿಲ್ಲೆಗಳ ವರದಿ ಕಾಣಿಸುತ್ತದೆ. ಜಿಲ್ಲೆಗಳ ಮೇಲೆ ಕ್ಲಿಕ್‌ ಮಾಡಿದಾಗ ವಿಧಾನ ಸಭಾ ಕ್ಷೇತ್ರಗಳ ಪಟ್ಟಿ ಕಾಣಿಸುತ್ತದೆ.
  • ನಿಮ್ಮ ವಿಧಾನ ಸಭಾ ಕ್ಷೇತ್ರ ಯಾವುದು ಅದರ ಮೇಲೆ ಕ್ಲಿಕ್‌ ಮಾಡಿ. ಆಗ ನಿಮಗೆ ಮತ ಚಲಾವಣೆಯ ಸ್ಥಳ ದೊರೆಯುತ್ತದೆ , ಅದರ ಮೇಲೆ ಕ್ಲಿಕ್‌ ಮಾಡಿ
  • ಮತಗಟ್ಟೆಯ ಸ್ಥಳ ದಲ್ಲಿ‌ MR ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ ನಂತರ Captcha code ಎಂಟ್ರಿ ಮಾಡಿದರೆ ನಿಮ್ಮ ಹೆಸರು ದೊರೆಯುತ್ತದೆ.

ರಾಷ್ಟ್ರೀಯ ಮತದಾರರ ಸೇವಾ ಪೊರ್ಟಲ್ ಮೂಲಕ ನೋಡಿ:

https://www.nvsp.in/ ವೆಬ್ ಗೆ ಭೇಟಿ ನೀಡಿ. ನಿಮ್ಮ ಕ್ಷೇತ್ರದ ವಿವರ ಸೇರಿ ವೈಯಕ್ತಿಕ ಮಾಹಿತಿ ಯನ್ನು ಎಂಟ್ರಿ ಮಾಡಿ, ನಂತರ ಮತದಾರರ ಫೋಟೋ ಗುರುತಿನ ಚೀಟಿ ಸಂಖ್ಯೆ ಹಾಕಿ ಕ್ಲಿಕ್ ಮಾಡಿ. ನಿಮ್ಮ ಹೆಸರು ವೋಟರ್ ಲಿಸ್ಟ್‌ನಲ್ಲಿ ಇದೆಯೋ, ಇಲ್ಲವೋ ಎನ್ನುವುದು ತಿಳಿಯುತ್ತದೆ.

Leave A Reply

Your email address will not be published.