Aadhaar Pan Link: 1000 ರೂ ಫೈನ್ ಕಟ್ಟಿದ ಮೇಲೂ ಪ್ಯಾನ್ ಕಾರ್ಡ್ ಆಧಾರ್ ಗೆ ಲಿಂಕ್ ಆಗದ ಹೋದರೆ ಕೂಡಲೇ ಈ ಕೆಲಸ ಮಾಡಿ.
2022 ರಿಂದಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಧಾರ್ ಕಾರ್ಡ್(Aadhar Card) ಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು ಎನ್ನುವ ಸರ್ಕಾರದ ಆದೇಶ ಹೊರಬಂದಿತ್ತು ಆದರೂ ಕೂಡ ಯಾರು ಲಿಂಕ್ ಮಾಡಿಸಿಕೊಂಡಿರಲಿಲ್ಲ. ಇನ್ನು ಈ ಬಾರಿ ಮೊದಲಿಗೆ ಮಾರ್ಚ್ 31 ರಂದು 1000 ರೂಪಾಯಿಗಳ ಪೆನಾಲ್ಟಿಯನ್ನು ಭರಿಸಿ ಪಾನ್ ಕಾರ್ಡ್ ಅನ್ನೋ ಲಿಂಕ್ ಮಾಡಿಸಿಕೊಳ್ಳಬೇಕು ಎನ್ನುವ ನಿಯಮವನ್ನು ಹೊರಡಿಸಿತು ಆದರೂ ಕೂಡ ಸಾಕಷ್ಟು ಜನರ ಲಿಂಕ್ ಕಾರ್ಯ ಇನ್ನೂ ಬಾಕಿ ಇದ್ದ ಕಾರಣದಿಂದಾಗಿ ಇದನ್ನು ಜೂನ್ 30ಕ್ಕೆ ಮುಂದೂಡಲಾಗಿದೆ. ಇದರ ನಡುವೆ ಸಾವಿರ ರೂಪಾಯಿ ಫೈನ್ (Fine) ಅನ್ನು ನೀಡಿದ ಮೇಲೂ ಕೂಡ ಒಂದು ವೇಳೆ ಲಿಂಕ್ (Link) ಆಗದಿದ್ದರೆ ಏನು ಮಾಡುವುದು ಎನ್ನುವ ಅನುಮಾನ ಎಲ್ಲಾ ಕಡೆ ಪ್ರಾರಂಭವಾಗಿದ್ದು ಅದಕ್ಕೆ ಉತ್ತರಿಸುತ್ತೇವೆ ಬನ್ನಿ.
ಕೆಲವೊಮ್ಮೆ ಸಾವಿರ ರೂಪಾಯಿ ಫೈನ್ ಅನ್ನು ಕಟ್ಟಿದ ಮೇಲೂ ಕೂಡ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇರುವಂತೆ ಕಾಣಿಸಬಹುದು ಆಗ ನೀವು ತಿಳಿದುಕೊಳ್ಳಬೇಕಾಗಿರುವ ವಿಚಾರ ಏನೆಂದರೆ ಒಂದು ವೇಳೆ ನೀವು e ಫೈಲಿಂಗ್/NSDL ಮೂಲಕ ಈ ಪ್ರಕ್ರಿಯೆಯನ್ನು ಮಾಡಿದ್ದರೆ ಇದಕ್ಕಾಗಿ ನೀವು ನಾಲ್ಕರಿಂದ ಐದು ದಿನಗಳ ಕಾಲ ಕಾಯಬೇಕಾಗುತ್ತದೆ. ನಂತರ ಬರದಿದ್ದರೆ ಈ ಕುರಿತಂತೆ ಮುಂದಿನ ಹೆಜ್ಜೆಯನ್ನು ಇಡಬಹುದು. ಮೊದಲಿಗೆ ನಿಮ್ಮ ಪ್ರಕ್ರಿಯೆಯೆನ್ನುವುದು ಕೋಡ್ 500 ರ ಅನ್ವಯವಾಗಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿ.
ಅಲ್ಲಿ ಕೂಡ ಸರಿ ಇದ್ದರೆ ಹೆಲ್ಪ್ ಡೆಸ್ಕ್ ನಲ್ಲಿ(Help Desk) ಇದರ ಕುರಿತಂತೆ ನೀವು ದೂರನ್ನು ದಾಖಲಿಸಬಹುದಾಗಿದೆ. ಹೀಗಾಗಿ ಈ ಬಾರಿಯ ಜೂನ್ 30ರ ನಡುವಿನ ಒಳಗೆ ನಿಮ್ಮ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ (PAN Card) ಅನ್ನು ಲಿಂಕ್ ಮಾಡಲು ಯಾವುದೇ ಪ್ರಯತ್ನವನ್ನು ಮಿಸ್ ಮಾಡಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಕಟ್ಟುನಿಟಿನ ಕ್ರಮಗಳು ಜಾರಿಗೆ ಆಗುತ್ತಿದ್ದು ಆ ಸಂದರ್ಭದಲ್ಲಿ ಪಾನ್ ಕಾರ್ಡ್ ಪ್ರಮುಖ ದಾಖಲೆಯಾಗಿ ಕಾಣಿಸಿಕೊಳ್ಳಲಿದ್ದು ಅದರ ನಿಷ್ಕ್ರಿಯಗೊಳ್ಳುವಿಕೆ ಎನ್ನುವುದು ನಿಮಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡಬಹುದಾಗಿದೆ. ಗಾಗಿ ಈ ಸಮಸ್ಯೆಯಿಂದ ದೂರವಿರಲು ಆದಷ್ಟು ಶೀಘ್ರವಾಗಿ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್(Pan Card) ಅನ್ನು ಲಿಂಕ್ ಮಾಡುವುದನ್ನು ಮಾತ್ರ ಮರೆಯಬೇಡಿ.